ಮಡಿಕೇರಿ, ಸೆ. ೧೫: ಕಳೆದ ೪೭ ವರ್ಷಗಳಿಂದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ಶ್ರೀ ಕೋದಂಡ ರಾಮ ದೇವಾಲಯ ದಸರಾ ಮಂಟಪ ಸಮಿತಿಯು ೪೮ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ. ಈ ಬಾರಿ ಷಣ್ಮುಖನಿಂದ ತಾರಕಾಸುರನ ವಧೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಕೋದಂಡ ರಾಮ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಹೆಚ್.ಎನ್. ತಿಮ್ಮಯ್ಯ ತಿಳಿಸಿದ್ದಾರೆ.

ಎರಡು ಟ್ರಾö್ಯಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್‌ನ ಸೆಲ್ವ ಸಮಿತಿ ಸದಸ್ಯರೆ ಪ್ಲಾಟ್‌ಫಾರಂ ನಿರ್ಮಾಣ ಮಾಡಲಿದ್ದಾರೆ. ಟ್ರಾö್ಯಕ್ಟರ್ ಸೆಟ್ಟಿಂಗ್ಸ್ನ್ನು ಮಡಿಕೇರಿಯ ಹೇಮರಾಜ್ ಮತ್ತು ತಂಡ ಮಾಡಲಿದ್ದು, ೧೮ ಕಲಾಕೃತಿಗಳನ್ನು ಬಳಸಲಾಗುತ್ತಿದೆ. ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಮತ್ತು ಸಮಿತಿಯ ಸದಸ್ಯರು ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಕಲಾಕೃತಿಗಳಿಗೆ ಚಲನವಲನಗಳನ್ನು ಸಮಿತಿ ಸದಸ್ಯರೆ ನೀಡಲಿದ್ದಾರೆ. ಧ್ವನಿವರ್ಧಕವನ್ನು ಬೆಂಗಳೂರಿನ ಟ್ರೆಡಿಷನಲ್ ಈವೆಂಟ್ ಸಂಸ್ಥೆ ಒದಗಿಸಲಿದ್ದು, ಸ್ಟುಡಿಯೋ ಲೈಟ್ಸ್ ವ್ಯವಸ್ಥೆಯನ್ನು ಗೌತಮ್ ತಂಡ ಮಾಡಲಿದೆ. ಸಮಿತಿದ ಪ್ರಧಾನ ಕಾರ್ಯದರ್ಶಿ ನಂಜುAಡ, ಉಪಾಧ್ಯಕ್ಷ ಚಂದ್ರಶೇಖರ್, ಖಜಾಂಚಿ ಕುಶಾಲ್ ಇವರುಗಳು ಮಂಟಪದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಒಟ್ಟು ೧೬ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದೆ. ಜನಾಕರ್ಷಣೆ ಪಡೆಯುವುದರ ಜೊತೆಗೆ ಬಹುಮಾನಕ್ಕೂ ಪೈಪೋಟಿ ನೀಡಲಾಗುತ್ತದೆ ಎಂದು ತಿಮ್ಮಯ್ಯ ಮಾಹಿತಿ ನೀಡಿದ್ದಾರೆ. -ಉಜ್ವಲ್ ರಂಜಿತ್