ಮಡಿಕೇರಿ, ಸೆ. ೧೭: ಜಿಲ್ಲೆಯ ರೈತರು, ಕಾಫಿ ಬೆಳೆ ಆಧಾರದಲ್ಲಿ ಪಡೆಯುತ್ತಿರುವ ಬೆಳೆ ಸಾಲದ ಫಾರಂ-೩ರ ನೋಂದಣಿಯಲ್ಲಿನ ಮುದ್ರಾಂಕ ಶುಲ್ಕ ವಿನಾಯಿತಿಯ ವಿಚಾರವು ಇದೀಗ ಸರಕಾರದ ಪರಿಶೀಲನೆಯಲ್ಲಿದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅವರು ತಿಳಿಸಿದ್ದಾರೆ. ಈ ಬಗ್ಗೆ ಅವರು ಪತ್ರಿಕಾ ಹೇಳಿಕೆಯ ಮೂಲಕ ಜಿಲ್ಲೆಯ ರೈತರು ಮತ್ತು ಸಹಕಾರ ಸಂಘಗಳಿಗೆ ವಿವರವಿತ್ತಿದ್ದಾರೆ.
ಡಿ.ಸಿ.ಸಿ. ಬ್ಯಾಂಕ್ ಮತ್ತು ಜಿಲ್ಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಫ್ರೂಟ್ಸ್ ತಂತ್ರಾAಶದಲ್ಲಿನ ರೈತರು ಹೊಂದಿರುವ ವಿಶಿಷ್ಟ ಗುರುತಿನ ಸಂಖ್ಯೆಗೆ ಅನುಗುಣವಾಗಿ ಸ್ಥಿರಾಸ್ತಿ ಮತ್ತು ಸಾಲದ ಮಾಹಿತಿಯನ್ನು ಅಳವಡಿಸಿ ಉಪನೋಂದಾಣಾಧಿಕಾರಿಗಳ ಕಛೇರಿಗೆ ನಮೂನೆ-೩ರ ದಾಖಲಾತಿ ಸಂಬAಧ ತಂತ್ರಾAಶದ ಮೂಲಕ ಸಲ್ಲಿಸಿದ ಸಂದರ್ಭದಲ್ಲಿ ನೋಂದಣಿ ಮಹಾಪರೀಕ್ಷಕರು ಮತ್ತು ಮುದ್ರಾಂಕ ಆಯುಕ್ತರ ಸೂಚನೆಯಂತೆ
(ಮೊದಲ ಪುಟದಿಂದ) ಉಪ ನೋಂದಣಾಧಿಕಾರಿಗಳು ಕಾಫಿ ಬೆಳೆಗೆ ಮುದ್ರಾಂಕ ಶುಲ್ಕದಿಂದ ವಿನಾಯಿತಿ ಇಲ್ಲವೆಂದು ಹೇಳುವುದರೊಂದಿಗೆ ಕಾಫಿ ಬೆಳೆ ಆಧಾರಿತ ಬೆಳೆ ಸಾಲವನ್ನು ಪಡೆಯುವ ಜಿಲ್ಲೆಯ ರೈತರಿಗೆ ಸಮಸ್ಯೆಯಾಗಿತ್ತು. ರೈತರ ಫಾರಂ-೩ರ ನೋಂದಣಿ ಸ್ಥಗಿತಗೊಂಡು - ರೈತರು ಪಡೆಯುವ ಬೆಳೆ ಸಾಲದ ಶೇ.೧ ರಷ್ಟು ಮುದ್ರಾಂಕ ಶುಲ್ಕವನ್ನು ಪಾವತಿಸುವ ಮುಖಾಂತರ ಸಾಮಾನ್ಯ ಅಡಮಾನದೊಂದಿಗೆ ಬೆಳೆ ಸಾಲವನ್ನು ವಿತರಿಸಲಾಗುತ್ತಿದ್ದು, ರೈತರ ಸಂಕಷ್ಟವನ್ನು ಅರಿತು - ಜಿಲ್ಲೆಯ ರೈತರು ಮತ್ತು ಸಹಕಾರ ಸಂಘಗಳ ಹಿತದೃಷ್ಟಿಯಿಂದ - ಇತರೆ ಆಹಾರ ಬೆಳೆಗಳಿಗೂ ಇರುವಂತೆ - ಕಾಫಿ ಬೆಳೆಗೂ ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿಯನ್ನು ಕೊಡಿಸಿಕೊಡು ವಂತೆ ಡಿ.ಸಿ.ಸಿ. ಬ್ಯಾಂಕಿನ ಮೂಲಕ ಸಂಬAಧಿಸಿದವರಿಗೆ ಮನವಿ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ರೈತರು ಮತ್ತು ಸಹಕಾರ ಸಂಘಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಮಾಡಿಕೊಂಡ ಮನವಿಯ ಹಿನ್ನೆಲೆಯಲ್ಲಿ ಹಾಗೂ ಮುಖ್ಯಮಂತ್ರಿಗಳು ಪ್ರಸ್ತಾವನೆಯನ್ನು ಕಂದಾಯ ಇಲಾಖೆಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಿರುವುದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಇದರಂತೆ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಯವರು “ಏಚಿveಡಿi-ಈಖUIಖಿS ಸಂಯೋಜಿತ ತಂತ್ರಾAಶದಲ್ಲಿ ಸೂಕ್ತ ಮಾರ್ಪಾಡುಗಳನ್ನು ಅಳವಡಿಸಿ, ಕಾಫಿ ಬೆಳೆಗಾರರು ಬರೆದುಕೊಡುವ ಫಾರಂ-೩ ಡಿಕ್ಲರೇಷನ್ಗಳಿಗೆ ಮುದ್ರಾಂಕ ಶುಲ್ಕ ಆಕರಣೆಯಿಂದ ವಿನಾಯಿತಿ ನೀಡಲು” ರಾಜ್ಯ ಸರ್ಕಾರದ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತರಿಗೆ ಪತ್ರ ಬರೆದು - ಸಂಬAಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸೂಚಿಸಿರುವುದಲ್ಲದೆ - ಅವಶ್ಯವಿದ್ದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ನಿರ್ದೇಶನಗಳನ್ನು ನೀಡಿರುತ್ತಾರೆ ಎಂಬುದಾಗಿ ಅವರು ತಿಳಿಸಿದ್ದಾರೆ.
ಸರ್ಕಾರಕ್ಕೆ ಮಾಡಿಕೊಂಡಿರುವ ಮನವಿಯನ್ನು ಉಲ್ಲೇಖಿಸಿ ಇತರೆ ಎಲ್ಲಾ ಬೆಳೆಗಳಿಗೂ ಇರುವಂತೆ ಕಾಫಿ ಬೆಳೆಗೂ ಮುದ್ರಾಂಕ ಶುಲ್ಕ ವಿನಾಯಿತಿ ನೀಡಲು ಅನುಕೂಲವಾಗುವಂತೆ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಕೃಷಿ ಇಲಾಖೆಯು ಹೊರಡಿಸಿರುವ ಬೆಳೆವಾರು ಪಟ್ಟಿಯಲ್ಲಿ “ಕಾಫಿ ಬೆಳೆ” ನಮೂದಾಗದೇ ಇರುವುದರಿಂದ “ಕಾಫಿ” ಬೆಳೆಯನ್ನು ಪಟ್ಟಿಯಲ್ಲಿ ಸೇರಿಸುವಂತೆ ಕೃಷಿ ಸಚಿವರಿಗೆ ದಿನಾಂಕ ೧೬.೦೯.೨೦೨೨ ರಂದು ಬರೆದಿರುವುದಾಗಿಯೂ ಬಾಂಡ್ ಗಣಪತಿ ತಿಳಿಸಿದ್ದಾರೆ.