ಗುಡ್ಡೆಹೊಸೂರು, ಸೆ. ೧೪: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೧-೨೨ನೇ ಸಾಲಿನಲ್ಲಿ ರೂ.೬೮.೦೫ ಲಕ್ಷಗಳ ಲಾಭ ಗಳಿಸಿದೆ.
ಸಂಘದ ವ್ಯಾಪ್ತಿಗೆ ೯ ಗ್ರಾಮಗಳು ಸೇರಿದ್ದು ೨೨೮೮ ಮಂದಿ ಸದಸ್ಯರನ್ನು ಹೊಂದಿದೆ. ಪಾಲುಬಂಡವಾಳ ರೂ. ೨೧೮.೦೭ ಲಕ್ಷ ಹೊಂದಿರುತ್ತದೆ. ೨೦೨೧-೨೨ನೇ ಸಾಲಿನಲ್ಲಿ ರೂ. ೧೭೧.೨೦ ಕೋಟಿ ವಹಿವಾಟು ನಡೆಸಿರುವ ಸಂಘ ೧೧೪.೧೧ ಲಕ್ಷಗಳ ಕ್ಷೇಮನಿಧಿಯನ್ನು, ೨೦೪.೦೯ ಲಕ್ಷಗಳ ಇತರ ನಿಧಿಯನ್ನು, ೨೪೦೮ ಲಕ್ಷಗಳ ಠೇವಣಿಯನ್ನು ಹೊಂದಿರುತ್ತದೆ. ಸಂಘದಿAದ ವಿವಿಧ ರೀತಿಯ ಸಾಲವನ್ನು ಸದಸ್ಯರಿಗೆ ವಿತರಿಸುತ್ತಿದ್ದು, ೨೦೨೧-೨೨ನೇ ಸಾಲಿಗೆ ರೂ. ೯೯೬.೫೨ ಲಕ್ಷಗಳ ಕೆ.ಸಿ.ಸಿ ಸಾಲವನ್ನು ರೂ. ೧೧೫.೯೪ ಲಕ್ಷಗಳ ಮಧ್ಯಮಾವಧಿ ಸಾಲವನ್ನು, ರೂ. ೪೪೬ ಲಕ್ಷಗಳ ಜಾಮೀನು ಸಾಲವನ್ನು, ರೂ. ೪೬.೮೪ ಲಕ್ಷಗಳ ವಾಹನ ಸಾಲವನ್ನು, ರೂ. ೧೭೬.೭೬ ಲ್ಷಗಳ ಗೃಹಸಾಲನವನ್ನು, ೧೮೩.೧೩ ಲಕ್ಷಗಳ ಆಭರಣ ಸಾಲವನ್ನು ಸದಸ್ಯರಿಗೆ ವಿತರಿಸಿದೆ. ಅಲ್ಲದೆ ಸಂಘದ ಮೂಲಕ ೧೧೬ ಸ್ವಸಹಾಯ ಸಂಘಗಳನ್ನು ರಚಿಸಿದ್ದು, ರೂ. ೪೩.೫೭ ಲಕ್ಷಗಳ ಠೇವಣಿಯನ್ನು ಸಂಗ್ರಹಿಸಿದೆ. ಸಂಘದಿAದ ರೂ. ೧೦೯.೯೫ ಲಕ್ಷಗಳ ಸಾಲವನ್ನು ನೀಡಲಾಗಿದೆ. ಈ ಎಲ್ಲಾ ಸಾಲಗಳನ್ನು ಸಂಘದ ಸ್ವಂತ ಬಂಡವಾಳದಿAದ ವಿತರಿಸಲಾಗುತ್ತಿದ್ದು, ೨೦೨೧-೨೨ನೇ ಸಾಲಿಗೆ ಸದಸ್ಯರಿಂದ ಶೇ. ೯೮.೫೦ ರಷ್ಟು ಸಾಲ ವಸೂಲಾತಿಯಾಗಿರುತ್ತದೆ.
ಸಂಘವು ನಂಜರಾಯಪಟ್ಟಣ, ವಾಲ್ನೂರು ಮತ್ತು ಗುಡ್ಡೆಹೊಸೂರು ಗ್ರಾಮದಲ್ಲಿ ದಿನಸಿ ಶಾಖೆಗಳನ್ನು ಹೊಂದಿದ್ದು, ಶಾಖೆಗಳ ಮೂಲಕ ರಸಗೊಬ್ಬರ, ಕ್ರಿಮಿನಾಶಕ, ಗ್ರಾಹಕರ ವಸ್ತುಗಳು, ಹತ್ಯಾರು, ಸಿಮೆಂಟ್, ಕೊಂಕಣ್ಗ್ಯಾಸ್, ನಿಯಂತ್ರಿತ ವಸ್ತುಗಳು, ಮದ್ದುಗುಂಡುಗಳ ಮಾರಾಟ ಮಾಡುತ್ತಿದ್ದು ರೂ. ೫೯.೮೮ ಲಕ್ಷಗಳ ಲಾಭ ಗಳಿಸಿರುತ್ತದೆ. ಅಲ್ಲದೆ ಬ್ಯಾಂಕಿನ ಮೂರು ಶಾಖೆಗಳಲ್ಲಿ ಬ್ಯಾಂಕಿAಗ್ ವ್ಯವಹಾರ ನಡೆಯುತ್ತಿದೆ.
ವಾಲ್ನೂರು ಶಾಖೆಯಲ್ಲಿ ಸಹಕಾರ ಸಭಾಂಗಣ ಸದಸ್ಯರಿಗೆ ಮದುವೆ ಇತರ ಸಮಾರಂಭಗಳಿಗೆ ರೀಯಾಯಿತಿ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. ಸಂಘದಲ್ಲಿ ಎರಡು ಟ್ರಾö್ಯಕ್ಟರ್ ಮತ್ತು ಒಂದು ಲಾರಿ ಹೊಂದಿದ್ದು, ಸಂಘದ ಸದಸ್ಯರಿಗೆ ಉಳುಮೆ ಮತ್ತು ಸಾಗಾಣಿಕೆ ನಡೆಸಲು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.
ಸಂಘದ ವತಿಯಿಂದ ೨ ರೈತ ಕೂಟಗಳು ಮತ್ತು ೨ ಜಂಟಿ ಭಾದ್ಯತಾ ಗುಂಪುಗಳನ್ನು ರಚಿಸಿದ್ದು ಯಶಸ್ವಿಯಾಗಿ ಕಾರ್ಯನಿರ್ವಯಿ ಸುತ್ತಿವೆೆ. ಪ್ರತಿ ವರ್ಷ ಸಂಘದ ವ್ಯಾಪ್ತಿಗೆ ಒಳಪಡುವ ೭ ಮತ್ತು ೧೦ನೇ ತರಗತಿಯಲ್ಲಿ ಹೆಚ್ಚು ಅಂಕಪಡೆದ ವಿಧ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಪ್ರತಿ ಶಾಲೆಯ ೩ ವಿಧ್ಯಾರ್ಥಿಗಳನ್ನು ಗೌರವಿಸಲಾ ಗುತ್ತಿದೆ. ಅಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಸಹಾಯ ಸಂಘಗಳಿಗೆ ಬಹುಮಾನ ವಿತರಿಸಲಾಗುತ್ತದೆ. ಸಂಘದ ಸದಸ್ಯರಿಗೆ ಅನುಕೂಲವಾಗುವಂತೆ ನೂತನವಾಗಿ ಈಗ ಇರುವ ಕಚೇರಿ ಪಕ್ಕದಲ್ಲಿ ಗೋದಾಮುಗಳು, ಮಳಿಗೆಗಳು ಮತ್ತು ಕಚೇರಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಸಂಘದ ಗುಡ್ಡೆಹೊಸೂರು ಶಾಖೆಯಲ್ಲಿ ಸ್ವದೇಶಿ ಉತ್ಪನ್ನಗಳ ಮೋದಿಕೇರ್ ವಸ್ತಗಳ ಮಾರಾಟ ಮಳಿಗೆ ತೆರೆಯಲಾಗಿದೆ. ಕೇಂದ್ರ ಕಚೇರಿಯಲ್ಲಿ ಸದಸ್ಯರ ಅನುಕೂಲಕ್ಕಾಗಿ ಇ ಸ್ಟಾಂಪಿAಗ್ ವ್ಯವಸ್ಥೆ ಮಾಡಲಾಗಿದೆ.
ಮಹಾಸಭೆ: ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆಯು ತಾ. ೧೮ ರಂದು ನಡೆಯಲಿದೆ. ಸದಸ್ಯರ ಪಾಲು ಹಣದ ಮೇಲೆ ಶೇ. ೧೨ರ ಡಿವಿಡೆಂಡ್ನ್ನು ನೀಡಲು ಮಹಾಸಭೆ ಒಪ್ಪಿಗೆ ಪಡೆದು ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಇಲ್ಲಿನ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಭೆ ನಡೆಯಲಿದೆ. ಸಂಘದ ಅಧ್ಯಕ್ಷರಾಗಿ ಮುರಳಿ ಮಾದಯ್ಯ, ಉಪಾಧ್ಯಕ್ಷರಾಗಿ ಬಿ.ಎಸ್. ಧನಪಾಲ್, ನಿರ್ದೇಶಕರುಗಳಾಗಿ, ಡಿ.ಎಲ್. ಮಹೇಶ್ಚಂದ್ರ, ಪಿ.ಬಿ. ಅಶೋಕ್, ಎನ್.ಬಿ. ಕಾಶಿ, ಕೆ.ಡಿ. ದಾದಪ್ಪ, ವಿ.ಎಸ್. ರಾಜಪ್ಪ, ಕೆ.ಜಿ. ಲೋಕನಾಥ್, ಎನ್. ಕಮಲಮ್ಮ, ಎಸ್.ಬಿ. ಅನಿತಾ, ಆರ್.ಕೆ. ಚಂದ್ರ, ಹೆಚ್.ಜೆ. ಕೃಷ್ಣ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಕೆ.ಟಿ. ಧನಂಜಯ ಮತ್ತು ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಬಿ.ವಿ. ಲತೀಶ್ ರೈ ಮತ್ತು ೬ ಮಂದಿ ಗುಮಾಸ್ತರು ಸೇರಿ ಒಟ್ಟು ೨೦ ಮಂದಿ ಸಿಬ್ಬಂದಿಗಳನ್ನು ಸಂಘವು ಹೊಂದಿದೆ.
-ಗಣೇಶ್ ಕುಡೆಕಲ್