ಮಡಿಕೇರಿ, ಸೆ. ೧೫: ಅಂರ್ರಾಷ್ಟಿçÃಯ ಕ್ರಿಕೆಟಿಗ ಕೊಡಗಿನ ಅಯ್ಯುಡ ರಾಬಿನ್ ಉತ್ತಪ್ಪ ಅವರು ಇದೀಗ ದಿಢೀರನೆ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಟ್ವಿಟರ್ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿರುವ ರಾಬಿನ್ ಅಚ್ಚರಿ ಮೂಡಿಸಿದ್ದಾರೆ. ಪ್ರಸ್ತುತ ಅಂರ್ರಾಷ್ಟಿçÃಯ ತಂಡದಲ್ಲಿ ಇಲ್ಲದೆ ಹಲವು ಸಮಯವಾಗಿದ್ದರೂ ಪ್ರತಿಷ್ಠಿತ ಐಪಿಎಲ್, ರಣಜಿ ಸೇರಿದಂತೆ ದೇಶೀಯ ಕ್ರಿಕೆಟ್ನಲ್ಲಿ ಇವರು ವಿಶೇಷ ಗಮನ ಸೆಳೆಯುತ್ತಿದ್ದರು.
ಐಪಿಎಲ್ನಲ್ಲಿ ಕೆಕೆಆರ್, ಸಿಎಸ್ಕೆ, ಆರ್ಸಿಬಿ, ರಾಜಸ್ಥಾನ್, ಪುಣೆ ಫ್ರಾಂಚೈಸಿಗಳನ್ನು ಪ್ರತಿನಿಧಿಸಿರುವ ರಾಬಿನ್ ಪ್ರಸ್ತುತ ಚೆನ್ನೆöÊ ಸೂಪರ್ಕಿಂಗ್ಸ್ ತಂಡದಲ್ಲಿದ್ದರು. ರಣಜಿ ಟ್ರೋಫಿ, ಇರಾನಿ ಟ್ರೋಫಿ ಸೇರಿದಂತೆ ಹಲವು ಪಂದ್ಯಾವಳಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು, ಪ್ರಮುಖ ಆಟಗಾರರಾಗಿದ್ದರು.
‘ಬ್ರಾಡ್ಕಾಸ್ಟಿಂಗ್ನತ್ತ ಒಲವು’
ಕ್ರಿಕೆಟ್ ವಿದಾಯ ಘೋಷಿಸಿದ ನಿರ್ಧಾರದ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ರಾಬಿನ್ ಉತ್ತಪ್ಪ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ. ಈ ತನಕದ ಸಾಧನೆಯ ಬಗ್ಗೆ ಸಾರ್ಥಕ್ಯ ಭಾವನೆ ಇರುವುದಾಗಿ ಹೇಳಿದ ಅವರು ಇತ್ತೀಚೆಗಷ್ಟೆ ತಮಗೆ ಎರಡನೆಯ ಮಗು ಜನಿಸಿದೆ. ಕೌಟುಂಬಿಕವಾಗಿ ಒಂದಷ್ಟು ಬೆರೆಯಲು ಬಯಸಿರುವುದಾಗಿ ಹೇಳಿದ್ದು, ಮುಂದಿನ ದಿನಗಳಲ್ಲಿ ಬ್ರಾಡ್ಕಾಸ್ಟಿಂಗ್ನತ್ತ (ವಿಶ್ಲೇಷಣೆಗಾರ) ಆಸಕ್ತಿ ತೋರುವುದಾಗಿ ತಿಳಿಸಿದರಲ್ಲದೆ, ಇದನ್ನು ತಾವು ‘ಎಂಜಾಯ್’ ಮಾಡುತ್ತಿರುವುದಾಗಿ ನುಡಿದರು.
ಕೊಡಗು ಜಿಲ್ಲೆಯಿಂದ ಅದರಲ್ಲೂ ಕ್ರೀಡೆಯಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿರುವ
(ಮೊದಲ ಪುಟದಿಂದ) ಕೊಡವ ಜನಾಂಗದವರಾಗಿ ಅಂರ್ರಾಷ್ಟಿçÃಯ ಕ್ರಿಕೆಟ್ನಲ್ಲಿ ಪ್ರಥಮ ಆಟಗಾರನಾಗಿ ದೇಶವನ್ನು ಪ್ರತಿನಿಧಿಸಿರುವ ಬಗ್ಗೆ ತಮಗೆ ಹೆಮ್ಮೆ ಇದೆ. ತಾವು ಕ್ರಿಕೆಟ್ನಲ್ಲಿ ದೇಶಪ್ರತಿನಿಧಿಸಿದ ಕೊಡಗಿನ ಪ್ರಥಮ ಆಟಗಾರರಾದರೆ ತಮ್ಮ ತಂದೆ ವೇಣು ಉತ್ತಪ್ಪ ಅವರು ಕೂಡ ಹಾಕಿಯಲ್ಲಿ ಕೊಡಗಿನ ಪ್ರಥಮ ಅಂರ್ರಾಷ್ಟಿçÃಯ ತೀರ್ಪುಗಾರರಾಗಿದ್ದರು. ಈ ಬಗ್ಗೆ ವಿಶೇಷವಾಗಿ ಹೆಮ್ಮೆಯ ಭಾವನೆ ಸಹಜವಾಗಿ ಬರುತ್ತದೆ ಎಂಬದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಆರಂಭದಲ್ಲಿ ಟೈಲರ್ ವೃತ್ತಿಯ ಮೂಲಕ ಕಷ್ಟದ ಬದುಕಿನಿಂದ ಮೇಲೆ ಬಂದ ತಮ್ಮ ತಾತÀ, ತಂದೆ, ಸೇನೆೆಯಲ್ಲಿ ಕರ್ನಲ್ ಆಗಿ ನಿವೃತ್ತರಾದ ದೊಡ್ಡಪ್ಪ ನೆನಪಾಗುತ್ತಾರೆ. ಈ ನಿಟ್ಟಿನಲ್ಲಿ ಕೌಟುಂಬಿಕವಾಗಿ ಬೆರೆಯುವುದು ಅಭಿಲಾಷೆಯಾಗಿದೆ ಎಂದರು.
ಪ್ರಸ್ತುತ ಬೆಂಗಳೂರಿನಲ್ಲಿ ಸ್ಪೋರ್ಟ್ಸ್ ಸ್ಕೂಲ್ ಒಂದರಲ್ಲಿ ಕ್ರಿಕೆಟ್ ಕೋಚಿಂಗ್ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಚಿಂತನೆ ಇದೆ. ಪ್ರಸ್ತುತ ಕ್ರಿಕೆಟ್ ಕ್ಷೇತ್ರ ತೀರಾ ಚ್ಯಾಲೆಂಜಿAಗ್ ಆಗಿದೆ. ಸಹನೆ, ಅವಿರತ ಶ್ರಮ - ಯುವ ಕ್ರಿಕೆಟಿಗರಲ್ಲಿ ಇರಬೇಕು. ಹಾರ್ಡ್ವರ್ಕ್ ಎಂಬದು ಅತೀ ಮುಖ್ಯ ಎಂದು ಅವರು ಕಿವಿಮಾತು ಹೇಳಿದರು. - ಶಶಿಸೋಮಯ್ಯ