ಸೋಮವಾರಪೇಟೆ, ಸೆ. ೧೪: ಕೂಡಿಗೆ ಕ್ರೀಡಾ ಶಾಲೆಯ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನೇರುಗಳಲೆ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ಶಾಟ್‌ಪುಟ್‌ನಲ್ಲಿ ಬಿ.ಸಿ. ಲಾಂಛನ (ಪ್ರ) ಹಾಗೂ ಜಾವಲಿನ್ ಥ್ರೋ ನಲ್ಲಿ (ದ್ವಿ) ಸ್ಥಾನಗಳಿಸಿದರು. ತ್ರಿವಿಧ ಜಿಗಿತದ ಬಾಲಕಿಯರ ವಿಭಾಗದಲ್ಲಿ ಟಿ.ಎಂ. ರಿಹಾನ (ಪ್ರ) ಹಾಗೂ ಬಾಲಕರ ವಿಭಾಗದಲ್ಲಿ ಟಿ.ಎ. ನವೀನ್ (ದ್ವಿ) ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಂಜನ ತ್ರಿವಿಧ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದರು. ಬಾಲಕಿಯರ ರಿಲೆ ಸ್ಪರ್ಧೆಯಲ್ಲಿ ನೇರುಗಳಲೆ ಶಾಲೆಯ ವಿದ್ಯಾರ್ಥಿಗಳ ತಂಡ(ದ್ವಿ) ಸ್ಥಾನ ಪಡೆಯಿತು. ಇವರಿಗೆ ಶಾಲೆಯ ದೈಹಿಕ ಶಿಕ್ಷಣ ಎ.ಜೆ. ಚಂದ್ರಾವತಿ ತರಬೇತಿ ನೀಡಿದ್ದು, ಶಿಕ್ಷಕ ಕೆ.ಆರ್. ರತ್ನಕುಮಾರ್ ಸಹಕಾರ ನೀಡಿದ್ದಾರೆ.