ಮಡಿಕೇರಿ, ಸೆ. ೧೫: ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಇದರ ವಾರ್ಷಿಕ ಮಹಾಸಭೆ ತಾ. ೧೮ರಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಹೆಚ್.ಎಸ್. ಚೇತನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಶಿಕ್ಷಕರ ಆರ್ಥಿಕ ಅವಶ್ಯಕತೆಗಳಿಗೆ ವಿವಿಧ ರೂಪದಲ್ಲಿ ಸಾಲ ನೀಡಿ ಅವರ ಪ್ರಗತಿಗೆ ಶ್ರಮಿಸುತ್ತಿದ್ದು, ಸ್ವಂತ ಬಂಡವಾಳದ ಮೇಲೆ ವ್ಯವಹಾರ ನಡೆಸುತ್ತಿದೆ. ಮಡಿಕೇರಿಯ ಮುಖ್ಯ ರಸ್ತೆಯಲ್ಲಿ ಸುಸಜ್ಜಿತ ಕಟ್ಟಡವನ್ನು ಹೊಂದಿದ್ದು, ಬ್ರಾಹ್ಮಣರ ಕಲ್ಯಾಣ ಮಂಟಪದ ಬಳಿ ೪೨ ಸೆಂಟು ವಿವಿಧ ರೂಪದಲ್ಲಿ ಸಾಲ ನೀಡಿ ಅವರ ಪ್ರಗತಿಗೆ ಶ್ರಮಿಸುತ್ತಿದ್ದು, ಸ್ವಂತ ಬಂಡವಾಳದ ಮೇಲೆ ವ್ಯವಹಾರ ನಡೆಸುತ್ತಿದೆ. ಮಡಿಕೇರಿಯ ಮುಖ್ಯ ರಸ್ತೆಯಲ್ಲಿ ಸುಸಜ್ಜಿತ ಕಟ್ಟಡವನ್ನು ಹೊಂದಿದ್ದು, ಬ್ರಾಹ್ಮಣರ ಕಲ್ಯಾಣ ಮಂಟಪದ ಬಳಿ ೪೨ ಸೆಂಟು ಇತರೆ ನಿಧಿಯಿದ್ದು, ರೂ. ೧೨,೪೯,೯೨,೫೭೨.೦೦ ಠೇವಣಿಯಿದೆ. ರೂ.೧೭,೧೭,೩೭,೯೬೦.೦೦ ದುಡಿಯುವ ಬಂಡವಾಳದೊAದಿಗೆ ಪ್ರಸಕ್ತ ವರ್ಷ ರೂ.೮,೯೦,೨೦,೫೭೨.೦೦ ಸಾಲ ನೀಡಲಾಗಿದ್ದು, ಒಟ್ಟು ರೂ.೩೫,೩೪,೨೦,೯೭೪.೦೦ ವ್ಯವಹಾರ, ರೂ.೨೨,೧೩,೯೫೪.೦೦ ಲಾಭ ಗಳಿಸಲಾಗಿದೆ ಎಂದು ಚೇತನ್ ಮಾಹಿತಿಯಿತ್ತರು. ಗೋಷ್ಠಿಯಲ್ಲಿ ನಿರ್ದೇಶಕರಾದ ರೇವತಿ ರಮೇಶ್, ಮಂಜುನಾಥ್, ಉಪಾಧ್ಯಕ್ಷ ಹೆಚ್.ಆರ್. ಮುತ್ತಪ್ಪ, ಸಿಇಓ ಮುತ್ತಮ್ಮ, ಲೆಕ್ಕಿಗ ನಟೇಶ್ ಉಪಸ್ಥಿತರಿದ್ದರು.