*ಸಿದ್ದಾಪುರ ಸೆ.೧೬ : ಚೆನ್ನಯ್ಯನ ಕೋಟೆ ಗ್ರಾ.ಪಂ ವ್ಯಾಪ್ತಿಯ ಚೆನ್ನಂಗಿ ಬಸವನಹಳ್ಳಿಯಲ್ಲಿ ಹುಲಿ ಸಂಚಾರ ಆತಂಕ ಮೂಡಿಸಿದೆ.
ದೇವಜನ ಪೂಣಚ್ಚ ಎಂಬವರ ಕಾಫಿ ತೋಟದ ಮೂಲಕ ಬಂದ ಹುಲಿ ಅಪ್ಪಯ್ಯ ಎಂಬವರ ಮನೆಯ ಮುಂಭಾಗದಿAದ ಹಾದು ಹೋಗಿದೆ. ತಿತಿಮತಿ ವಲಯದ ದೇವಮಚ್ಚಿ ಅರಣ್ಯದಿಂದ ಈ ಹುಲಿ ಬಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹುಲಿ ಹೆಜ್ಜೆ ಗುರುತುಗಳನ್ನು ಕಂಡು ಸ್ಥಳೀಯರು ಆತಂಕಗೊAಡಿದ್ದಾರೆ. ಬಾಡಗ, ಬಾಣಂಗಾಲ, ಘಟ್ಟದಳ್ಳ ಭಾಗದಲ್ಲೂ ಹುಲಿ ಸಂಚಾರವಿದ್ದು, ಗ್ರಾಮಸ್ಥರು ಹಾಗೂ ಕಾರ್ಮಿಕರಲ್ಲಿ ಆತಂಕ ಮೂಡಿದೆ. ಕಾಡಾನೆಗಳ ಉಪಟಳದಿಂದ ಸಾಕಷ್ಟು ತೊಂದರೆ ಅನುಭವಿಸಿರುವ ಇಲ್ಲಿನ ಜನ ಇದೀಗ ಹುಲಿ ಭಯದಿಂದ ಬೇಸತ್ತಿದ್ದಾರೆ.
ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದರೂ ಹುಲಿ ಮಾತ್ರ ಬೋನಿಗೆ ಬೀಳುತ್ತಿಲ್ಲ. ಅರಣ್ಯ ಸಿಬ್ಬಂದಿಗಳ ಕಣ್ತಪ್ಪಿಸಿ ಓಡಾಡುತ್ತಿರುವ ಹುಲಿಯಿಂದ ಅನಾಹುತ ಸಂಭವಿಸುವ ಮೊದಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.
-ಅಂಚೆಮನೆ ಸುಧಿ