ಬೆAಗಳೂರು, ಸೆ. ೧೫: ಪ್ರೊ. ಮಾಧವ್ ಗಾಡ್ಗೀಳ್ ವರದಿ ಹಾಗೂ ಡಾ.ಕಸ್ತೂರಿ ರಂಗನ್ ವರದಿ ಆಧರಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (ಎಂಒಇಎಫ್) ‘ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷö್ಮ ಪ್ರದೇಶ' ಎಂದು ಕರಡು ಅಧಿಸೂಚನೆ ಪ್ರಕಟಿಸಿತ್ತು. ಈ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (ಪಿಐಎಲ್) ಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಎಂಒಇಎಫ್ ಹೊರಡಿಸಿ ಈ ಕರಡು ಅಧಿಸೂಚನೆಯು ಸಂವಿಧಾನದ ೨೧ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ರೈತರ ಜೀವನ ಮತ್ತು ಜೀವನೋಪಾಯದ ಹಕ್ಕನ್ನು ಉಲ್ಲಂಘಿಸಿದೆ. ಹೀಗೆಂದು ಆರೋಪಿಸಿದ ಕೇರಳ ಮೂಲದ ಸರ್ಕಾರೇತರ ಸಂಸ್ಥೆ ಕಾರ್ಶಕ ಶಬ್ದಂ (ರೈತರ ಧ್ವನಿ) ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಆದರೆ, ಈ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ.
ಸೂಕ್ಷö್ಮ ವಲಯ ಘೋಷಣೆ ಬಳಿಕ ಇದೇನಾದರೂ ಜಾರಿಗೊಂಡರೆ ಕೊಡಗಿನಲ್ಲಿಯೂ ಅನೇಕ ಗ್ರಾಮಾಂತರ ಪ್ರದೇಶಗಳಲ್ಲಿನ ರೈತರು, ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಕೊಡಗಿನಲ್ಲಿಯೂ ತೀವ್ರ ಆಕ್ಷೇಪ ವ್ಯಕ್ತಗೊಂಡಿತ್ತು. ಇದರ ಜಾರಿ ವಿರುದ್ಧ ಬಹುತೇಕ ಗ್ರಾಮ ಪಂಚಾಯ್ತಿ ಆಡಳಿತಗಳು ನಿರ್ಣಯ ಕೈಗೊಂಡು ರಾಜ್ಯ ಸರಕಾರಕ್ಕೆ ತಮ್ಮ ಪ್ರತಿರೋಧಗಳನ್ನು ಕಳುಹಿಸಿದ್ದವು. ರಾಜ್ಯದಲ್ಲಿ ಸೂಕ್ಷö್ಮ ವಲಯ ಜಾರಿ ವಿರುದ್ಧ ಅಲೆ ಎದ್ದಾಗ ಎಚ್ಚೆತ್ತ್ತುಗೊಂಡ ಸರಕಾರ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಕೇಂದ್ರ ಪರಿಸರ ಇಲಾಖೆಯ ನಿರ್ಣಯವನ್ನು ಒಪ್ಪುವುದಿಲ್ಲ ಎಂದು ನಿರ್ಧಾರ ಕೈಗೊಂಡು ಕೇಂದ್ರಕ್ಕೆ ಕಳುಹಿಸಿತ್ತು.
ಈ ಕುರಿತು ಮರು ಪರಿಶೀಲಿಸಿ ಸೂಕ್ಷö್ಮ ವಲಯ ಆದೇಶ ಜಾರಿಯನ್ನು ಕೈಬಿಡಲು ಮನವಿ ಮಾಡಿತ್ತು. ರೈತರಿಗೆ, ಗ್ರಾಮೀಣ ಜನರಿಗೆ ಸಮಸ್ಯೆಯುಂಟಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಸೂಕ್ಷö್ಮ ವಲಯ ಆದೇಶವನ್ನು ಜಾರಿಗೊಳಿಸದಂತೆ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಸರ್ವಾನುಮತ ದಿಂದ ಮನವಿ ಮಾಡಿತ್ತು. ಆದರೆ, ಕೇಂದ್ರ ಸರಕಾರವು ಈ ಬಗ್ಗೆ ಸ್ಪಂದಿಸದೆ ಮೌನ ವಹಿಸಿದೆ. ಈ ನಡುವೆ ಪಿಐಎಲ್ ಅರ್ಜಿಯೊಂದನ್ನು ಕೇಂದ್ರ ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿರುವುದು ಗ್ರಾಮೀಣ ಜನತೆಗೆ ಮತ್ತೆ ಸಮಸ್ಯೆಯಾಗಿದೆ. ಬೆಳೆಗಾರರು, ರೈತರಿಗೆ ಆಘಾತಕಾರಿಯಾಗಿದೆ. ಕೇಂದ್ರ ಸರಕಾರದ ಮೌನವೂ ಇಲ್ಲಿ ಆತಂಕ ಮೂಡಿಸಿದೆ. ಬಹುತೇಕ ಸೂಕ್ಷö್ಮ ವಲಯ ಘೋಷಣೆ ಜಾರಿಯಾಗುವುದು ಖಚಿತವಾದಂತೆ ಕಂಡುಬAದಿದೆ.