ಮಡಿಕೇರಿ, ಸೆ. ೧೪: ಅರಣ್ಯ ಉತ್ಪನ್ನವಾದ ಬೀಟೆ ಮರದ ನಾಟಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ವಾಹನ ಮಹೇಂದ್ರ ಜೀಪು ನೋಂದಣಿ ಸಂಖ್ಯೆ ಕೆಎ-೨೧-೪೪೩೭ನ್ನು ಸಂಪಾಜೆ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ. ೦೬/೨೦೧೭-೧೮, ೧೫-೦೮ ೨೦೧೭ರಲ್ಲಿ ಅಮಾನತ್ತು ಪಡಿಸಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ನ್ಯಾಯಾಲಯದಲ್ಲಿ ಈ ಪ್ರಕರಣವು ವಿಚಾರಣೆಯನ್ನು ನಡೆಸಿ, ಕರ್ನಾಟಕ ಅರಣ್ಯ ಕಾಯಿದೆ ೧೯೬೩ ಸೆಕ್ಷನ್ ೭೧(ಎ)ಯಿಂದ(ಜಿ)ಯವರೆಗೆ ಹಾಗೂ ಈವರೆಗಿನ ತಿದ್ದುಪಡಿಗನುಸಾರದತ್ತವಾದ ಅಧಿಕಾರವನ್ನು ಚಲಾಯಿಸಿ ವಾಹನ ಮತ್ತು ಸೊತ್ತನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಈ ಆದೇಶ ಹೊರಡಿಸಿದ ದಿನಾಂಕದಿAದ ೩೦ ದಿನಗಳ ಒಳಗಾಗಿ ಸಂಬAಧಿಸಿದವರು ಯಾವುದೇ ಮೇಲ್ಮನವಿಯನ್ನು ಸಲ್ಲಿಸದೇ ಇದ್ದ ಪಕ್ಷದಲ್ಲಿ ಇದೇ ಅಂತಿಮ ಆದೇಶವಾಗಿರುತ್ತದೆ, ನಂತರ ವಾಹನ ಮತ್ತು ಸೊತ್ತನ್ನು ಕಾನೂನು ರೀತ್ಯಾ ವಿಲೇವಾರಿಗೊಳಿಸಲು ಕೂಡ ಆದೇಶಿಸಿದೆ. ಹೆಚ್ಚಿನ ವಿವರಗಳಿಗೆ, ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿ, ಮಡಿಕೇರಿ ಇಲ್ಲಿ ಕೆಲಸದ ವೇಳೆಯಲ್ಲಿ ಸಂಪರ್ಕಿಸುವAತೆ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.