ವೀರಾಜಪೇಟೆ, ಸೆ. ೧೬: ತಲಕಾವೇರಿ ಸಂಕ್ರಮಣ ಸನ್ನಿಹಿತವಾಗುತ್ತಿರುವ ಈ ಸಂದರ್ಭ ಸರಕಾರ ಎಲ್ಲಾ ಕಾನೂನು ತೊಡಕನ್ನು ನಿವಾರಿಸಿ ತಲಕಾವೇರಿ ಭಾಗಮಂಡಲಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಬೇಕು, ಇಲ್ಲವೆಂದರೆ ಮುಂದಿನ ಅಕ್ಟೋಬರ್ ತಿಂಗಳಲ್ಲಿ ನಡೆಯುವ ತುಲಾ ಸಂಕ್ರಮಣಕ್ಕಾದರೂ ತಾತ್ಕಾಲಿಕ ಸಮಿತಿಯನ್ನು ರಚಿಸಬೇಕು ಎಂದು ವೀರಾಜಪೇಟೆ ಅಖಿಲ ಕೊಡವ ಸಮಾಜ ಒತ್ತಾಯಿಸಿದೆ.

ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸರಕಾರ ಗಮನ ಹರಿಸಬೇಕಿದೆ ಈ ಹಿಂದಿನAತೆ ಕ್ಷೇತ್ರದಲ್ಲಿ ತುಲಾ ಸಂಕ್ರಮಣದಿAದ ಪತ್ತಾಲೋದಿಯವರೆಗೆ ಅನ್ನದಾನ ನಡೆಯಬೇಕು ಹಾಗೂ ಸ್ಥಳೀಯ ಭಕ್ತರಿಗೆ ತೀರ್ಥ ಕುಂಡಿಕೆಯ ಎದುರು ಇರುವ ಕೊಳದಲ್ಲಿ ಯಾವುದೇ ನಿರ್ಬಂಧ ಹಾಕದೆ ತೀರ್ಥ ಸ್ನಾನಕ್ಕೆ ಅವಕಾಶ ಮಾಡಿಕೊಡಬೇಕಿದೆ ಎಂದು ಸಭೆ ಒತ್ತಾಯಿಸಿದೆ.

ವೀರಾಜಪೇಟೆ ಅಖಿಲ ಕೊಡವ ಸಮಾಜದ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು.

ತಲಕಾವೇರಿಯಲ್ಲಿ ಕೂಡಲೇ ತುಲಾಸಂಕ್ರಮಣಕ್ಕೆ ದಾರಿಯುದ್ದಕ್ಕೂ ಬೆಳಕಿನ ವ್ಯವಸ್ಥೆ ಸೇರಿದಂತೆ ಸುಗಮ ವಾಹನ ಸಂಚಾರಕ್ಕೆ ರಸ್ತೆ ಸರಿಪಡಿಸುವ ಕೆಲಸ ಮಾಡಬೇಕಿದೆ, ಹಾಗೆ ಇನ್ನು ಮುಂದೆ ನಿರಂತರವಾಗಿ ಭಾಗಮಂಡಲದಲ್ಲಿ ಪಿಂಡ ಪ್ರದಾನ ಮಾಡಿದವರಿಂದ ಹಿಡಿದು ನೈಜ ಕಾವೇರಿ ಭಕ್ತರು ಹಳೆಯ ಪದ್ಧತಿಯಂತೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನದ ಬಳಿಕ ತಲಕಾವೇರಿಯ ತೀರ್ಥಕುಂಡಿಕೆಯ ಸಮೀಪದ ಕೊಳದಲ್ಲಿ ತೀರ್ಥ ಸ್ನಾನ ಮಾಡಿ ಮೇಲಿನ ಪರಿವಾರ ದೇವರುಗಳ ಹತ್ತಿರ ಹೋಗಲು ಅವಕಾಶ ಮಾಡಿಕೊಡಬೇಕಿದೆ ಎಂದು ಸಭೆ ಒತ್ತಾಯಿಸಿದೆ.

ಇತ್ತೀಚಿನ ದಿನಗಳಲ್ಲಿ ಕುಂಡಿಕೆಯ ಸಮೀಪದ ತೀರ್ಥ ಸ್ನಾನಕ್ಕೆ ಮೊದಲೆ ‘ಮೇಲೆ ಹೋಗಿ ಕೆಳಗೆ ಬನ್ನಿ’ ಎಂದು ಅಲ್ಲಿನ ಭದ್ರತಾ ಸಿಬ್ಬಂದಿಗಳು ಸ್ಥಳೀಯ ಭಕ್ತರೊಂದಿಗೆ ವಾಗ್ವಾದಕ್ಕೆ ಇಳಿದಿರುವ ಬಗ್ಗೆ ಹಲವಾರು ದೂರುಗಳು ಕೇಳಿ ಬಂದಿದೆ, ಹೊರಗಿನ ಭಕ್ತರು ಬೇಕಾದರೆ ಮೇಲೆ ಹೋಗಿ ಬರಲಿ ಆದರೆ ಸ್ಥಳೀಯ ಭಕ್ತರನ್ನು ತಡೆದು ಈ ರೀತಿ ಕಿರಿಕಿರಿ ಮಾಡುವುದು ಸರಿಯಲ್ಲ ಎಂದು ಸಭೆ ಎಚ್ಚರಿಸಿದೆ. ತುಲಾಸಂಕ್ರಮಣದAದು ಗೊಂದಲ ಸೃಷ್ಟಿಸುವ ಬದಲು ಹಬ್ಬಕ್ಕೆ ಹದಿನೈದು ದಿನಗಳ ಮುಂಚೆಯೇ ಎಲ್ಲವನ್ನು ಸರಿಪಡಿಸಿಕೊಂಡು ಭಕ್ತರಿಗೆ ಮಾಹಿತಿಯನ್ನು ನೀಡಬೇಕಿದೆ, ಕಾವೇರಿ ತುಲಾಸಂಕ್ರಮಣ ಎನ್ನುವುದು ಸ್ಥಳೀಯ ಭಕ್ತರ ಧಾರ್ಮಿಕ ಭಾವನೆಯ ಸಂಕೇತವಾಗಿದೆ.

ಇದಕ್ಕೆ ಅದರದೇ ಆದ ಹಲವಾರು ಕಟ್ಟುಪಾಡುಗಳಿವೆ. ಇಲ್ಲಿ ವಸ್ತç ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಇದು ಸ್ಥಳೀಯ ಭಕ್ತರ ಹಬ್ಬವೇ ಹೊರತು ಸರಕಾರದ, ರಾಜಕಾರಣಿಗಳ ಅಥವಾ ಅಧಿಕಾರಿಗಳ ಜಾತ್ರೆಯಾಗಬಾರದು ಎಂದು ಸಭೆ ಒತ್ತಾಯಿಸಿದೆ.

ಸಭೆಯಲ್ಲಿ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಕಾರ್ಯದರ್ಶಿ ಅಮ್ಮುಣಿಚಂಡ ರಾಜ ನಂಜಪ್ಪ, ಖಜಾಂಚಿ ಮಂಡೇಪAಡ ಸುಗುಣ, ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ, ಹಿರಿಯ ಜನಪದ ತಜ್ಞರಾದ ಬಾಚರಣಿಯಂಡ ಅಪ್ಪಣ್ಣ, ನಾಪೋಕ್ಲು ಕೊಡವ ಸಮಾಜ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನು ಕುಮಾರ್, ಯೂಕೋ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ವೀರಾಜಪೇಟೆಯ ಅಪ್ಪಚ್ಚಕವಿ ಪ್ರತಿಮೆ ಸ್ಥಾಪನೆಯ ಸಂಚಾಲಕ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಸೇರಿದಂತೆ ವಿವಿಧ ಕೊಡವ ಸಮಾಜ ಅಧ್ಯಕ್ಷರುಗಳು ಹಾಗೂ ವಿವಿಧ ಕೊಡವ ಸಂಘಟನೆಗಳ ಪ್ರಮುಖರು ಸೇರಿದಂತೆ ಅಖಿಲ ಕೊಡವ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.