ಕಣಿವೆ, ಸೆ. ೧೪ : ಇಲ್ಲಿಗೆ ಸಮೀಪದ ಬೈಲಕೊಪ್ಪ ಲಾಮಾ ಕ್ಯಾಂಪ್‌ನಲ್ಲಿರುವ ಸೆರಾಜೆ ಮೊನಾಸ್ಟಿçಕ್ ಇನ್ಸಿ÷್ಟಟ್ಯೂಟ್, ಮೈಸೂರು ವಿಶ್ವವಿದ್ಯಾಲಯ ಹಾಗೂ ತುಮಕೂರು ವಿಶ್ವವಿದ್ಯಾಲಯದ ನಡುವೆ ಒಪ್ಪಂದ ಕಾರ್ಯಕ್ರಮವು ಸೆರಾಜೆ ಮೊನಾಸ್ಟಿçಕ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೈಲಕೊಪ್ಪ ಸೆರಾಜೆ ವಿವಿಯ ವೆನ್ ಗೆಷೆ ತ್ಸೆತಾರ್ ಅವರು, ಇಂದು ಸೆರಜೆ ಮೊನಾಸ್ಟಿçಕ್ ಇನ್ಸಿ÷್ಟಟ್ಯೂಟ್, ಮೈಸೂರು ಹಾಗೂ ತುಮಕೂರು ವಿಶ್ವವಿದ್ಯಾಲಯದ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕುತ್ತಿರುವುದು ಅತ್ಯಂತ ಸಂತೋಷದಾಯಕವಾಗಿದೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಹೆಚ್ಚು ಶಿಕ್ಷಣವನ್ನು ಕಲಿಯಲು ಅನುಕೂಲವಾಗಲಿದೆ ಎಂದರು.

ನಂತರ ಮಾತನಾಡಿದ ಮೈಸೂರು ವಿಶ್ವವಿದ್ಯಾಲಯದ ಪ್ರೊ. ಆರ್.ಶಿವಪ್ಪ, ಬುದ್ಧರಿಗೆ ವಿಶ್ವದಾದ್ಯಂತ ಅನುಯಾಯಿಗಳಿದ್ದಾರೆ. ಪ್ರಾಚೀನ ಶಿಕ್ಷಣದ ಬಗ್ಗೆ ಇಂದಿನ ಪೀಳಿಗೆ ತಿಳಿದುಕೊಳ್ಳಬೇಕಾಗಿದೆ. ನಮ್ಮ ವಿಶ್ವವಿದ್ಯಾಲಯಲ್ಲಿ ಪ್ರಾಚೀನ ಶಿಕ್ಷಣ ಹಾಗೂ ಟಿಬೆಟಿಯನ್ ವಿಷಯಗಳ ಬಗ್ಗೆ ತರಬೇತಿ ನೀಡಲಿದ್ದೇವೆ. ಇದು ಇಲ್ಲಿನ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.

ತುಮಕೂರು ವಿಶ್ವವಿದ್ಯಾಲಯದ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ನಮ್ಮ ವಿಶ್ವ ವಿದ್ಯಾನಿಲಯವು ೧೮ ವರ್ಷಗಳನ್ನು ಪೂರ್ಣಗೊಳಿಸಿದೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹತ್ತಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭ ಎರಡು ಭಾಷೆಗಳಲ್ಲಿ ಅನುವಾದಿಸಿದ ಪುಸ್ತಕಗಳನ್ನು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಮಾಡಿದರು. ನಂತರ ವೆನ್ ಗೆಷೆ ತ್ಸೆತಾರ್ ಅವರು ಮೈಸೂರು ಹಾಗೂ ತುಮಕೂರು ವಿಶ್ವವಿದ್ಯಾಲಯದ ನಡುವೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು. ಕಾರ್ಯಕ್ರಮದಲ್ಲಿ ಕುಶಾಲನಗರದ ಇಂಜಿನಿಯರಿAಗ್ ಕಾಲೇಜು ಸೇರಿದಂತೆ ಇತರ ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿದ್ದರು. ವೇದಿಕೆಯಲ್ಲಿ ಇಗ್ನೋ ವಿಶ್ವವಿದ್ಯಾಲಯದ ಸಹಾಯಕ ಪ್ರಾದೇಶಿಕ ನಿರ್ದೇಶಕರಾದ ಹೇಮಾ ಮಾಲಿನಿ, ಸೆರಜೇ ಮೊನಾಸ್ಟಿçಕ್‌ನ ಪ್ರಮುಖರು ಇದ್ದರು.