ಗೋಣಿಕೊಪ್ಪಲು, ಸೆ.೧ ೭: ಗ್ರಾಮದ ಜನತೆ ಕಾಡಾನೆಗಳ ಉಪಟಳದಿಂದಾಗಿ ಗ್ರಾಮವನ್ನೇ ತೊರೆಯಬೇಕಾದ ಅನಿವಾರ್ಯ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಎದುರಾಗಲಿದೆ. ಕಾಡಾನೆಗಳನ್ನು ಸಾಕಲು ರೈತರ ಕಾಫಿ ತೋಟವನ್ನು ಅರಣ್ಯ ಇಲಾಖೆಯು ಬಳಕೆ ಮಾಡಿಕೊಳ್ಳುತ್ತಿದೆ. ಕಾಡಾನೆಯ ತೊಂದರೆಯಿAದಾಗಿ ತೋಟದ ಫಸಲುಗಳು ರೈತರ ಕೈ ಸೇರುತ್ತಿಲ್ಲ. ಎಕರೆಗೆ ೪೦ ಚೀಲ ಕಾಫಿ ಬೆಳೆಯುತ್ತಿದ್ದೇವು. ಇದೀಗ ೧೫ ಚೀಲಕ್ಕೆ ತಲುಪಿದೆ. ಬೆಳೆಗಳೆಲ್ಲವು ಕಾಡಾನೆಗಳ ಹಾಗೂ ಕಾಡಂದಿಗಳ ಪಾಲಾಗುತ್ತಿವೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕೆಂದು ಕಳತ್ಮಾಡು ಗ್ರಾಮದ ರೈತರಾದ ಕೊಲ್ಲಿರ ಗೋಪಿ ಚಿಣ್ಣಪ್ಪ, ಕೊಲ್ಲೀರ ಧರ್ಮಜ, ಕೊಲ್ಲೀರ ಉಮೇಶ್, ಮೊಳ್ಳೇರ ಭೀಮಯ್ಯ ಸೇರಿದಂತೆ ಅನೇಕ ಗ್ರಾಮದ ಮುಖಂಡರು ಒತ್ತಾಯಿಸಿದರು.

ವೀರಾಜಪೇಟೆ ತಾಲೂಕು, ಅಮ್ಮತ್ತಿ ಹೋಬಳಿಯ ಕಳತ್ಮಾಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜನೆ ಗೊಂಡಿದ್ದ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮ ಗಳಲ್ಲೊಂದಾದ ‘ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ’ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೊಡಗು ಜಿಲ್ಲಾಧಿಕಾರಿ ಗಳಾದ ಡಾ.ಬಿ.ಸಿ ಸತೀಶ್‌ರವರಿಗೆ ಗ್ರಾಮಸ್ಥರು ಪ್ರಶ್ನೆಗಳ ಸುರಿಮಳೆಗೈದರು. ಕಾಡಾನೆ ವಿಚಾರವೇ ಗಂಟೆಗAಟೆಲೇ ಚರ್ಚೆ ನಡೆಯಿತು. ಅನಾದಿ ಕಾಲ ದಿಂದಲೂ ಪೂರ್ವಜರು ನೀಡಿರುವ ಭೂಮಿಯಲ್ಲಿ ಕಾಫಿ, ಅಡಿಕೆ, ತೆಂಗು, ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇದೀಗ ರೈತರ ಜೀವನ ಅತ್ಯಂತ ಕ್ಲಿಷ್ಟಕರವಾಗಿದೆ.

ಫಸಲು ಭರಿತ ಕಾಫಿ ಗಿಡಗಳು ಸೇರಿದಂತೆ ಅಡಿಕೆ, ತೆಂಗು ಹಾಗೂ ಇತರೆ ಬೆಳೆಗಳನ್ನು ನಾಶ ಮಾಡುವ ಕಾಡಾನೆಗಳು ನೀಡುತ್ತಿರುವ ತೊಂದರೆ ಊಹಿಸಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಯು ನೀಡುತ್ತಿರುವ ಪರಿಹಾರ ಗುಲಗಂಜಿಯAತಾಗಿದೆ ಎಂದು ಅಸಮಾಧಾನವನ್ನು ರೈತರು ಹೊರ ಹಾಕಿದರು.

ಈ ವೇಳೆ ಸಭೆಯಲ್ಲಿದ್ದ ಅರಣ್ಯ ಇಲಾಖೆಯ ಡಿಎಫ್‌ಒ ಅಜ್ಜಿಕುಟ್ಟೀರ ಪೂವಯ್ಯ ರೈತರ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ನಡೆಸಿದರು. ಈ ಭಾಗದಲ್ಲಿರುವ ಕಾಡಾನೆಗಳ ಗುಂಪಿಗೆ ಕಾಲರ್‌ಐಡಿ ಅಳವಡಿಸಲಾಗಿದೆ. ಇದನ್ನು ಏಕಾಏಕಿ ಅರಣ್ಯಕ್ಕೆ ಅಟ್ಟುವ ಕಾರ್ಯ ಕಷ್ಟವಾಗಲಿದೆ. ಆದರು ಇದನ್ನು ಗಂಭೀರವಾಗಿ ಪರಿಗಣಿಸಿ ಕಾಡಾನೆಗಳನ್ನು ಓಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಸಮಜಾಯಿಷಿಕೆ ನೀಡಿದರು. ಅಧಿಕಾರಿಗಳ ಉತ್ತರಕ್ಕೆ ಅಸಮಧಾನ ಗೊಂಡ ಗ್ರಾಮಸ್ಥರು ರೈತರಿಗೆ ಸೋಲಾರ್ ಬೇಲಿ ಅಳವಡಿಸಿಕೊಳ್ಳಲು ನೀಡುವ ಸಬ್ಸಿಡಿ ಹಣ ಇನ್ನೂ ಕೂಡ ರೈತರ ಕೈ ಸೇರಿಲ್ಲ. ಕೇವಲ ಹಾರಿಕೆಯ ಉತ್ತರದಿಂದ ಏನು ಪ್ರಯೋಜನವಿಲ್ಲ. ಜಿಲ್ಲಾಧಿಕಾರಿಗಳು ಈ ಬಗ್ಗೆ ಮಧ್ಯೆ ಪ್ರವೇಶಿಸಿ ಶಾಶ್ವತ ಕಲ್ಪಿಸುವ ನಿಟ್ಟಿನಲ್ಲಿ ರೈತರ ತೋಟಗಳ ರಕ್ಷಣೆಗೆ ಸೋಲಾರ್ ಬೇಲಿ ಅಳವಡಿಸಲು ಶೇ.೧೦೦ರಷ್ಟು ಸಬ್ಸಿಡಿಯಲ್ಲಿ ಹಣವನ್ನು ಮಂಜೂರು ಮಾಡಬೇಕು. ಹಾಗೂ ಕಾಫಿ, ತೆಂಗು, ಅಡಿಕೆ ಗಿಡಗಳು ಕಾಡಾನೆಗಳಿಂದ ನಾಶಗೊಂಡಾಗ ಇವುಗಳಿಗೆ ಪ್ರತಿ ಗಿಡಕ್ಕೆ ಕನಿಷ್ಟ ೨೫ ಸಾವಿರ ಹಣವನ್ನು ಇಲಾಖೆಯು ನೀಡಬೇಕು. ಹಾಗಾದಲ್ಲಿ ಮಾತ್ರ ರೈತನ ಬೆಳೆಗಳಿಗೆ ಬೆಲೆ ಸಿಕ್ಕಿದಂತಾಗುತ್ತದೆ ಎಂದರು.

ರೈತರ ಮಾತಿಗೆ ಉತ್ತರಿಸಿದ ಡಿಎಫ್‌ಒ ಪೂವಯ್ಯ,ರೈತರ ಬೆಳೆಗಳು ನಷ್ಟಗೊಂಡಾಗ ಹೆಚ್ಚಿನ ಪರಿಹಾರ ನೀಡುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಸಮಸ್ಯೆಗೆ ಪರಿಹಾರ ಸಿಗಬಹುದೆಂದು ಭರವಸೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಮಾತನಾಡಿ, ತಿಂಗಳಿಗೆ ಎರಡು ಬಾರಿ ಅರಣ್ಯ ಇಲಾಖೆಯ ಅಧಿಕಾರಿಗ ಳೊಂದಿಗೆ ಸಭೆ ನಡೆಸುತ್ತೇನೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಸರ್ಕಾರಕ್ಕೆ ರೈತರ ಪರವಾಗಿ ಪ್ರಸ್ತಾವನೆಯನ್ನು ಕಳುಹಿಸಿಕೊಡ ಲಾಗುತ್ತದೆ.

ರೈತರು ಇಲಾಖೆಯೊಂದಿಗೆ ಸಹಕರಿಸಬೇಕೆಂದರು. ಕಾಡಾನೆಯ ವಿಚಾರಗಳನ್ನು ಬದಿಗೊತ್ತಿದ ರೈತರು ತಮ್ಮ ತೋಟದಲ್ಲಿ ಬೆಳೆದಿರುವ ಮರ ಗಳನ್ನು ನಮ್ಮ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೂರೆಂಟು ನಿಯಮಗಳನ್ನು ಇಲಾಖೆಯು ಜಾರಿಗೆ ತಂದಿದೆ. ಇದರಿಂದ ರೈತರಿಗೆ ಇಲಾಖೆಯಿಂದ ಕಿರುಕುಳ ಆರಂಭವಾಗಿದೆ. ಈ ಬಗ್ಗೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಕೊಡಗು ಜಿಲ್ಲೆಯಲ್ಲಿ ಮರ ಕಡಿಯುವ ವಿಚಾರದಲ್ಲಿ ಕಠಿಣವಾದ ನಿಯಮವಿದೆ. ಈ ಬಗ್ಗೆ ಅಧಿಕಾರಿ ಗಳೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

ತೋಟದಲ್ಲಿ ಮಳೆಗಾಲದಲ್ಲಿ ಬಿದ್ದಿರುವ ಮರವನ್ನು ಕಡಿಯುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ರೈತರಿಗೆ ಕಿರುಕುಳ ನೀಡುತ್ತಾರೆ, ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುತ್ತಾರೆ. ರೈತರು ಕಳ್ಳರಂತೆ ಬದುಕುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಅಧಿಕಾರಿಗಳು ಈ ಬಗ್ಗೆ ಕಿರಿಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ತಮ್ಮ ತೋಟದಲ್ಲಿರುವ ತಾವೇ ಬೆಳೆಸಿದ ಮರಗಳನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುವ ಸಂದರ್ಭ ರೈತರಿಗೆ ತೊಂದರೆ

(ಮೊದಲ ಪುಟದಿಂದ) ನೀಡದಂತೆ ಸೂಚನೆ ನೀಡಬೇಕೆಂದು ರೈತರು ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಹವಾಲು ಸಲ್ಲಿಸಿದರು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿ ರೈತರೊಂದಿಗೆ ಉತ್ತಮವಾಗಿ ನಡೆದುಕೊಳ್ಳುವಂತೆ ಸೂಚನೆ ನೀಡಲಾಗುವುದೆಂದು ಡಿಎಫ್‌ಒ ಪೂವಯ್ಯ ಭರವಸೆ ನೀಡಿದರು.

ಕಳೆದ ಮೂರು ವರ್ಷಗಳ ಹಿಂದೆ ಗ್ರಾಮಕ್ಕೆೆ ಬೆಳಗಿನ ಹಾಗೂ ಸಂಜೆಯ ವೇಳೆಯಲ್ಲಿ ಆಗಮಿಸುತ್ತಿದ್ದ ಸರ್ಕಾರಿ ಬಸ್ಸು ಸೇವೆ ಇದೀಗ ಸ್ಥಗಿತಗೊಂಡಿದೆ. ಇದರಿಂದ ದಿನನಿತ್ಯ ಓಡಾಡುವ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ತೀರÀ ಅನಾನುಕೂಲ ವಾಗಿರುತ್ತದೆ. ಕೂಡಲೇ ಈ ಹಿಂದೆ ಇದ್ದಂತಹ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಿಗೆ ಮನವಿ ಮಾಡಿದರು.

ಗ್ರಾಮದಲ್ಲಿ ನಿವೇಶನ ರಹಿತ ಅನೇಕ ಬಡ ಕುಟುಂಬಗಳು ಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ವಿಶೇಷ ಗಮನ ಹರಿಸಿ ಕಳತ್ಮಾಡು ಗ್ರಾಮದ ಸರ್ಕಾರಿ ಜಮೀನಿನಲ್ಲಿ ನಿವೇಶನ ರಹಿತರಿಗೆ ನಿವೇಶನವನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಈಗಾಗಲೇ ಜಿಲ್ಲಾಡಳಿತ ವತಿಯಿಂದ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಜಿಲ್ಲೆಯ ವಿವಿಧ ಭಾಗದಲ್ಲಿ ೩೫೯ ಎಕರೆ ಜಮೀನನ್ನು ಜಿಲ್ಲಾಡಳಿತ ಕಾಯ್ದಿರಿಸಿದೆ.ಇದನ್ನು ಹಂತ ಹಂತವಾಗಿ ನಿವೇಶನವಾಗಿ ಪರಿವರ್ತಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲಾಗುವುದು ಎಂದರು. ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಂದ್ಯAಡ ಶಾಂತಿ ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಕೊಲ್ಲೀರ ಧನು, ನಿವೃತ್ತ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಸೇರಿದಂತೆ ಗ್ರಾಮ ಪಂಚಾಯಿತಿಯ ಸದಸ್ಯರುಗಳು, ವಿವಿಧ ಭಾಗದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು,ಉಪತಹಶೀಲ್ದಾರ್‌ಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಅರ್ಚನ ಭಟ್, ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಜಿಲ್ಲಾಮಟ್ಟದ ಅಧಿಕಾರಿ ಗಳಾದ ಮಮತ, ಶ್ರೀನಿವಾಸ್, ಶಬನಾ ಬೇಗಂ ಸೇರಿದಂತೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೆ.ಸಿ. ಅಪ್ಪಣ್ಣ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಮಡಿಕೇರಿ ತಹಶೀಲ್ದಾರ್ ಪ್ರವೀಣ್, ಬಿ.ಇಒ ಶ್ರೀಶೈಲ ಬಿಳಗಿ, ಸಮಾಜ ಕಲ್ಯಾಣಾಧಿಕಾರಿ ಪ್ರೀತಿ ಚಿಕ್ಕಮಾದು, ಹೊಸೂರು ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್ ಗೌಡ, ಮತ್ತಿತರರು ಪಾಲ್ಗೊಂಡಿದ್ದರು. ವೀರಾಜಪೇಟೆ ತಾಲೂಕು ತಹಶೀಲ್ದಾರ್ ಅರ್ಚನ ಭಟ್ ಸ್ವಾಗತಿಸಿ, ಶಾಲಾ ವಿದ್ಯಾರ್ಥಿಗಳು ನಾಡ ಗೀತೆ ಹಾಡಿದರು. ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಜಿಲ್ಲಾಧಿಕಾರಿಗಳು ಗಿಡಗಳನ್ನು ನೆಟ್ಟರು. ವಿವಿಧ ಇಲಾಖೆಯ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಿಳಿಯಪಡಿಸ ಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.

ಗೋಮಾಳ ಉಳಿವಿಗೆ ಮನವಿ

ವೀರಾಜಪೇಟೆ ತಾಲೂಕಿನ ಕಳತ್ಮಾಡುವಿನಲ್ಲಿ ನೊಂದಾಯಿತ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯ ನಿರ್ವಹಿಸುತ್ತಿದೆ. ಹೆಚ್ಚಿನ ರೈತ ಮಹಿಳೆಯರು ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೈನುಗಾರಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಮದಲ್ಲಿರುವ ೫ ಎಕರೆ ಗೋಮಾಳವನ್ನು ಇತರ ಉದ್ದೇಶಕ್ಕೆ ಬಳಸದೇ, ಗೋಮಾಳವಾಗಿಯೆ ಉಳಿಸಿಕೊಡುವಂತೆ ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದರು. ಈ ಬಗ್ಗೆ ಕ್ರಮ ವಹಿಸುವ ಭರವಸೆ ನೀಡಿದರು.

ಗ್ರಾಮದಲ್ಲಿ ಹೆಚ್ಚು ಕಲ್ಲು ಗಣಿಗಾರಿಕೆ ಚಟುವಟಿಕೆ ನಡೆಯುತ್ತಿರುವುದರಿಂದ, ಗ್ರಾಮದ ಮುಖ್ಯ ರಸ್ತೆಯು ಇಕ್ಕಟ್ಟಾಗಿದ್ದು, ಕಲ್ಲುಸಾಗಟ ಮಾಡುವ ಲಾರಿಯ ಓಡಾಟದ ದಟ್ಟಣೆಯಿಂದ ರಸ್ತೆಯು ಹಾಳಾಗಿ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿರುವುದರಿಂದ ಈ ಮುಖ್ಯ ರಸ್ತೆಯನ್ನು ಅಗಲೀಕರಿಸಿ ಉತ್ತಮ ರಸ್ತೆಯನ್ನಾಗಿ ನಿರ್ಮಿಸಿಕೊಡಬೇಕು. ಅಲ್ಲದೆ ಮುಖ್ಯ ರಸ್ತೆಗೆ ಹೊಂದಿಕೊAಡಿರುವ ಗ್ರಾಮದ ಬಹಳಷ್ಟು ಗ್ರಾಮೀಣ ರಸ್ತೆಗಳು ಮಳೆಯಿಂದಾಗಿ ಹಾನಿಗಿಡಾಗಿದ್ದು, ಇವುಗಳ ದುರಸ್ಥಿಗೂ ಕ್ರಮ ವಹಿಸಬೇಕೆಂದು ಗಮನ ಸೆಳೆದರು.

ವಿದ್ಯುತ್ ಉಪಕೇಂದ್ರ

ಗ್ರಾಮದಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಈ ಭಾಗದಲ್ಲಿ ೧೨ ಗ್ರಾಮಗಳು ಒಳಗೊಂಡಿವೆ. ವಿದ್ಯುತ್ ಶೇಖರಣಾ ಮತ್ತು ವಿತರಣಾ ಉಪ ಕೇಂದ್ರ ಸ್ಥಾಪನೆಗೆ ಇಂಧÀನ ಇಲಾಖೆಯಿಂದ ಮಂಜೂರಾತಿ ಯಾಗಿದೆ. ಯೋಜನೆಯ ಅನುಷ್ಠಾನ ಕ್ಕಾಗಿ ೨.೦೦ ಎಕರೆ ಜಮೀನು ಅವಶ್ಯಕತೆ ಇರುವುದರಿಂದ ಕಳತ್ಮಾಡು ಗ್ರಾಮದಲ್ಲಿ ಸರ್ಕಾರದ ೩೦ ಎಕರೆ ಜಮೀನು ಖಾಲಿ ಇದ್ದು, ಇದರಲ್ಲಿ ಎರಡು ಎಕರೆ ಜಮೀನು ವಿದ್ಯುತ್ ಉಪಕೇಂದ್ರ ತೆರೆಯಲು ಕಾಯ್ದಿರಿಸ ಬೇಕೆಂದು ಮನವಿ ಮಾಡಿದರು. ಇದರಿಂದ ಸಣ್ಣ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಸುತ್ತಮುತ್ತಲಿನ ೧೨ಕ್ಕೂ ಹೆಚ್ಚು ಹಳ್ಳಿಗಳಿಗೆÀ ನಿರಂತರ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದರು.

ಕೆಲ ಕಾಲ ಗೊಂದಲ

ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸುತ್ತಮುತ್ತಲಿನ ಗ್ರಾಮದ ಜನತೆ ಅದರಲ್ಲೂ ವಿಶೇಷವಾಗಿ ಗಿರಿಜನರು ಹಾಗೂ ಕೆಲವು ಮುಖಂಡರು ಸಭೆಗೆ ಆಗಮಿಸಿದ್ದರು. ಜಿಲ್ಲಾಧಿಕಾರಿಗಳು ಸಭೆಯನ್ನು ಆರಂಭಿಸುತ್ತಿದ್ದAತೆಯೇ ಗ್ರಾಮದ ಮುಖಂಡರಾದ ಕೊಲ್ಲೀರ ಗೋಪಿ ಚಿಣ್ಣಪ್ಪ, ಗ್ರಾಮದ ಸಮಸ್ಯೆಗ¼ ಬಗ್ಗೆ ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದರು. ಈ ವೇಳೆ ಕಾಡಾನೆಯ ಉಪಟಳದ ಬಗ್ಗೆ ನೊಂದಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ದ ಧ್ವನಿ ಎತ್ತಿದ್ದರು. ಈ ವಿಚಾರವು ಒಂದು ಗಂಟೆಗೂ ಅಧಿಕ ಸಮಯ ಒಂದೇ ವಿಷಯದಲ್ಲಿ ಚರ್ಚೆ ಆರಂಭವಾಯಿತು.

ಇದರಿಂದ ಅಸಮಧಾನಗೊಂಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕಾವೇರಿ ಅವರು ವೇದಿಕೆಯ ಮುಂಭಾಗಕ್ಕೆ ಆಗಮಿಸಿ ಸಭೆಯು ಕೇವಲ ಒಂದು ವರ್ಗಕ್ಕೆ ಮೀಸಲಾಗಿದೆಯ.? ಇಲ್ಲಿ ಮತ್ಯಾರು ಮಾತನಾಡುವ ಅವಕಾಶ ಇಲ್ಲವಾ? ಎಂದು ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದರು. ಈ ವೇಳೆ ಸಭೆಯು ಕೆಲ ಕಾಲ ಗೊಂದಲದ ಗೂಡಾಗಿ ಪರಿವರ್ತನೆಯಾಯಿತು. ಸಭೆಯ ಬಗ್ಗೆ ಆಕ್ಷೇಪಿಸಿದ ಕಾವೇರಿ ಸಭೆ ನಡೆಸಲು ನಿರ್ಧರಿಸಿದ ಸ್ಥಳವು ಸೂಕ್ತವಲ್ಲ ಇದರಿಂದ ಬಡವರಿಗೆ ನ್ಯಾಯ ಸಿಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಬಳಿ ಪ್ರಸ್ತಾಪಿಸಿದರು.

ಇದರಿಂದ ಅಸಮಧಾನಗೊಂಡ ಕೆಲ ಗ್ರಾಮಸ್ಥರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಪರಿಣಾಮ ಕಾವೇರಿ ಹಾಗೂ ಗ್ರಾಮಸ್ಥರ ವಾಗ್ವಾದ ನಡೆಯಿತು. ಬಳಿಕ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

(ಚಿತ್ರ ವರದಿ, ಹೆಚ್.ಕೆ. ಜಗದೀಶ್)