ಮಡಿಕೇರಿ, ಸೆ. ೧೬: ಈ ವರ್ಷದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿರುವ ಬಿಳುಗುಂದ ಸರಕಾರಿ ಸಂಯುಕ್ತ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಹೆಚ್.ಜಿ. ಸಾವಿತ್ರಿ ಅವರನ್ನು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಕಾರ್ಯಕರ್ತೆಯರು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಅರುಣಾ ಆನ್ಸಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ವೀರಾಜಪೇಟೆ ಮಹಿಳಾ ವಿಭಾಗದ ಸಂಚಾಲಕಿ ಎಂ.ಟಿ.ಪಿ.ನಜ್ಮಾ, ಜಿಲ್ಲಾ ಸಮಿತಿಯ ಝೈನಬಾ ರೆಹ್ಮಾನ್, ಸಮೀರಾ ರಾಝಿಕ್, ಶಿಕ್ಷಕ ಕಿರಣ್ ಕುಮಾರ್ ಹಾಜರಿದ್ದು ಮಾತನಾಡಿದರು, ಶಿಕ್ಷಕಿ ಲೀಲಾವತಿಯವರು ನಿರೂಪಿಸಿ, ಪವಿತ್ರಾ ಸ್ವಾಗತಿಸಿದರು. ಲಿನ್ನಿ ಧನ್ಯವಾದವಿತ್ತರು.