ಸಿದ್ದಾಪುರ, ಸೆ. ೧೩: ಹುಲಿ ದಾಳಿಗೆ ಮತ್ತೊಂದು ಹಸು ಬಲಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಬಾಡಗ ಬಾಣಂಗಾಲ ಗ್ರಾಮದ ಘಟ್ಟದಳ್ಳದ ನಿವಾಸಿಯಾಗಿ ರುವ ಜಯಚಂದ್ರ ಎಂಬವರಿಗೆ ಸೇರಿದ ಹಸುವನ್ನು ಕಳೆದೆರಡು ದಿನಗಳ ಹಿಂದೆ ಮೇಯಲು ಬಿಟ್ಟಿದ್ದರು. ಹಸು ಮನೆಗೆ ಹಿಂತಿರುಗಿ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದೆ. ಸಂದರ್ಭ ಘಟ್ಟದಳ್ಳದ ನಿವಾಸಿ ಕೆ.ಜಿ. ವಿವೇಕ್ ಎಂಬವರ ಕಾಫಿ ತೋಟದೊಳಗೆ ಸಾವನ್ನಪ್ಪಿರುವುದು ಕಂಡುಬAದಿದೆ. ಈ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳಿಗೆ ಜಯಚಂದ್ರ ದೂರು ನೀಡಿದ್ದಾರೆ. ನಂತರ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಹುಲಿ ಧಾಳಿ ನಡೆಸಿ ಹಸುವನ್ನು ಕೊಂದು ತಿಂದು ಹೋಗಿರುವ ಕುರುಹು ಪತ್ತೆಯಾಗಿದೆ. ಹಸು ಸತ್ತಿರುವ ಸ್ಥಳದಲ್ಲಿ ಹುಲಿಯು ಬರಬಹುದೆಂದು ಹಾಗೂ ಹುಲಿಯ ಚಲನ ವಲನ ಕಂಡು ಹಿಡಿಯಲು ಆ ಭಾಗದ ಕಾಫಿ ತೋಟದೊಳಗೆ ಆರು ಸಿ.ಸಿ ಕ್ಯಾಮೆರಾಗಳನ್ನು ಅರಣ್ಯ ಇಲಾಖೆಯ ವತಿಯಿಂದ ಅಳವಡಿಸ ಲಾಗಿದೆ. ಹುಲಿಯು ಈ ಭಾಗದ ಕಾಫಿ ತೋಟಗಳಲ್ಲಿ ಸುತ್ತಾಡುತ್ತಿರುವುದು ಖಾತರಿಯಾಗಿದೆ. ಹುಲಿ ಧಾಳಿಯಿಂದ ಸಾವನ್ನಪ್ಪಿದ ಹಸು ಮಾಲೀಕರು ಹಸುವಿನ ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಬೆಲೆ ಬಾಳುವ ಉತ್ತಮ ತಳಿಯ ಹಸುವನ್ನು ದಾಳಿ ನಡೆಸಿ ಕೊಂದಿದ್ದು ಅಪಾರ ನಷ್ಟ ಸಂಭವಿಸಿದೆ.
ಕಾರ್ಯಾಚರಣೆ
ಬಾಡಗಬಾಣAಗಾಲ ಗ್ರಾಮದಲ್ಲಿ ಬೀಡು ಬಿಟ್ಟಿರುವ ಹುಲಿ ಸೆರೆಗೆ ಮುಂದುವರಿದ ಕಾರ್ಯಾಚರಣೆ ನಡೆಯಿತು. ಬಾಡಗಬಾಣಂಗಾಲ ಗ್ರಾಮದ ಮಾರ್ಗೊಲ್ಲಿ ಕಾಫಿ ತೋಟದೊಳಗೆ ಬೀಡು ಬಿಟ್ಟಿರುವ ಹುಲಿಯೊಂದು ಜಾನುವಾರುಗಳ ಮೇಲೆ ಧಾಳಿ ನಡೆಸಿ ಸಾಯಿಸುತ್ತಿರುವ ಘಟನೆಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಯಭೀತರಾಗಿದ್ದು ಹುಲಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ಇದೀಗ ಅರಣ್ಯ ಇಲಾಖಾಧಿಕಾರಿಗಳು ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ ತಂಡದ ಸಿಬ್ಬಂದಿಗಳು ದುಬಾರೆ ನಾಲ್ಕು ಸಾಕಾನೆಗಳ ನೆರವಿನಿಂದ ಮಾವುತರೊಂದಿಗೆ ಮಾರ್ಗೊಲ್ಲಿ ಮೊಳಗು ಮನೆ ಹಾಗೂ ಸುತ್ತ ಮುತ್ತಲಿನ ಕಾಫಿ ತೋಟಗಳ ಒಳಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲದೇ ಸಿ.ಸಿ ಕ್ಯಾಮೆರಾ ಹಾಗೂ ಬೋನ್ಗಳನ್ನು ಅಳವಡಿಸಲಾಗಿದೆ. ಆದರೆ ಹುಲಿಯ ಚಲನ-ವಲನ ಕಂಡು ಬಂದಿರುವುದಿಲ್ಲ. ಸುರಿಯುವ ಮಳೆಯ ನಡುವೆ ಕಾಫಿ ತೋಟದೊಳಗೆ ಸಾಕಾನೆಗಳೊಂದಿಗೆ ಸುತ್ತಾಡಿದರು ಕೂಡ ಹುಲಿಯ ಸುಳಿವು ಲಭಿಸಲಿಲ್ಲ. ಇದರಿಂದಾಗಿ ಮತ್ತಷ್ಟು ಸಮಸ್ಯೆಗಳು ಆಗಿವೆ. ಕಾರ್ಯಾಚರಣೆ ತಂಡವು ಬಾಡಗ-ಬಾಣಂಗಾಲ ಗ್ರಾಮದಲ್ಲಿ ಮೊಕ್ಕಾಂ ಹೂಡಿದೆ. ಆದರೆ ಹುಲಿಯು ನಾಪತ್ತೆಯಾಗಿದೆ. ಕಾರ್ಯಾಚರಣೆಯನ್ನು ಮುಂದು ವರೆಸಲು ಅರಣ್ಯ ಇಲಾಖಾಧಿಕಾರಿ ಗಳು ನಿರ್ಧರಿಸಿದ್ದಾರೆ. ಹುಲಿಯು ಸೆರೆಯಾಗದ ಹಿನ್ನೆಲೆಯಲ್ಲಿ ಕಾಫಿ ತೋಟದೊಳಗೆ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
- ವಾಸು.