(ಚAದ್ರಮೋಹನ್) ಕುಶಾಲನಗರ, ಸೆ. ೧೭: ನಕಲಿ ಚಾರ್ಜರ್ಗಳನ್ನು ಬಳಸಿ ಅಸಲಿ ಚಾರ್ಜರ್ಗಳನ್ನು ಬದಲಿಸುವ ಮೂಲಕ ಮೊಬೈಲ್ ಚಾರ್ಜರ್ ಕಂಪೆನಿಯೊAದಕ್ಕೆ ಲಕ್ಷಾಂತರ ರೂ.ಗಳ ವಂಚನೆ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ಕುಶಾಲನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ನಗದು, ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಮುಖ ಆರೋಪಿ ಚಾರ್ಜರ್ ಕಂಪೆನಿಯ ನೌಕರ, ಕುಶಾಲನಗರ ಕೊರಿಯರ್ ಸಂಸ್ಥೆಯ ನಾಲ್ವರು ಸೇರಿದಂತೆ ಒಟ್ಟು ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಲಕ್ಷಾಂತರ ನಗದು ಮತ್ತು ಸಾಮಗ್ರಿ ಸೇರಿದಂತೆ ೨೦ ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಕಂಪನಿಯೊAದರಿAದ ಕೊರಿಯರ್ ಮೂಲಕ ಕುಶಾಲನಗರದ ಮೊಬೈಲ್ ಅಂಗಡಿಗಳಿಗೆ ಸರಬರಾಜಾಗುತ್ತಿದ್ದ ಉತ್ತಮ ಗುಣಮಟ್ಟದ ಸಾವಿರಾರು ರೂ. ಬೆಲೆಬಾಳುವ ಮೊಬೈಲ್ ಚಾರ್ಜರ್ಗಳನ್ನು ಬದಲಿಸಿ ನಕಲಿ ಚಾರ್ಜರ್ಗಳನ್ನ ತಲುಪಿಸಲಾಗುತ್ತಿತ್ತು. ಕೆಲವೇ ದಿನಗಳಲ್ಲಿ ಚಾರ್ಜರ್ ಕೆಟ್ಟು ಹೋದ ಸಂದರ್ಭ ಅದನ್ನು ಹಿಂತಿರುಗಿಸಿ ಹೊಸ ಚಾರ್ಜರ್ನ್ನು ಮತ್ತೆ ಪಡೆಯುವ ನೆಪದಲ್ಲಿ ಕಂಪೆನಿಗೆ ಲಕ್ಷಾಂತರ ರೂ.ಗಳ ನಷ್ಟ ಉಂಟು ಮಾಡಿರುವ ಪ್ರಕರಣ ಇದಾಗಿದೆ. ಕೊರಿಯರ್ನಲ್ಲಿ ಬಂದ ಅಸಲಿ ಚಾರ್ಜರ್ಗಳನ್ನು ತೆಗೆದು ಮಾರಾಟ ಮಾಡುವ ಜಾಲ ಇದಾಗಿತ್ತು.
ಬೆಂಗಳೂರಿನಿAದ ಕುಶಾಲನಗರಕ್ಕೆ ನಿತ್ಯ ಉಡಾನ್ ಸಂಸ್ಥೆಯೊAದರ ಮೊಬೈಲ್ ಚಾರ್ಜರ್ ಕುಶಾಲಗರದ ಕೆಲವು ಮೊಬೈಲ್ ಅಂಗಡಿಗಳಿಗೆ ಡೆಲಿವರಿ ಎಂಬ ಹೆಸರಿನ ಕೊರಿಯರ್ ಸಂಸ್ಥೆ ಮೂಲಕ ಪಾರ್ಸೆಲ್ ಆಗುವ ಸಂದರ್ಭ ಕೊರಿಯರ್ನಲ್ಲಿ ಬಂದ ಬಾಕ್ಸ್ ಬದಲಿಸಿ ಕನಿಷ್ಟ ಮೌಲ್ಯದ ಚಾರ್ಜರ್ಗಳನ್ನು ಆ ಬಾಕ್ಸ್ಗಳಲ್ಲಿ ಹಾಕಿ ವಿಳಾಸಗಳಿಗೆ ತಲುಪಿಸುವ ದಂಧೆ ನಡೆಯುತ್ತಿತ್ತು. ಬಾಕ್ಸ್ನಿಂದ ಕಳವು ಮಾಡಿದ ಒರಿಜಿನಲ್ ಚಾರ್ಜರ್ಗಳನ್ನು ಮತ್ತೆ ಪ್ರಕರಣದ ಮುಖ್ಯ ಆರೋಪಿ ಹಿತೇಶ್ ರೈ ಎಂಬಾತ ವಾಪಸ್ ಪಡೆದುಕೊಂಡು ದಕ್ಷಿಣ ಕನ್ನಡ, ಕೇರಳ ಮತ್ತು ಕೊಡಗು ಜಿಲ್ಲೆಯ ಬೇರೆ ಬೇರೆ ಮೊಬೈಲ್ ಅಂಗಡಿಗಳಿಗೆ ಮಾರಾಟ ಮಾಡಿ ಲಕ್ಷಗಟ್ಟಲೆ ಹಣ ಗಳಿಸಿ ನಡೆಸಿ ಕುಶಾಲನಗರಕ್ಕೆ ಆಗಮಿಸಿ ಕೊರಿಯರ್ ಹುಡುಗರಿಗೆ ಅಲ್ಪ ಮೊತ್ತದ ಹಣ ನೀಡುತ್ತಿದ್ದ.
ಇದರಿಂದ ಉಡಾನ್ ಸಂಸ್ಥೆಗೆ ಬಹುತೇಕ ಮೊಬೈಲ್ ಚಾರ್ಜರ್ಗಳು ನಿರಂತರವಾಗಿ ರಿಪೇರಿಯಾಗಿ ಹೋಗುತ್ತಿದ್ದ ಬಗ್ಗೆ ಸಂಸ್ಥೆಯ ಮಾರುಕಟ್ಟೆ ಅಧಿಕಾರಿಗಳಿಗೆ ಸಂಶಯ ವ್ಯಕ್ತಗೊಂಡಿತ್ತು. ಪೊಲೀಸ್ ದೂರು ನೀಡಿ ತನಿಖೆ ಆರಂಭವಾದಾಗ ಉಡಾನ್ ಸಂಸ್ಥೆಯ ನೌಕರ ಹಿತೇಶ್ ರೈ ಕುಶಾಲನಗರದ ಕೊರಿಯರ್ ಸಂಸ್ಥೆಯೊAದರ ನೌಕರರ ಜೊತೆ ಶಾಮೀಲಾಗಿ ಈ ದಂಧೆ ನಿರಂತರವಾಗಿ ನಡೆಯುತ್ತಿದ್ದುದು ಬೆಳಕಿಗೆ ಬಂದಿದೆ. ಉಡಾನ್ ಸಂಸ್ಥೆಯ ಮೊಬೈಲ್ ಚಾರ್ಜರ್ಗೆ ತಲಾ ಎರಡು ಸಾವಿರ ದರವಿದ್ದು ಕೊರಿಯರ್ನಲ್ಲಿ ಬಂದ ಸಂದರ್ಭ ಅದನ್ನು ಬದಲಾಯಿಸಿ, ಬಾಂಬೆಯಿAದ ತರಿಸಿದ ಕೇವಲ ೨೫೦ ರೂಪಾಯಿ ಮೌಲ್ಯದ ನಕಲಿ ಚಾರ್ಜರ್ ಬಾಕ್ಸ್ಗಳನ್ನು ಅಂಗಡಿಗೆ ನೀಡಲಾಗುತ್ತಿತ್ತು. ಈ ದಂಧೆಯಲ್ಲಿ ಉಡಾನ್ ಸಂಸ್ಥೆಯ ನೌಕರ ಮಂಗಳೂರು ಮೂಲದ ಹಿತೇಶ್ ರೈ ಮುಖ್ಯ ಪಾತ್ರಧಾರಿ ಆಗಿದ್ದು, ಕುಶಾಲನಗರ, ಹೆಬ್ಬಾಲೆ, ಗುಡ್ಡೆ ಹೊಸೂರು, ರಂಗಸಮುದ್ರ ವ್ಯಾಪ್ತಿಯ ಕೊರಿಯರ್ ಹುಡುಗರು ಈ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದುದು ಬಹಿರಂಗಗೊAಡಿದೆ. ಇವರುಗಳು ಬೆಂಗಳೂರಿನಿAದ ಕೊರಿಯರ್ ಮೂಲಕ ಕುಶಾಲನಗರಕ್ಕೆ ಬಂದ ಉಡಾನ್ ಸಂಸ್ಥೆಯ ಚಾರ್ಜರ್ಗಳನ್ನು ಮತ್ತೆ ವಂಚಕ ಹಿತೇಶ್ ರೈಗೆ ಕಳುಹಿಸಿಕೊಡುವ ಕೆಲಸವನ್ನು ಮಾಡುತ್ತಿದ್ದರು ಎನ್ನಲಾಗಿದೆ.
ಈ ದಂಧೆಯಿAದ ೨೦ ಲಕ್ಷಕ್ಕೂ ಅಧಿಕ ಹಣವನ್ನು ಮುಖ್ಯ ಆರೋಪಿ ಹಿತೇಶ್ ರೈ ಗಳಿಸಿದ್ದು, ಪೊಲೀರು ಪ್ರಮುಖ ಆರೋಪಿ ಹಿತೇಶ್ ರೈ ಸೇರಿದಂತೆ ಧರ್ಮ, ವಿನಯ್, ಕೀರ್ತನ್, ತೀರ್ಥೇಶ್ ಎಂಬ ಒಟ್ಟು ಐದು ಮಂದಿಯನ್ನು ಬಂಧಿಸಿ ಅವರಿಂದ ಲಕ್ಷಾಂತರ ಹಣ ಮತ್ತು ಒರಿಜಿನಲ್ ಮತ್ತು ನಕಲಿ ಮೊಬೈಲ್ ಚಾರ್ಜರ್ಗಳನ್ನು ವಶಪಡಿಸಿಕೊಂಡಿದ್ದಾರೆ.