ಸೋಮವಾರಪೇಟೆ, ಸೆ. ೧೪: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಆಚರಣೆಯ ಸವಿನೆನಪಿಗಾಗಿ ಪಟ್ಟಣದ ಚನ್ನಬಸಪ್ಪ ಸಭಾಂಗಣಕ್ಕೆ ನೂರು ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಚನ್ನಬಸಪ್ಪ ಸಭಾಂಗಣಕ್ಕೆ ಕುರ್ಚಿಗಳನ್ನು ಹಸ್ತಾಂತರಿಸಿದ ಸಂದರ್ಭ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಹೆಚ್.ಕೆ. ಮಾದಪ್ಪ ಮಾತನಾಡಿ, ಶತಮಾನೋತ್ಸವದ ಸವಿನೆನೆಪಿಗಾಗಿ ಚನ್ನಬಸಪ್ಪ ಸಭಾಂಗಣಕ್ಕೆ ನೂರು ಕುರ್ಚಿಗಳನ್ನು ನೀಡಬೇಕೆಂದು ಸಂಘದ ಆಡಳಿತ ಮಂಡಳಿ ತೀರ್ಮಾನಿಸಿದಂತೆ ಹಸ್ತಾಂತರಿಸಲಾಗಿದೆ. ಇದನ್ನು ಸಭಾಂಗಣದ ನಿರ್ವಹಣಾ ಸಮಿತಿ ಉತ್ತಮವಾಗಿ ನಿರ್ವಹಿಸಿಕೊಂಡು ಹೋಗುವಂತೆ ಮನವಿ ಮಾಡಿದರಲ್ಲದೆ, ಮುಂದಿನ ದಿನಗಳಲ್ಲಿ ಅಗತ್ಯತೆಗಳಿಗನುಗುಣವಾಗಿ ಸಹಕಾರ ನೀಡುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಚೌಡ್ಲು ಗ್ರಾ.ಪಂ. ಅಧ್ಯಕ್ಷ ಮಹೇಶ್ ತಿಮ್ಮಯ್ಯ ಮಾತನಾಡಿ, ಶಿಥಿಲಾವಸ್ಥೆಗೆ ತಲುಪಿದ್ದ ಸಭಾಂಗಣವನ್ನು ಅಭಿವೃದ್ಧಿಪಡಿ ಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಭಾಂಗಣಕ್ಕೆ ಸಾರ್ವಜನಿಕ ಉಪಯೋಗಕ್ಕಾಗಿ ಸೋಮವಾರ ಪೇಟೆ ಪ್ರಾ.ಕೃ.ಪ.ಸ. ಸಂಘ ಕುರ್ಚಿ ನೀಡಿರುವುದು ಶ್ಲಾಘನೀಯ ಎಂದರು.
ಶಾಲಾ ಪದವೀಧರ ಮುಖ್ಯಶಿಕ್ಷಕಿ ಎಂ.ಜೆ. ಅಣ್ಣಮ್ಮ ಮಾತನಾಡಿ, ಕಳೆದೆರಡು ವರ್ಷಗಳ ಹಿಂದೆ ಕೇವಲ ೮೪ ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಇದೀಗ ೩೫೬ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಶಾಲೆ ಹಾಗೂ ಸಭಾಂಗಣದ ಅಭಿವೃದ್ಧಿಗೆ ಶಾಲಾಭಿವೃದ್ಧಿ ಸಮಿತಿ ಸೇರಿದಂತೆ ಸಂಘ ಸಂಸ್ಥೆಗಳು ಹಾಗೂ ದಾನಿಗಳು ಕೈಜೋಡಿಸುತ್ತಿರುವುದು ಪ್ರಶಂಸ ನೀಯ ಎಂದು ಅಭಿಪ್ರಾಯಿಸಿದರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್, ಸಂಘದ ನಿರ್ದೇಶಕರುಗಳಾದ ಬಿ.ಡಿ. ಮಂಜುನಾಥ್, ಜಿ.ಬಿ. ಸೋಮಯ್ಯ, ಬಿ.ಎಂ. ಸುರೇಶ್, ದಿವಾನ್, ರೂಪಾ ಸತೀಶ್, ಅನಿತಾ ಆನಂದ್, ಚಂದ್ರಿಕಾ ಕುಮಾರ್, ಕಾರ್ಯನಿರ್ವ ಹಣಾಧಿಕಾರಿ ರವೀಂದ್ರ ಉಪಸ್ಥಿತರಿದ್ದರು. ಶಿಕ್ಷಕರುಗಳಾದ ಚಂದ್ರಕಲಾ ಸ್ವಾಗತಿಸಿ, ಹೆಚ್. ರಮೇಶ್ ವಂದಿಸಿದರು.