ಗೋಣಿಕೊಪ್ಪ ವರದಿ, ಸೆ. ೧೫: ವಿ. ಬಾಡಗ ಗ್ರಾಮದ ಶ್ರೀಜೋಡು ಭಗವತಿ ಮತ್ತು ಮಹಾದೇವರ ದೇವಸ್ಥಾನ ಹಾಗೂ ಅಯ್ಯಪ್ಪ ದೇವಸ್ಥಾನದ ದೇವರಕಾಡಿನಲ್ಲಿ ಮರೋಡಿ ಯುವಕ ಸಂಘ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸಹಯೋಗದೊಂದಿಗೆ `ದೇವರ ಕಾಡಿಗೆ ದೂಪಾಲಂಕಾರ' ಎಂಬ ಪ್ರಕೃತಿ ಹಾಗೂ ಸಂಸ್ಕೃತಿಯನ್ನು ಬೆಸೆಯುವ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕರ್ನಾಟಕ ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಕಾಡು ಜಾತಿಯ ಧೂಪ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮಸ್ಥರು ಪಾಲ್ಗೊಂಡಿದ್ದರು.