ಚೆಯ್ಯಂಡಾಣೆ, ಸೆ. ೧೫: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಅಧ್ಯಕ್ಷತೆಯಲ್ಲಿ ಚೆಯ್ಯಂಡಾಣೆ ಮಹಿಳಾ ಸಮಾಜ ಕಟ್ಟಡದಲ್ಲಿ ನಡೆಯಿತು.
ಗ್ರಾಮಸ್ಥರು ರಸ್ತೆ, ಆನೆ, ವಿದ್ಯುತ್ ಸಮಸ್ಯೆ, ಕಂದಾಯ ಇಲಾಖೆ ಸಮಸ್ಯೆ, ಆಸ್ಪತ್ರೆ, ಪಶು ಇಲಾಖೆ, ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ಪರವಾಗಿ ಚೇನಂಡ ಜಪ್ಪು ದೇವಯ್ಯ ಮಾತನಾಡಿ ೧೯೭೦ರಲ್ಲಿ ಕೊಕೇರಿ ಗ್ರಾಮದಲ್ಲಿ ಆಳವಡಿಸಿದ ವಿದ್ಯುತ್ ಕಂಬ ಅಪಾಯದ ಅಂಚಿನಲ್ಲಿದೆ. ಅದನ್ನು ವಯರ್ ಮುಖಾಂತರ ಕಟ್ಟುವ ಬಗ್ಗೆ ಹಲವಾರು ಬಾರಿ ಇಲಾಖೆಗೆ ಮನವಿ ಸಲ್ಲಿಸಿದರೂ, ಯಾವುದೇ ಸ್ಪಂದನ ಸಿಕ್ಕಿಲ್ಲ. ಸಾರ್ವಜನಿಕರು ಈ ಭಾಗದಲ್ಲಿ ಭಯದಲ್ಲಿ ಸಂಚರಿಸುವ ಸ್ಥಿತಿ ಒದಗಿದೆ. ಲೈನ್ಮ್ಯಾನ್ಗೆ ಮಾಹಿತಿ ನೀಡಿದಾಗ ಉಡಾಫೆಯ ಉತ್ತರ ನೀಡುತ್ತಾರೆ ಎಂದರು.
ಕAದಾಯ ಇಲಾಖೆ ಭ್ರಷ್ಟಾಚಾರ ದಲ್ಲಿ ತೊಡಗಿದ್ದು, ಆರ್ಟಿಸಿಯಲ್ಲಿ ಪಟ್ಟೆದಾರರು ಮರಣಹೊಂದಿ ವರ್ಷಗಳು ಹಲವು ಕಳೆದರೂ ಹೆಸರನ್ನು ತೆಗೆಯಲು ಅರ್ಜಿ ಸಲ್ಲಿಸಿದರೆ ಅದಕ್ಕೆ ಯಾವುದೇ ಸ್ವಂದನ ದೊರೆಯುತ್ತಿಲ್ಲ, ಕಂದಾಯ ಕಛೇರಿಗೆ ಯಾವುದೇ ಕೆಲಸಕ್ಕೆ ತೆರಳಿದರೂ ಹಣದ ಆಮಿಷ ಇಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಇದಕ್ಕೆ ಗ್ರಾಮಸ್ಥರಾದ ಕುಮ್ಮಂಡ ಕಾರ್ಯಪ್ಪ ಹಾಗೂ ಬಿದ್ದಂಡ ರಾಜ ಉತ್ತಪ್ಪ ಧ್ವನಿಗೂಡಿಸಿ ಕೂಡಲೇ ಪಟ್ಟೆದಾರರ ಹೆಸರನ್ನು ಆರ್ಟಿಸಿಯಿಂದ ಕೈ ಬಿಡಲು ಒತ್ತಾಯಿಸಿದರು.
ಚೆಸ್ಕಾಂ ಇಲಾಖೆಯ ಜೂನಿಯರ್ ಇಂಜಿನಿಯರ್ ಪ್ರಕಾಶ್ ಉತ್ತರಿಸಿ, ಎಲ್ಲ ಸಮಸ್ಯೆಗಳನ್ನು ಪರಿಶೀಲಿಸಿ ಕೂಡಲೇ ಇದಕ್ಕೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆಯಿತ್ತರು.
ಕಂದಾಯ ಪರಿವಿಕ್ಷಕ ರವಿ ಕುಮಾರ್ ಮಾತನಾಡಿ, ಇಲಾಖೆಯಲ್ಲಿ ಹಣದ ಆಮಿಷದ ಬಗ್ಗೆ ತಕರಾರಿರು ವವರು ಇಲಾಖಾಧಿಕಾರಿಗಳ ಗಮನಕ್ಕೆ ತರುವಂತೆ ಕೋರಿದರು.
ಗ್ರಾಮಸ್ಥ ಶಾಫಿ ಮಾತನಾಡಿ, ಹೊಸ ಬಿಪಿಎಲ್ ಕಾರ್ಡ್ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿ ೪ ಚಕ್ರದ ವಾಹನ ಇದ್ದವನಿಗೆ ಬಿಪಿಎಲ್ ಕಾರ್ಡ್ ನೀಡುತ್ತಿಲ್ಲ. ದ್ವಿಚಕ್ರ ವಾಹನ ಇದ್ದವನಿಗೆ ಬಿಪಿಎಲ್ ಕಾರ್ಡ್ ಕೊಡಬಹುದೆಂಬ ಹೊಸ ನಿಯಮವಿದೆ. ಇಂದು ಕಾರು ೨೫ ಸಾವಿರಕ್ಕೆ ದೊರೆಯುತ್ತದೆ. ಅವರಿಗೆ ಬಿಪಿಎಲ್ ಕಾರ್ಡ್ ಇಲ್ಲ, ೩.೫ ಲಕ್ಷದ ಬೈಕ್ ಪಡೆಯುವ ವ್ಯಕ್ತಿಗೆ ಕಾರ್ಡ್ ನೀಡುತ್ತೀರಿ ಎಂದು ಸರಕಾರದ ನಿಯಮದ ವಿರುದ್ಧ ಆಕ್ರೋಶ ಹೊರ ಹಾಕಿದರು. ಇದರ ಬಗ್ಗೆ ಶಾಸಕರು ಸಂಸದರಿಗೆ ಮಾಹಿತಿ ನೀಡಲು ಮನವಿ ಮಾಡಿದರು. ಗ್ರಾಮಸ್ಥ ಚೈಯಂಡ ರಘು ಗಣಪತಿ ಮಾತನಾಡಿ ಚೆಯ್ಯಂಡಾಣೆ ಯಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆ ಇದೆ. ಕೂಡಲೇ ಖಾಯಂ ವೈದ್ಯಾಧಿಕಾರಿ ನೇಮಿಸಿ ಹಾಗೂ ಎಲ್ಲ ರೀತಿಯ ಸೌಲಭ್ಯ ದೊರೆಯುವಂತೆ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರೋಗ್ಯ ಸಹಾಯಕಿ ಕನಕಾವತಿ ನಮ್ಮಲ್ಲಿ ವೈದ್ಯಾಧಿಕಾರಿ ಹಗಲು ವೇಳೆ ಕಾರ್ಯನಿರ್ವಹಿಸುತ್ತಿದ್ದು. ವಸತಿ ನಿಲಯ ಹಾನಿಯಾಗಿದ್ದು ನೀರಿನ ಸಮಸ್ಯೆ ಇದೆ ಎಂದರು. ಆರೋಗ್ಯ ಇಲಾಖೆಯ ಸಂಬAಧಪಟ್ಟ ಅಧಿಕಾರಿಗಳಿಗೆ ಖಾಯಂ ವೈಧ್ಯಾಧಿಕಾರಿ ನೇಮಿಸಲು ತಿಳಿಸಿದರು.
ಕಾಡಾನೆ ಹಾವಳಿ ಮಿತಿಮೀರಿದ್ದು ಫÀಸಲು ನಷ್ಟ ಅನುಭವಿಸುತ್ತಿದ್ದು, ಕಾಡಾನೆ ಗದ್ದೆಗೆ ಇಳಿದು ತುಳಿದು, ಕಳೆದ ವರ್ಷದಿಂದ ಅಪಾರ ನಷ್ಟವಾಗಿದೆ. ಅರಣ್ಯಧಿಕಾರಿಗಳಿಂದ ಯಾವುದೇ ಸ್ವಂದನೆಯಿಲ್ಲ. ಅರಣ್ಯಧಿಕಾರಿಗಳು ಕೂಡಲೇ ಕಾಡಾನೆ ಕಾರ್ಯಾಚರಣೆ ಆರಂಭಿಸಲು ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ಮೋನಿಷಾ ಕಾಡಾನೆ ಹಿಡಿಯುವ ಕಾರ್ಯಚರಣೆ ಆರಂಭಿಸಿ ಒಂದು ಆನೆಯನ್ನು ಸೆರೆ ಹಿಡಿದು ಮತ್ತೊಂದು ಆನೆ ಕಾರ್ಯಾಚರಣೆ ವೇಳೆ ಮೃತ ಪಟ್ಟಿದ್ದು ಉಳಿದ ಆನೆಯನ್ನು ಮಳೆ ಸ್ವಲ್ಪ ಕಡಿಮೆ ಅದ ಕೂಡಲೇ ಹಿಡಿಯಲಾಗುದು ಎಂದು ಮಾಹಿತಿ ನೀಡಿದರು.
ಗ್ರಾಮಸ್ಥರ ಪರವಾಗಿ ಪವನ್ ತೋಟಂಬೈಲು ಮಾತನಾಡಿ ಚೇಲಾವರ ಜಲಪಾತದಲ್ಲಿ ಪ್ರಾವಾಸಿಗರು ಅಟ್ಟಹಾಸ ಮೆರೆಯುತ್ತಿದ್ದು ಕೂಡಲೇ ಸೂಕ್ತ ಬಂದೋಬಸ್ತ್ ಹಾಗೂ ಪ್ರವಾಸಿಗರು ನೀರಿಗೆ ಇಳಿಯದ ರೀತಿಯಲ್ಲಿ ಶಾಶ್ವತ ಕ್ರಮ ಕೈಗೊಳ್ಳಲು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ರಾಜೇಶ್ ಅಚ್ಚಯ್ಯ ಮಳೆ ಕಡಿಮೆಗೊಂಡ ಕೂಡಲೇ ಶಾಶ್ವತ ತಡೆ ಬೇಲಿ ನಿರ್ಮಾಣ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು. ಪ್ರವಾಸಿಗರಿಗೆ ನೀರಿಗೆ ಇಳಿಯದ ರೀತಿ ಕಾಮಗಾರಿ ನಡೆಯಲಿದೆ ಎಂದರು.
ಗ್ರಾಮಸ್ಥರು ಚೆಯ್ಯಂಡಾಣೆ ಪಾರಾಣೆ, ಕೊಕೇರಿ, ಕೊಳಕೇರಿ ರಸ್ತೆಯ ದುಸ್ಥಿತಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಕಾಮಗಾರಿ ಕೈಗೊಳ್ಳದಿದ್ದರೆ ಹೋರಾಟ ನಡೆಸಿ ಪ್ರತಿಭಟಿಸಲಾಗುವುದೆಂದರು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಭೆಗೆ ಬಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ರಾಜೇಶ್ ಅಚ್ಚಯ್ಯ ಪ್ರತಿಕ್ರಿಯಿಸಿ ಅನಾರೋಗ್ಯದ ಕಾರಣ ಅಧಿಕಾರಿಗಳು ಆಗಮಿಸಲಿಲ್ಲ. ಮಳೆ ಸ್ವಲ್ಪ ಕಡಿಮೆ ಅದ ಕೂಡಲೇ ಸಂಬAಧ ಪಟ್ಟ ಇಲಾಖೆ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು. ಕೃಷಿ ಇಲಾಖೆಯಿಂದ ದೊರಕುವ ಸೌಲಭ್ಯಗಳ ಬಗ್ಗೆ ನಾರಾಯಣ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಬಗ್ಗೆ ಸುಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಗ್ಗೆ ಸೀತಾ ಲಕ್ಷ್ಮಿ, ಜೆಜೆಎಂ ಬಗ್ಗೆ ಮೋಹನ್ ಕುಮಾರ್ ಮಾಹಿತಿ ನೀಡಿದರು.
ಈ ಸಂದರ್ಭ ನೋಡಲ್ ಅಧಿಕಾರಿ ಸೀತಾ ಲಕ್ಷಿö್ಮ, ಗ್ರಾಮ ಪಂಚಾಯಿತಿ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಅರಣ್ಯ ಸಿಬ್ಬಂದಿಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಸ್ವಾಗತವನ್ನು ಕಾರ್ಯದರ್ಶಿ ಬಿದ್ದಪ್ಪ ಹಾಗೂ ವಂದನೆಯನ್ನು ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ನಿರ್ವಹಿಸಿದರು. ಚೆಯ್ಯಂಡಾಣೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು.