ಸಿದ್ದಾಪುರ, ಸೆ. ೧೪: ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯ ಗುಡ್ಲೂರು ಮೂಡಬೈಲ್ ಪಾಲಿಬೆಟ್ಟ ಚೆನ್ನಂಗಿ ಗಿರಿಜನ ಆಶ್ರಮ ಶಾಲೆಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಬಗ್ಗೆ ಪ್ರತಿಭಟಿಸಲಾಯಿತು. ಶಾಲಾ ಮಕ್ಕಳು, ಕಾರ್ಮಿಕರು ಸ್ಥಳೀಯ ಗ್ರಾಮಸ್ಥರು ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಭಾಗದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿವೆ. ಆದರೆ ಗ್ರಾಮದ ಸಂಪರ್ಕ ರಸ್ತೆ ಡಾಂಬರೀಕರಣಗೊಳ್ಳದೇ ವರ್ಷಗಳೇ ಕಳೆದಿವೆ. ಪಟ್ಟಣಕ್ಕೆ ತೆರಳುವ ರಸ್ತೆಯಾಗಿದೆ. ರಸ್ತೆಯುದ್ದಕ್ಕೂ ಗುಂಡಿಮಯವಾಗಿದೆ. ವೃದ್ಧರು ರೋಗಿಗಳು ಸಂಚರಿಸುವುದು ಕಷ್ಟವಾಗಿದೆ. ಒಳಚರಂಡಿ ವ್ಯವಸ್ಥೆಯು ಇಲ್ಲದೆ ಮಳೆ ಸಂದರ್ಭ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ.
ಸಂಬAಧಪಟ್ಟ ಅಧಿಕಾರಿಗಳು ರಸ್ತೆಯ ವ್ಯವಸ್ಥೆ, ಚರಂಡಿ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಹದಗೆಟ್ಟ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ಮಾಡಲಾಯಿತು. ಗ್ರಾಮಸ್ಥರಾದ ಸುಬ್ರಮಣಿ, ಸುಗಂದ, ವೀಣಾ, ಮಹೇಶ್, ವಸಂತ, ಉಮೇಶ್, ಜಿತ್ತು, ಶಾಂತಿ, ಕಾವೇರಮ್ಮ, ಬೋಪಣ್ಣ, ತಮ್ಮಣಿ, ಕಿರಣ್, ಬಬಿತ, ಯೋಗೇಶ್, ಪಾಪ, ಪ್ರಸನ್ನ, ಜಗದೀಶ್, ಬಾಲಕೃಷ್ಣ, ಚಂದ್ರಾವತಿ ಹಾಗೂ ಗ್ರಾಮಸ್ಥರು ಹಾಜರಿದ್ದರು.