ಕುಶಾಲನಗರ, ಸೆ. ೧೪: ಕುಶಾಲನಗರ ಪುರಸಭೆಗೆ ಸೇರ್ಪಡೆಗೊಳ್ಳಲು ಆಕ್ಷೇಪ ವ್ಯಕ್ತಪಡಿಸಿದ್ದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಇದೀಗ ಸೇರ್ಪಡೆಗೆ ಒಮ್ಮತದ ನಿರ್ಣಯ ಕೈಗೊಂಡಿದೆ. ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಹೊರತುಪಡಿಸಿದಂತೆ ಕುಶಾಲನಗರ ಪುರಸಭೆ ಘೋಷಣೆಗೆ ಸಿದ್ಧತೆ ನಡೆಯುತ್ತಿರುವ ಬಗ್ಗೆ ಶಕ್ತಿಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮುಳ್ಳುಸೋಗೆ ಗ್ರಾಮಸ್ಥರು, ಸಭೆ ನಡೆಸಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ತುರ್ತು ಸಭೆ ಕರೆಯಲು ಆಗ್ರಹಿಸಿದ್ದರು.

ಇಂದು ಆಡಳಿತ ಮಂಡಳಿ ತುರ್ತು ಸಭೆಯು ಪಂಚಾಯಿತಿ ಅಧ್ಯಕ್ಷ ಚೆಲುವರಾಜು ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸದಸ್ಯರುಗಳ ಭಾರೀ ಚರ್ಚೆ, ಗೊಂದಲ ಕಂಡುಬAತು. ಈ ಹಿಂದೆ ಪುರಸಭೆಗೆ ಸೇರಿಸಲು ಆಕ್ಷೇಪಣೆ ವ್ಯಕ್ತಪಡಿಸಿ ಬೆಂಗಳೂರಿಗೆ ನಿಯೋಗ ತೆರಳಿ ನ್ಯಾಯಾಂಗ ಮೊರೆ ಹೋದ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಸೃಷ್ಟಿಯಾಗಲು ಕಾರಣವಾಗಿದೆ ಎನ್ನುವ ಆರೋಪಗಳು ಕೇಳಿ ಬಂದವು. ಸದಸ್ಯರ ನಡುವೆ ಏಕವಚನ ಪದ ಪ್ರಯೋಗಗಳ ನಡುವೆ ಗೊಂದಲದ ಗೂಡಾಗಿ ಸಭೆ ಪರಿವರ್ತನೆಗೊಂಡ ದೃಶ್ಯವು ಕಂಡು ಬಂದಿತು.

ಆಕ್ಷೇಪಣೆ ಸಲ್ಲಿಸುವ ಸಂಬAಧ ಬಹುತೇಕ ಸದಸ್ಯರು ತಮ್ಮ ಅಧಿಕಾರವಧಿ ಉಳಿಸಿಕೊಳ್ಳುವ ಸಲುವಾಗಿ ನ್ಯಾಯಾಂಗದ ಮೊರೆ

(ಮೊದಲ ಪುಟದಿಂದ) ಹೋದ ವಿಚಾರವಾಗಿ ಸದಸ್ಯೆ ವೇದಾವತಿ, ಜಗದೀಶ್, ಶಿವಾನಂದ್ ಮತ್ತಿತರರ ನಡುವೆ ಮಾತಿನ ಚಕಮಕಿ ನಡೆಯಿತು. ಕೃಷಿ ಭೂಮಿಗಳÀÄ ಪುರಸಭೆಗೆ ಸೇರಿಸಬಾರದು. ಮರು ಸರ್ವೆ ನಡೆಯಬೇಕಿದೆ ಎನ್ನುವ ಬೇಡಿಕೆಗಳು ಸದಸ್ಯರಿಂದ ಕೇಳಿ ಬಂದಿತು. ತಮ್ಮ ಅಧಿಕಾರವಧಿ ಕೊನೆಗೊಳ್ಳುವ ಹಿನ್ನೆಲೆಯಿಂದ ಕಾಲಾವಕಾಶ ಕೋರಿ ಆಕ್ಷೇಪಣೆ ಸಲ್ಲಿಸಲಾಯಿತೆ ಹೊರತು, ಪುರಸಭೆಗೆ ಸೇರ್ಪಡೆಯಾಗಲು ಯಾವುದೇ ರೀತಿ ವಿರೋಧವಿಲ್ಲ ಎಂದು ಸಮಜಾಯಿಷಿಕೆಗಳು ಕೇಳಿಬಂದವು.

ಅAತಿಮವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಷಯವನ್ನು ಮತಕ್ಕೆ ಹಾಕಿದ ಸಂದರ್ಭ ಸರ್ವ ಸದಸ್ಯರು ಮುಳ್ಳುಸೋಗೆ ಕಂದಾಯ ಗ್ರಾಮವನ್ನು ಸಂಪೂರ್ಣ ಕುಶಾಲನಗರ ಪುರಸಭೆಗೆ ಸೇರಿಸಿಕೊಳ್ಳುವಂತೆ ಒಮ್ಮತದ ನಿರ್ಣಯಕ್ಕೆ ಬಂದರು. ಉಪಾಧ್ಯಕ್ಷೆ ಜಯಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಮತ್ತು ಸರ್ವ ಸದಸ್ಯರು ಇದ್ದರು.