ಮಡಿಕೇರಿ, ಸೆ. ೧೪: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳಿಗೆ ದಶಮಂಟಪ ಸಮಿತಿಯಿಂದ ತೀರ್ಪುಗಾರಿಕೆಗೆ ಮಡಿಕೇರಿ, ಸೆ. ೧೪: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳಿಗೆ ದಶಮಂಟಪ ಸಮಿತಿಯಿಂದ ತೀರ್ಪುಗಾರಿಕೆಗೆ ಮಡಿಕೇರಿ, ಸೆ. ೧೪: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳಿಗೆ ದಶಮಂಟಪ ಸಮಿತಿಯಿಂದ ತೀರ್ಪುಗಾರಿಕೆಗೆ ಮಾಡಲಾಗಿದ್ದ ಸಮಯಕ್ಕೆ ನಾಲ್ಕೆöÊದು ಮಂಟಪ ಸಮಿತಿಗಳು ಸಮ್ಮತಿ ಸೂಚಿಸದೇ ಬದಲಾವಣೆ ಮಾಡುವಂತೆ ಒತ್ತಾಯಿಸಿದವು. ಈ ಹಿನ್ನೆಲೆಯಲ್ಲಿ ಮಂಟಪಗಳ ತೀರ್ಪುಗಾರಿಕೆ ಸಮಯವನ್ನು ಪ್ರತಿ ಮಂಟಪದಿAದ ಇಬ್ಬರು ಪದಾಧಿಕಾರಿಗಳನ್ನು ಒಳಗೊಂಡು ಪುನರ್ ಪರಿಶೀಲನೆ ಮಾಡಿ ಅಂತಿಮ ಪಟ್ಟಿಯನ್ನು ಮುಂದಿನ ಸಭೆಯಲ್ಲಿ ಪ್ರಕಟಿಸುವುದಾಗಿ ಮನು ಮಂಜುನಾಥ್ ಹೇಳಿದರು.
ಈ ಬಾರಿ ದಸರಾ ಅದ್ಧೂರಿಯಾಗಿ
(ಮೊದಲ ಪುಟದಿಂದ) ನಡೆಯಲಿರುವ ಹಿನ್ನೆಲೆಯಲ್ಲಿ ಜನಸಂದಣಿ ಹೆಚ್ಚಾಗಲಿದೆ. ಆದ್ದರಿಂದ ಮಂಟಪ ಸಮಿತಿಗಳು ಕಡ್ಡಾಯವಾಗಿ ಸಮಯ ಪಾಲನೆಯನ್ನು ಮಾಡಬೇಕು. ತೀರ್ಪುಗಾರರ ತೀರ್ಪನ್ನು ವಿರೋಧಿಸಬಾರದು. ಧಿಕ್ಕಾರ ಪ್ರತಿಭಟನೆಗಳಿಗೆ ಮಂಟಪ ಸಮಿತಿಗಳು ಮುಂದಾಗಬಾರದು ಎಂದು ಮನು ಮಂಜುನಾಥ್ ಮನವಿ ಮಾಡಿದರು. ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ ದಶಮಂಟಪ ಶೋಭಾಯಾತ್ರೆ ಅಚ್ಚುಕಟ್ಟಾಗಿ ನಡೆಯಬೇಕು. ತೀರ್ಪುಗಾರಿಕೆಯನ್ನು ವಿರೋಧಿಸಿ ದಸರಾ ಉತ್ಸವಕ್ಕೆ ಕಳಂಕ ತರುವ ಕೆಲಸವನ್ನು ಮಂಟಪ ಸಮಿತಿಗಳು ಮಾಡಬಾರದು. ಮಡಿಕೇರಿ ನಗರದ ರಸ್ತೆಗಳ ದುರಸ್ತಿಗೆ ಈಗಾಗಲೇ ಟೆಂಡರ್ ಆಗಿದ್ದು ಆದಷ್ಟು ಶೀಘ್ರದಲ್ಲಿ ಕೆಲಸ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ದಶಮಂಟಪ ಸಮಿತಿ ಕಾರ್ಯಾಧ್ಯಕ್ಷ ಸಿ.ಆರ್. ಮಂಜುನಾಥ್ ಮಾತನಾಡಿ ದಸರಾ ಸಂದರ್ಭದಲ್ಲಿ ಮಂಟಪಗಳ ನಡುವೆ ಪೈಪೋಟಿ ಇರಬೇಕು ಹೊರತಾಗಿ ದೇವಾಲಯಗಳ ನಡುವೆ ಇರಬಾರದು. ಉತ್ಸವದ ಯಶಸ್ಸಿಗಾಗಿ ಎಲ್ಲಾ ಸಮಿತಿಯವರೂ ಒಟ್ಟಾಗಿ ಮುನ್ನಡೆಯಬೇಕೆಂದು ಸಲಹೆ ನೀಡಿದರು.
ವೇದಿಕೆಯಲ್ಲಿ ದಶಮಂಟಪ ಸಮಿತಿ ಪ್ರಧಾನ ಕಾರ್ಯದರ್ಶಿ ಯಶ್ವಂತ್ ಮನೋಜ್, ಕುಂದುರುಮೊಟ್ಟೆ ದೇವಾಲಯ ಮಂಟಪ ಸಮಿತಿ ಅಧ್ಯಕ್ಷ ನಂದಾ ಉತ್ತಪ್ಪ, ಸಮಿತಿಯ ಪ್ರಮುಖರಾದ ಟಿ.ಪಿ. ರಾಜೇಂದ್ರ, ನೆರವಂಡ ಜೀವನ್, ಚಾಮಿ, ಹೇಮ್ ಕುಮಾರ್, ನವೀನ್ ಪೂಜಾರಿ ಉಪಸ್ಥಿತರಿದ್ದರು.