ಸೋಮವಾರಪೇಟೆ, ಸೆ. ೧೫: ತಾಲೂಕಿನ ಮಾದಾಪುರ ಸಮೀಪದ ಜಂಬೂರು ಬಾಣೆಯಲ್ಲಿ ಮಹಿಳೆ ಯೋರ್ವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಇಂದು ನಡೆದಿದ್ದು, ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ಮಾದಾಪುರ ಜಂಬೂರು ಬಾಣೆಯ ನಿವಾಸಿ ಸಾಹಿರ (೪೦) ಎಂಬಾಕೆಯನ್ನು ಅದೇ ಗ್ರಾಮದ ಪೊನ್ನಪ್ಪ ಎಂಬವರ ಪುತ್ರ ತಂಬುಕುತ್ತೀರ ಪೂವಯ್ಯ ಅಲಿಯಾಸ್ ಬೊಳ್ಳು (೫೦) ಹತ್ಯೆಗೈದು ನಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಸಾಹಿರ ಮತ್ತು ಪೂವಯ್ಯ ನಡುವೆ ಅನೈತಿಕ ಸಂಬAಧವಿದ್ದು, ಇದೇ ವಿಚಾರಕ್ಕೆ ಗಲಾಟೆ ನಡೆದು ಹತ್ಯೆ ಮಾಡಲಾಗಿದೆ ಎಂದು ಸಂಶಯಿಸಲಾಗಿದೆ. ಈರ್ವರು ಮಕ್ಕಳ ತಾಯಿಯಾಗಿರುವ ಸಾಹಿರ ಅವರು ಪತಿಯಿಂದ ಬೇರ್ಪಟ್ಟು ಜಂಬೂರು ಬಾಣೆ ಗ್ರಾಮದಲ್ಲಿ ತನ್ನ ಮಕ್ಕಳೊಂದಿಗೆ ವಾಸವಿದ್ದರು.
ಇಂದು ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಸಾಹಿರಾ ಅವರ ಮನೆಗೆ ಪೂವಯ್ಯ ಆಗಮಿಸಿದ ಸಂದರ್ಭ, ಮನೆಯೊಳಗೆ ಅಪರಿಚಿತ ವ್ಯಕ್ತಿಯನ್ನು ಕಂಡು ಕುಪಿತಗೊಂಡಿದ್ದಾನೆ. ಇದೇ ಸಿಟ್ಟಿನಲ್ಲಿ ಹೊರಬಂದು ಕೆಲ ಸಮಯದ ನಂತರ ಚಾಕುವಿ ನೊಂದಿಗೆ ಮತ್ತೆ ಸಾಹಿರಾಳ ಮನೆಗೆ ತೆರಳಿ, ಒಳಭಾಗದಿಂದ ಬಾಗಿಲು ಭದ್ರಪಡಿಸಿದ್ದಾನೆ.
ಮನೆಯೊಳಗಿದ್ದ ಸಾಹಿರಾ ಳೊಂದಿಗೆ ಜಗಳ ತೆಗೆದು ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭ ತನ್ನ ಬಳಿಯಿದ್ದ ಚಾಕುವಿನಿಂದ ಕುತ್ತಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ಇರಿದಿದ್ದಾನೆ. ಘಟನೆಯಿಂದ ರಕ್ತದ ಮಡುವಿನಲ್ಲಿ ಬಿದ್ದ ಸಾಹಿರಾಳ ಪ್ರಾಣ ಪಕ್ಷಿ ಹಾರಿದೆ.
ಇದಾದ ನಂತರ ಹಿಂಬಾಗಿಲಿ ನಿಂದ ಮಾದಾಪುರ ಪಟ್ಟಣಕ್ಕೆ ಆಗಮಿಸಿ, ನಂತರ ಸ್ಥಳೀಯ ಪೊಲೀಸ್ ಉಪಠಾಣೆಗೆ ತೆರಳಿ ಶರಣಾಗಿದ್ದಾನೆ.
(ಮೊದಲ ಪುಟದಿಂದ) ಘಟನೆ ನಡೆಯುವ ಸಂದರ್ಭ ಹೊರಹೋಗಿದ್ದ ಸಾಹಿರಾಳ ಪುತ್ರ ನಂತರ ಮನೆಗೆ ಆಗಮಿಸಿದ ಸಂದರ್ಭ ಕೃತ್ಯ ಬೆಳಕಿಗೆ ಬಂದಿದೆ. ಗಾಯಾಳುವನ್ನೂ ತಕ್ಷಣ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಷ್ಟರಲ್ಲಾಗಲೇ ಮೃತಪಟ್ಟಿರುವ ಬಗ್ಗೆ ವೈದ್ಯರು ಖಚಿತಪಡಿಸಿದ್ದಾರೆ.
ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್, ಠಾಣಾಧಿಕಾರಿ ರಮೇಶ್‌ಕುಮಾರ್, ಮಾದಾಪುರ ಎಎಸ್‌ಐ ಪೊನ್ನಪ್ಪ ಸೇರಿದಂತೆ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ವಿವರ ಪಡೆದಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಘಟನೆಗೆ ಸಂಬAಧಿಸಿದAತೆ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.