ನಾಪೋಕ್ಲು, ಸೆ. ೧೬: ಸಮೀಪದ ಮೂರ್ನಾಡು ಸರಕಾರಿ ಪ್ರೌಢಶಾಲೆಗೆ ಲಯನ್ಸ್ ವಲಯ ಅಧ್ಯಕ್ಷ ಎಂ.ಎA. ವಿನಯ್ ೨೫ ವಿವಿಧ ಹಣ್ಣಿನ ಗಿಡಗಳನ್ನು ಕೊಡುಗೆಯಾಗಿ ನೀಡಿದ್ದು, ಈ ಗಿಡಗಳನ್ನು ಲಯನ್ಸ್ ಕ್ಲಬ್ ಮೂರ್ನಾಡುವಿನ ಸಹಯೋಗ ದಲ್ಲಿ ನೆಟ್ಟು ವನಮಹೋತ್ಸವವನ್ನು ಆಚರಿಸಲಾಯಿತು.
ಬಳಿಕ ಮಾತನಾಡಿದ ಅವರು, ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಡುವುದರ ಮೂಲಕ ಉತ್ತಮ ಪರಿಸರವನ್ನು ನಿರ್ಮಿಸಬೇಕು ಎಂದರು. ಈ ಸಂದರ್ಭ ಶಾಲಾ ಮುಖ್ಯಶಿಕ್ಷಕ ಗುರುರಾಜ್, ಮೂರ್ನಾಡು ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಎಸ್. ಕಾವೇರಪ್ಪ, ಕಾರ್ಯದರ್ಶಿ ಬಿಂದು ಗಣಪತಿ, ಖಜಾಂಚಿ ಪಾಪ ಕಾವೇರಪ್ಪ, ಪದಾಧಿಕಾರಿಗಳಾದ ವೇಣು ಅಪ್ಪಣ್ಣ, ಅರುಣ್ ಅಪ್ಪಚ್ಚು, ಗೌತಮ್, ನಾಪೋಕ್ಲು ಲಯನ್ಸ್, ಕ್ಲಬ್ ಸದಸ್ಯರಾದ ಸಿ.ಎನ್. ಉದಯ, ಎಂ.ಬಿ. ವಸಂತ ಮುತ್ತಪ್ಪ, ಕುಟ್ಟಪ್ಪ, ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.