ಕೂಡಿಗೆ, ಸೆ. ೧೫: ಕೊಡಗಿನ ಗಡಿ ಭಾಗ ಶಿರಂಗಾಲ ಗ್ರಾಮದಲ್ಲಿರುವ ಕಾವೇರಿ ಹ್ಯಾಂಡ್ ಲೂಂ ಮತ್ತು ಕೈಮಗ್ಗ ತರಬೇತಿ ಕೇಂದ್ರದ ನೇಕಾರರಿಗೆ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ೫೮ ನೇಕಾರರಿಗೆ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್. ಗುರುಸ್ವಾಮಿ ಗುರುತಿನ ಚೀಟಿಯನ್ನು ವಿತರಣೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ನೇಕಾರ ಸಂಘದ ಅಧ್ಯಕ್ಷ ಟಿ.ಕೆ. ಪಾಂಡುರAಗ ವಹಿಸಿದರು. ಕೈಮಗ್ಗ ಮತ್ತು ಜವಳಿ ಇಲಾಖೆಯ ಯೋಜನೆ ಮತ್ತು ಕೈಮಗ್ಗ ತರಬೇತಿ ಪಡೆದ ನೇಕಾರರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಹೇಳಿದರು. ಈ ಸಂದರ್ಭ ಕುಶಾಲನಗರ ಕೈಮಗ್ಗ ಸಹಕಾರ ಸಂಘದ ಅಧ್ಯಕ್ಷ ವೆಂಕಟೇಶ, ಉಪಾಧ್ಯಕ್ಷೆ ಎಸ್.ಎಲ್. ಮಂಜುಳ, ಜಿಲ್ಲಾ ನೇಕಾರ ಸಂಘದ ನಿರ್ದೇಶಕ ಕೆ.ಕೆ. ನಾಗರಾಜಶೆಟ್ಟಿ, ಕಾರ್ಯದರ್ಶಿ ಕೆ.ಆರ್. ಸುನಿತಾ, ಕೈಮಗ್ಗ ಮತ್ತು ಜವಳಿ ಇಲಾಖೆಯ ನೌಕರ ಕೃಷ್ಣಜಿರಾವ್, ಘಟಕದ ನಿವೃತ್ತ ಮೇಲ್ವಿಚಾರಕ ಮೋಹನ್, ಸೇರಿದಂತೆ ಮುಳ್ಳುಸೋಗೆ ಗುಮ್ಮನಕೊಲ್ಲಿ, ಕೂಡಿಗೆ ತೊರೆನೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ನೇಕಾರರು ಹಾಜರಿದ್ದರು.