ಮುಳ್ಳೂರು, ಸೆ. ೧೫: ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಬಡ್ಲಿಯ ಜೈನ ಸಮಾಜದ ವತಿಯಿಂದ ನೀಡಲಾಗುತ್ತಿರುವ ಶ್ರೀ ಜ್ಞಾನೇಶ್ವರ ಆದರ್ಶ ಶಿಕ್ಷಕ ಪ್ರಶಸ್ತಿಯು ೨೦೨೨ನೇ ಸಾಲಿನಲ್ಲಿ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಡಿ. ಸುಜಲಾದೇವಿ ಅವರಿಗೆ ಲಭಿಸಿದೆ.

ಈ ಪ್ರಶಸ್ತಿಯು ಪ್ರಮಾಣ ಪತ್ರ, ಬೆಳ್ಳಿಯ ಪದಕ ಮತ್ತು ನಗದು ಬಹುಮಾನವನ್ನು ಹೊಂದಿರುತ್ತದೆ. ಪ್ರಶಸ್ತಿಯನ್ನು ತಾ. ೧೮ ರಂದು ಬೆಳಗಾವಿಯಲ್ಲಿ ನಡೆಯಲಿರುವ ಚಾತುರ್ಮಾಸದ ಕಾರ್ಯಕ್ರಮದಲ್ಲಿ ಆಚಾರ್ಯ ಶ್ರೀ ಜ್ಞಾನೇಶ್ವರ ಮುನಿ ಮಹಾರಾಜರು ಪ್ರಧಾನ ಮಾಡಲಿರುವರೆಂದು ಜೈನ ಸಮಾಜದ ಮುಖ್ಯಸ್ಥ ಡಾ. ನಾಗರಾಜ ಮರಣ್ಣೆವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.