ಸೋಮವಾರಪೇಟೆ, ಸೆ. ೧೬: ಇಲ್ಲಿನ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ೨೦೨೨-೨೩ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವ ಸ್ಪರ್ಧೆಯಲ್ಲಿ ಚೌಡ್ಲು ಸಾಂದೀಪನಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಬಹುಮಾನಗಳನ್ನು ಗಳಿಸಿದ್ದಾರೆ.
ಒಂದರಿAದ ನಾಲ್ಕನೇ ತರಗತಿ ವಿಭಾಗದ ಕನ್ನಡ ಕಂಠ ಪಾಠದಲ್ಲಿ ಹಿತೈಷಿ ಕೆ.ಜೆ. ಪ್ರಥಮ, ಇಂಗ್ಲೀಷ್ ಕಂಠ ಪಾಠದಲ್ಲಿ ರಿಷಿಕ್ ಗಿರೀಶ್ (ಪ್ರ), ಕಥೆ ಹೇಳುವ ಸ್ಪರ್ಧೆಯಲ್ಲಿ ಹೇಮಾ ಸಿ.ಪಿ. (ದ್ವಿ) ಆಶುಭಾಷಣದಲ್ಲಿ ಪುರಸ್ಕೃತಿ ಜೆ. ಶೆಟ್ಟಿ (ದ್ವಿ), ಅಭಿನಯ ಗೀತೆಯಲ್ಲಿ ಜೆ. ಚಿಂತನಾ (ದ್ವಿ), ಭಕ್ತಿಗೀತೆ, ಲಘು ಸಂಗೀತ ವಿಭಾಗದಲ್ಲಿ ಅದ್ವಿತಾ ಕೆ.ಎಂ. ಕ್ರಮವಾಗಿ ದ್ವಿತೀಯ ಮತ್ತು ತೃತೀಯ, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರೀತಲ್ (ತೃ) ಸ್ಥಾನ ಗಳಿಸಿದ್ದಾರೆ.
ಐದರಿಂದ ಏಳನೇ ತರಗತಿ ವಿಭಾಗದ ಕನ್ನಡ ಕಂಠಪಾಠದಲ್ಲಿ ಧನ್ಯಾ ಸಿ.(ಪ್ರ), ಭಕ್ತಿಗೀತೆ-ಸಮೀಕ್ಷಾ ಕೆ.ಎಸ್. (ಪ್ರ), ಲಘುಸಂಗೀತ-ಸಮೀಕ್ಷಾ ಕೆ.ಎಸ್. (ದ್ವಿ), ಅಭಿನಯ ಗೀತೆ-ನೈದಿಲೆ ಹೆಚ್.ಆರ್ (ದ್ವಿ), ಹಾಸ್ಯ ಮಾಡುವುದು-ಸುಖ್‌ದೇವ್ (ಪ್ರ) ಸ್ಥಾನ ಗಳಿಸಿದರು.
ಎಂಟರಿAದ ಹತ್ತನೇ ತರಗತಿ ವಿಭಾಗದ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಸಾನ್ವಿ ಡಿ. ಬಂಗೇರ (ಪ್ರ), ಮಿಮಿಕ್ರಿ-ಚಿನ್ಮಯ್ ಜಿ.ಎಂ (ಪ್ರ), ಚರ್ಚಾ ಸ್ಪರ್ಧೆ- ತಾನ್ಯಾ ಡಿ.ಎಲ್.(ಪ್ರ), ಛದ್ಮವೇಷ- ಅಂಕಿತಾ ಬಿ.ಎಸ್. (ಪ್ರ), ಅರೇಬಿಕ್ ಪಠಣ- ದಿಲ್ಷಾನಾ (ಪ್ರ), ಭಾವಗೀತೆ- ಸುದೀಕ್ಷಾ ಕೆ.ಎಸ್.(ದ್ವಿ), ರಂಗೋಲಿ -ಭ್ರಮಿತಾ ಕೆ.ಹೆಚ್. (ದ್ವಿ), ಹಾಸ್ಯ ಮಾಡುವುದು- ಸೋಹನ್ ಬಿ.ಆರ್.(ದ್ವಿ), ಭರತನಾಟ್ಯ-ನಿಸರ್ಗ ಎನ್. (ತೃ), ಇಂಗ್ಲೀಷ್ ಭಾಷಣ- ಜಾಸ್ಮಿನ್ (ತೃ), ರಸಪ್ರಶ್ನೆ- ಶ್ರೇಯಾ ರವೀಂದ್ರ ಮತ್ತು ಪವನ್ ಕೆ.ಎಸ್. (ತೃ), ಜಾನಪದ ನೃತ್ಯ- ಸುದೀಕ್ಷಾ ಕೆ.ಎಸ್, ಸಾನಿಕಾ ಹೆಚ್.ಬಿ, ಸೋನಾ ಜಿ.ಎಸ್, ತಾನ್ಯಾ ಡಿ.ಎಲ್, ಲಿಷಾ ಆಚಾರ್ಯ, ಲೇಖನ ತಂಡ ಪ್ರಥಮ ಸ್ಥಾನ ಗಳಿಸಿದೆ.