ಮಡಿಕೇರಿ, ಸೆ. ೧೫: ಸಿಐಎಸ್‌ಸಿಇ ಸ್ಪೋರ್ಟ್ಸ್ ಮತ್ತು ಗೇಮ್ಸ್ ೨೦೨೨ ಆಯೋಜಿಸಿದ್ದ ಪ್ರಾದೇಶಿಕ ಕ್ರೀಡಾಕೂಟವು ಇತ್ತೀಚೆಗೆ ಬೆಂಗಳೂರಿನ ಶ್ರೀ ಜಯಪ್ರಕಾಶ್ ನಾರಾಯಣ ರಾಷ್ಟಿçÃಯ ಯುವ ತರಬೇತಿ ಸಂಸ್ಥೆಯಲ್ಲಿ ಜರುಗಿತು.
ದಕ್ಷಿಣ ಕೊಡಗಿನ ಗೋಣಿ ಕೊಪ್ಪಲುವಿನ ಕಾಲ್ಸ್-ಎಎಸ್ ಎಫ್‌ನಿಂದ ೪೦ ಕ್ರೀಡಾಪಟುಗಳು ಭಾಗವಹಿಸಿದ್ದು, ಅತ್ಯುತ್ತಮ ಸಾಧನೆ ತೋರಿ ೩೯ ಪದಕಗಳನ್ನು ಗೆಲ್ಲುವುದರೊಂದಿಗೆ ಸಮಗ್ರ ಕೊಪ್ಪಲುವಿನ ಕಾಲ್ಸ್-ಎಎಸ್ ಎಫ್‌ನಿಂದ ೪೦ ಕ್ರೀಡಾಪಟುಗಳು ಭಾಗವಹಿಸಿದ್ದು, ಅತ್ಯುತ್ತಮ ಸಾಧನೆ ತೋರಿ ೩೯ ಪದಕಗಳನ್ನು ಗೆಲ್ಲುವುದರೊಂದಿಗೆ ಸಮಗ್ರ ಚಾಂಪಿಯನ್ ಶಿಪ್ ಟ್ರೋಫಿಯನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಈ ಕ್ರೀಡಾರ್ಥಿಗಳ ಪೈಕಿ ೧೮ ಕ್ರೀಡಾರ್ಥಿ ಗಳು ನವೆಂಬರ್ ತಿಂಗಳಿನಲ್ಲಿ ಪುಣೆಯಲ್ಲಿ ನಡೆಯಲಿರುವ ರಾಷ್ಟçಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.