ಮಡಿಕೇರಿ, ಸೆ. ೧೩: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯು ೪೭ನೇ ವರ್ಷದ ದಸರಾ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ವಿ.ಬಿ. ಬ್ರಿಜೇಶ್ ತಿಳಿಸಿದ್ದಾರೆ.
ಈ ಬಾರಿ ಮಂಟಪದಲ್ಲಿ ರಾಮಾಯಣದಿಂದ ಆಯ್ದ ಸೀತಾಪಹರಣ ರಾವಣನ ಸಂಹಾರ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ಎರಡು ಟ್ರಾö್ಯಕ್ಟರ್ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್ನ ಕಳೆಯಗಮ್ ಲೈಟಿಂಗ್ ಬೋರ್ಡ್ ಅಳಡಿಸಲಿದ್ದಾರೆ. ಸಮಿತಿ ಸದಸ್ಯರೆ ಪ್ಲಾಟ್ಫಾರಂ ನಿರ್ಮಿಸಲಿದ್ದಾರೆ. ೨೪ ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಕಲಾವಿದರು ಹಾಗೂ ಸಮಿತಿ ಸದಸ್ಯರು ಕಲಾಕೃತಿಗಳನ್ನು ತಯಾರಿಸಲಿದ್ದಾರೆ.
ಮಂಜುನಾಥ ಇಂಜಿನಿಯರಿAಗ್ ವರ್ಕ್ಸ್ನ ಜಗದೀಶ್ ಹಾಗೂ ಸಮಿತಿ ಸದಸ್ಯರು ಟ್ರಾö್ಯಕ್ಟರ್ ಸೆಟ್ಟಿಂಗ್ಸ್ ಹಾಗೂ ಕಲಾಕೃತಿಗಳಿಗೆ ಚಲನ-ವಲನ ವ್ಯವಸ್ಥೆ ಮಾಡಲಿದ್ದಾರೆ. ಧ್ವನಿವರ್ಧಕ ಹಾಗೂ ಸ್ಟುಡಿಯೋ ಲೈಟ್ವ್ಯವಸ್ಥೆಯನ್ನು ಸಮಿತಿ ಸದಸ್ಯ ಪ್ರಶಾಂತ್ ಮತ್ತು ತಂಡ ಮಾಡಲಿದೆ. ಈ ಬಾರಿ ವಿಶೇಷತೆಯಾಗಿ ೨೨ ಅಡಿ ಎತ್ತರದ ಕಲಾಕೃತಿಯೊಂದನ್ನು ತಯಾರಿಸಲಾಗುತ್ತಿದ್ದು, ವಿಭಿನ್ನ ಚಲನ-ವಲನದೊಂದಿಗೆ ಪ್ರದರ್ಶಿಸಲಾಗುತ್ತದೆ. ೨೨ ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಜನಾಕರ್ಷಣೆ ಪಡೆಯುವುದರ ಜೊತೆಗೆ ಪ್ರಥಮ ಬಹುಮಾನಕ್ಕೆ ಪೈಪೋಟಿ ನೀಡುವುದಾಗಿ ಬ್ರಿಜೇಶ್ ಮಾಹಿತಿ ನೀಡಿದರು.
- ಉಜ್ವಲ್ ರಂಜಿತ್