ಮಡಿಕೇರಿ, ಸೆ. ೧೪: ೨೦೨೧-೨೨ನೇ ಸಾಲಿನಲ್ಲಿ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಒಟ್ಟು ರೂ. ೨೮.೧೫ ಲಕ್ಷದಷ್ಟು ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಿ.ಕೆ. ಬಾಲಕೃಷ್ಣ ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರಸ್ತುತ ಬ್ಯಾಂಕಿನಲ್ಲಿ ೨,೪೮೮ ಮಂದಿ ಸದಸ್ಯರು ಇದ್ದು, ಅಧಿಕೃತ ಪಾಲು ಬಂಡವಾಳ ರೂ. ೧೬೭.೧೩ ಲಕ್ಷ ಸಂಗ್ರಹವಾಗಿದೆ ಹಾಗೂ ‘ಎ’ ತರಗತಿ ಪಾಲು ಒಂದರ ಮುಖಬೆಲೆ ರೂ. ೧,೦೦೦ ಆಗಿದೆ. ಬ್ಯಾಂಕಿನ ದುಡಿಯುವ ಬಂಡವಾಳ ರೂ. ೪,೪೪೪.೪೮ ಲಕ್ಷ ಆಗಿದ್ದು, ಕಳೆದ ಸಾಲಿಗಿಂತ ರೂ. ೪೭೦.೯೯ ಲಕ್ಷದಷ್ಟು ಅಧಿಕಗೊಂಡಿದೆ. ಬ್ಯಾಂಕ್ ಪ್ರಸ್ತುತ ರೂ. ೩,೯೩೦.೫೭ ಲಕ್ಷದಷ್ಟು ವಿವಿಧ ಠೇವಣಿಗಳನ್ನು ಹೊಂದಿದ್ದು, ಕಳೆದ ಸಾಲಿಗಿಂತ ರೂ. ೨೮೯.೮೬ ಲಕ್ಷದಷ್ಟು ಏರಿಕೆಯಾಗಿದೆ.
ಗ್ರಾಹಕರುಗಳಿಗೆ ಬ್ಯಾಂಕಿನಿAದ ರೂ. ೨,೫೯೭.೪೪ ಲಕ್ಷದಷ್ಟು ವಿವಿಧ ರೂಪದ ಸಾಲಗಳನ್ನು ನೀಡಿದ್ದು, ಈ ಪೈಕಿ ರೂ. ೬೩೨.೨೫ ಲಕ್ಷ ಜಾಮೀನು ಸಾಲ ಹಾಗೂ ರೂ. ೭೬೮.೪೬ ಲಕ್ಷ ಗಿರ್ವಿ ಸಾಲ ಹಾಗೂ ರೂ. ೯೪೪.೪೭ ಲಕ್ಷದಷ್ಟು ಬೆಲೆಯ ಚಿನ್ನಾಭರಣಗಳ ಈಡಿನ ಮೂಲಕ ಸಾಲ ನೀಡಿದ್ದು, ಒಟ್ಟು ಸಾಲ ನೀಡಿಕೆಯಲ್ಲಿ ‘ಅನುತ್ಪಾದಕ ಆಸ್ತಿ’ಯ ಪ್ರಮಾಣವು ರೂ. ೬೯.೩೭ ಲಕ್ಷ ಆಗಿದ್ದು ಶೇ. ೨.೬೭ ರಷ್ಟು ಆಗಿರುತ್ತದೆ. ಬ್ಯಾಂಕು ಆರ್.ಬಿ.ಐ. ನಿಯಮದಂತೆ ರೂ. ೧,೩೯೮.೭೨ ಲಕ್ಷದಷ್ಟು ಸಾಲವನ್ನು ಆದ್ಯತಾ ವಲಯಕ್ಕೆ ನೀಡಿದೆ ಹಾಗೂ ಪ್ರಸ್ತುತ ಸಾಲಿನಲ್ಲಿ ರೂ. ೩೮೨.೬೬ ಲಕ್ಷದಷ್ಟು ವಹಿವಾಟು ನಡೆಸಿದೆ ಹಾಗೂ ಶೇ. ೯೬.೨೬ ರಷ್ಟು ಸಾಲ ಮರುಪಾವತಿ ಆಗಿದೆ ಎಂದು ತಿಳಿಸಿದರು.
ಮಡಿಕೇರಿ ಜಿ.ಟಿ. ರಸ್ತೆಯಲ್ಲಿರುವ ಶಾಖೆಯಲ್ಲಿ ರೂ. ೩೩೪೩.೩೩ ಲಕ್ಷದಷ್ಟು ಒಟ್ಟು ವ್ಯವಹಾರ ನಡೆಸಿದ್ದು ರೂ. ೧೧.೪೫ ಲಕ್ಷದಷ್ಟು ಪ್ರಸ್ತುತ ಲಾಭಗಳಿಸಿದೆ. ಪ್ರಸ್ತುತ ಸಾಲಿನಲ್ಲಿ ಶಾಖೆ ರೂ. ೮೬೩.೨೧ ಲಕ್ಷ ಠೇವಣಿ ಹೊಂದಿದ್ದು ರೂ. ೫೭೧.೧೨ ಲಕ್ಷದಷ್ಟು ವಿವಧ ಸಾಲ ನೀಡಿದೆ ಎಂದು ಮಾಹಿತಿ ಇತ್ತರು.
ತಾ. ೧೭ ರಂದು ಮಹಾಸಭೆ
೨೦೨೧-೨೨ನೇ ಸಾಲಿನ ಮಹಾಸಭೆಯನ್ನು ಮಡಿಕೇರಿ ಕೊಡವ ಸಮಾಜದಲ್ಲಿ ತಾ. ೧೭ ರಂದು ನಡೆಸಲಾಗುವುದು ಎಂದು ತಿಳಿಸಿದರು.
ಸುದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಬಿ.ಎಂ. ರಾಜೇಶ್, ನಿರ್ದೇಶಕರುಗಳಾದ ಬಿ.ಕೆ. ಜಗದೀಶ್, ಸತೀಶ್, ಸತೀಶ್ ಪೈ ಹಾಗೂ ನಾಗೇಶ್ ಹಾಜರಿದ್ದರು.