ಶನಿವಾರಸಂತೆ, ಸೆ. ೧೫: ಶನಿವಾರಸಂತೆ ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಜಿ.ಜಿ. ಪರಮೇಶ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಸಂಘದ ವ್ಯವಸ್ಥಾಪಕ ಎನ್.ಪಿ. ಶಿವರಾಜ್ ಸಂಘದ ವರದಿ ಮಂಡಿಸಿ, ಶನಿವಾರಸಂತೆ ಎಪಿಸಿಎಂಎಸ್ ವ್ಯಾಪ್ತಿಯಲ್ಲಿ ೨೦೨೧-೨೨ನೇ ಸಾಲಿನಲ್ಲಿ ಹೊಸ ಸೇರ್ಪಡೆ ಸದಸ್ಯರು ಸೇರಿದಂತೆ ಒಟ್ಟು ೧೨೨೯ ಮಂದಿ ಸದಸ್ಯರಿದ್ದು, ಸಂಘದ ಸದಸ್ಯರ ಷೇರು ಹಣದಂತೆ ಪ್ರಗತಿ ಶೇ. ೦.೧ಕ್ಕೆ ಏರಿಕೆಯಾಗಿದೆ ಎಂದರು. ಸಂಘವು ೨೦೨೧-೨೨ನೇ ಸಾಲಿನಲ್ಲಿ ಗೊಬ್ಬರ ಮಾರಾಟದಲ್ಲಿ ರೂ. ೫ ಕೋಟಿ ೭೪ ಲಕ್ಷದ ೬೦ ಸಾವಿರದ ೯೯೨ ವಹಿವಾಟು ನಡೆಸಿದರೆ ಕ್ರಿಮಿನಾಶಕ ಔಷಧಿ ಮಾರಾಟದಿಂದ ರೂ. ೬೧ ಲಕ್ಷದ ೯ ಸಾವಿರದ ೯೦೨ ವಹಿವಾಟು ನಡೆಸಿರುತ್ತದೆ. ನಿಯಂತ್ರಿತ ಆಹಾರ ಪದಾರ್ಥಗಳ ಮಾರಾಟದಿಂದ ರೂ. ೧ ಲಕ್ಷದ ೩೭ ಸಾವಿರದ ೮೩೦ ವಹಿವಾಟು ನಡೆಸಿದೆ. ವ್ಯವಸಾಯ ಹತ್ಯಾರು ಮಾರಾಟದಲ್ಲಿ ರೂ. ೮ ಲಕ್ಷದ ೮೪ ಸಾವಿರದ ೯೬೩, ಫೀಡ್ಸ್ ಮಾರಾಟ ರೂ. ೬ ಲಕ್ಷದ ೧೬ ಸಾವಿರದ ೨೧೩ ಹಾಗೂ ಕೋವಿ ತೋಟ ರೂ. ೩ ಲಕ್ಷದ ೪೨ ಸಾವಿರದ ೬೬೦ ಇತರ ವ್ಯಾಪಾರ ಮಾರಾಟ ರೂ. ೪೯ ಲಕ್ಷದ ೫೫ ಸಾವಿರದ ೭೭೮ ಸೇರಿದಂತೆ ಒಟ್ಟು ರೂ. ೭,೦೫,೦೮,೩೪೧ ವಹಿವಾಟು ನಡೆಸುವ ಮೂಲಕ ಸಂಘವು ೨೦೨೧-೨೨ನೇ ಸಾಲಿಗೆ ರೂ. ೧೭ ಲಕ್ಷದ ೭೯ ಸಾವಿರದ ೮೬೫ ನಿವ್ವಳ ಲಾಭಗಳಿಸಿದೆ ಎಂದರು.

ಸAಘದ ಪ್ರಗತಿ ಕುರಿತು ಸಹಕಾರಿ ಸದಸ್ಯರು ಸಭೆಯಲ್ಲಿ ಚರ್ಚಿಸಿದರು. ಸದಸ್ಯತ್ವ ಮಾಡಿಕೊಳ್ಳಲು ವಾಸ ದೃಢೀಕರಣ ಪತ್ರ ಕೇಳುತ್ತಿರುವುದು ಸರಿಯಲ್ಲ ಇದರಿಂದ ಅನೇಕರಿಗೆ ಸದಸ್ಯತ್ವ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪುರುಷೋತ್ತಮ್ ಹಾಗೂ ಸುಬ್ಬಪ್ಪ ಹೇಳಿದರು. ಸದಸ್ಯತ್ವ ಮಾಡಿಕೊಳ್ಳಲು ವಾಸ ದೃಢೀಕರಣ ಪತ್ರ ಮಾಡಿಕೊಡಲೇಬೇಕು ಇಲ್ಲವಾದಲ್ಲಿ ಸಂಘಕ್ಕೆ ಮುಂದಿನ ದಿನಗಳಲ್ಲಿ ತೊಂದರೆಯಾಗುತ್ತದೆ. ಸಂಘದ ಹಿತದೃಷ್ಟಿಯಿಂದ ಅನಿವಾರ್ಯವಾಗಿ ದೃಢೀಕರಣ ಪಡೆಯಲಾಗುತ್ತಿದೆ ಎಂದು ನಿರ್ದೇಶಕರಾದ ಶರತ್ ಶೇಖರ್ ಹಾಗೂ ಸಹಕಾರಿಗಳಾದ ಕೆ.ವಿ. ಮಂಜುನಾಥ್ ಮತ್ತು ಕಾಂತರಾಜ್ ಹೇಳಿದರು.

ಇದೀಗ ಸಂಘವು ನಿರ್ಮಾಣ ಮಾಡುತ್ತಿರುವ ನೂತನ ಕಟ್ಟಡದಲ್ಲಿ ಕಾಫಿ ಬೆಳೆಗಾರರ ಸಂಘಕ್ಕೆ ಒಂದು ಕೊಠಡಿಯನ್ನು ರಿಯಾಯಿತಿ ಬಾಡಿಗೆಗೆ ನೀಡಿ ಸಹಕರಿಸಿ ಎಂದು ಬೆಳೆಗಾರರ ಸಂಘದ ಕಾರ್ಯದರ್ಶಿ ಉಮಾಶಂಕರ್ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರೀಯಿಸಿದ ಅಧ್ಯಕ್ಷ ಪರಮೇಶ್, ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಜಿ.ಜಿ. ಪರಮೇಶ್, ಸಂಘವನ್ನು ಕಟ್ಟಿ ಬೆಳೆಸಿದ ಹಿರಿಯ ಸಹಕಾರಿಗಳು, ಸಿಬ್ಬಂದಿ ಹಾಗೂ ಸಹಕಾರಿ ಸದಸ್ಯರ ಸಹಕಾರದಿಂದ ಸಂಘವು ಪ್ರಗತಿಯನ್ನು ಸಾಧಿಸುತ್ತಿದೆ. ಸಂಘದ ಮಹಾಸಭೆಗಳಲ್ಲಿ ಸಂಘದ ಸಹಕಾರಿ ಸದಸ್ಯರು ಭಾಗವಹಿಸಿ ಸಂಘದ ಪ್ರಗತಿಗಾಗಿ ಪ್ರಶ್ನೆ ಮಾಡುವ ಪರಿಪಾಠವನ್ನು ಬೆಳೆಸಿಕೊಂಡರೆ ಸಂಘವು ಅಭಿವೃದ್ಧಿ ಹೊಂದುತ್ತದೆ ಎಂದರು.

ಸAಘದ ಅಭಿವೃದ್ಧಿಗೆ ಸಂಬAಧಪಟ್ಟAತೆ ಸಹಕಾರಿಗಳಾದ ಎಸ್.ಪಿ. ರಾಜು, ಪುಟ್ಟಸ್ವಾಮಿ, ಮೋಹನ್, ನಂಜಪ್ಪ, ಶನಿವಾರಸಂತೆ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷö್ಮಣ್, ಮಹಮ್ಮದ್ ಕನ್ನಾ ಮುಂತಾದವರು ಚರ್ಚಿಸಿದರು.

ಈ ಸಂದರ್ಭ ಸಂಘದ ವತಿಯಿಂದ ಸಹಕಾರಿ ಸದಸ್ಯರ ಮಕ್ಕಳು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಸ್. ಮಂಜುನಾಥ್, ನಿರ್ದೇಶಕರಾದ ಎಸ್.ಸಿ. ಶರತ್‌ಶೇಖರ್, ಡಿ.ಬಿ. ಧರ್ಮಪ್ಪ, ಹೆಚ್.ವಿ. ಮಹಾಂತಪ್ಪ, ಹೆಚ್.ಸಿ. ದೀಪಕ್, ಗಿರಿಜಾಕರುಣಾಕರ್, ದೇವಾಂಬಿಕ ಮಹೇಶ್, ಎಸ್.ಜೆ. ರವಿಕುಮಾರ್, ಜೆ.ಬಿ. ಪರಮೇಶ್, ಹೆಚ್.ಎನ್. ಕುಮಾರ್ ನಾಯಕ್, ರಾಮಯ್ಯ, ಸರಕಾರದ ಪರ ನಾಮನಿರ್ದೇಶಕ ಎಸ್.ಎಸ್. ಸಾಗರ್ ಮುಂತಾದವರಿದ್ದರು.