ಗೋಣಿಕೊಪ್ಪಲು, ಸೆ. ೧೫: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ರಸ್ತೆಯ ಎರಡು ಬದಿಯಲ್ಲಿ ಕಾಂಕ್ರೀಟ್ ಬಳಸಿ ರಸ್ತೆಯನ್ನು ಅಗಲೀಕರಣ ಗೊಳಿಸಲಾಗುತ್ತಿದೆ. ಕಳೆದ ಒಂದು ತಿಂಗಳ ಹಿಂದೆ ಲೋಕೋಪಯೋಗಿ ಇಲಾಖೆಯು ನಗರದಲ್ಲಿ ಒಂದು ಬದಿಯನ್ನು ಕಾಂಕ್ರಿಟ್ ಬಳಸಿ ಅಗಲೀಕರಣ ಮಾಡಿತ್ತು. ಇದರಿಂದ ವಾಹನ ನಿಲುಗಡೆಗೆ ಅನುಕೂಲವಾಗಿತ್ತು. ಇದೀಗ ರಸ್ತೆಯ ಇನ್ನೊಂದು ಬದಿಗೆ ಕಾಂಕ್ರೀಟ್ ರಸ್ತೆ ಮಾಡಲು ಇಲಾಖೆಯು ಕ್ರಮ ಕೈಗೊಂಡಿದೆ.

ಮಳೆ ಬಿಡುವು ನೀಡಿದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸಿದ್ದೇಗೌಡ ಹಾಗೂ ಅಭಿಯಂತರ ನವೀನ್ ಸ್ಥಳ, ಕಾಮಗಾರಿ ಪರಿಶೀಲನೆ ನಡೆಸಿದರು. ರಸ್ತೆ ಅಗಲೀಕರಣದಿಂದ ವಾಹನ ನಿಲುಗಡೆಗೆ ಅನುಕೂಲವಾಗಲಿದ್ದು ವಾಹನ ಸಂಚಾರಕ್ಕೂ ಅನುಕೂಲವಾಗಲಿದೆ. ಪಟ್ಟಣದ ಎರಡು ಭಾಗದಲ್ಲಿಯೂ ಕಾಂಕ್ರಿಟ್ ಬಳಸಿ ರಸ್ತೆ ನಿರ್ಮಾಣವಾಗುತ್ತಿರುವುದರಿಂದ ನಾಗರಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಿನ್ನಡೆಯಾಗುತ್ತಿದ್ದು ನಿಧಾನ ಗತಿಯಲ್ಲಿ ಕೆಲಸ ಸಾಗುತ್ತಿದೆ. ಮುಖ್ಯ ರಸ್ತೆಯ ಎರಡು ಬದಿ ಅಗಲೀಕರಣವಾಗುತ್ತಿರುವುದರಿಂದ ಮುಂದಿನ ದಸರಾ ಉತ್ಸವದಲ್ಲಿ ದಶಮಂಟಪಗಳು ಸಂಚರಿಸಲು ಹೆಚ್ಚಿನ ಅನುಕೂಲವಾಗಲಿದೆ.