ಮಡಿಕೇರಿ, ಸೆ. ೧೩: ಕೊಡಗು ಜಿಲ್ಲೆ ಹಾಗೂ ಜಿಲ್ಲೆಯ ಗಡಿ ಭಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯ ಹೆಚ್ಚಳಕ್ಕೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ವಿಧಾನಸಭಾ ಕಲಾಪದಲ್ಲಿ ಆಗ್ರಹಿಸಿದರು.

ಕೊಡಗು ಪ್ರಸ್ತುತ ಸೂಕ್ಷö್ಮ ಪ್ರದೇಶವಾಗಿದೆ. ಇಲ್ಲಿ ನಡೆದಿರುವ ಅಪರಾಧ ಪ್ರಕರಣದಲ್ಲಿ ೪೦೦ಕ್ಕೂ ಅಧಿಕ ಪ್ರಕರಣ ಇನ್ನೂ ಪತ್ತೆಗೆ ಬಾಕಿ ಇದೆ. ಇದರೊಂದಿಗೆ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಕೇವಲ ೨೦ ಸಿಸಿ ಕ್ಯಾಮರಾ ಅಳವಡಿಸಿರುವ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಶಾಸಕರು ಪ್ರಸ್ತಾಪಿಸಿದರು.

ಅಪರಾಧವೆಸಗಿದವರು ಆ ರಾಜ್ಯ ಸೇರಿಕೊಳ್ಳುವುದರಿಂದ ಕೆಲವು ಸಮಸ್ಯೆಗಳೂ ಇವೆ. ಆದರೂ ಈ ಬಗ್ಗೆ ನಿಗಾವಹಿಸಲಾಗುವುದು ಎಂದು ತಿಳಿಸಿದ ಗೃಹ ಸಚಿವರು, ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇದಕ್ಕೆ ಕೇಂದ್ರದ ಹಣ ಬಂದಿದೆ. ಕೊಡಗು ಜಿಲ್ಲೆಯಲ್ಲಿಯೂ ಹೆಚ್ಚಿಸುವ ಬಗ್ಗೆ ಗಮನ ಹರಿಸಲಾಗುವುದು. ಅಲ್ಲದೆ ಅವಶ್ಯ ಸಂದರ್ಭದಲ್ಲಿ ಖಾಸಗಿಯಾಗಿ ಅಳವಡಿಸಲ್ಪಟ್ಟಿರುವ ಸಿಸಿ ಕ್ಯಾಮರಾಗಳ ಪ್ರಯೋಜನವನ್ನೂ ಪಡೆದು ಕೊಳ್ಳಲಾಗುವುದು ಎಂದು ವಿವರಿಸಿದರು.