ಮಡಿಕೇರಿ, ಸೆ. ೧೩: ತಾಲೂಕಿನ ಪಾಲೂರು ಗ್ರಾಮದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಪಾಲೂರಿನ ನಿವಾಸಿ ಎಂ.ಎA. ಕಾಳಪ್ಪ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಅವರ ಮಗಳು ತೇಜಸ್ವಿನಿ ಘಟನೆÀ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿರುವ ತೇಜಸ್ವಿನಿ ತಮ್ಮ ತಂದೆಯೊAದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಕಳೆದ ಭಾನುವಾರ ಕೆಲಸದ ನಿಮಿತ್ತ ಪಾಲೂರು ಗ್ರಾಮದ ತಮ್ಮ ಮನೆಗೆ ಬಂದಿದ್ದರು. ಈ ವೇಳೆ ಮನೆಯ ಮುಖ್ಯ ಬಾಗಿಲಿನ ಮೂಲಕ ಒಳಗೆ ಪ್ರವೇಶಿಸಿಸುವ ಸಂದರ್ಭ ತಮ್ಮ ಕೋಣೆಯ ಬಾಗಿಲು ಒಡೆದಿರುವುದು ಗೋಚರಿಸಿದೆ. ಇದಾದ ಬಳಿಕ ಗಾಬರಿಗೊಂಡ ತೇಜಸ್ವಿನಿ ಮಂಚದ ಕೆಳಗೆ ಇದ್ದ ಬ್ಯಾಗ್‌ನಲ್ಲಿ ನೋಡಿದಾಗ ಚಿನ್ನಾಭರಣ ಕಳುವಾಗಿರುವುದು ಕಂಡುಬAದಿದೆ. ದೂರುದಾರರು ನೀಡಿರುವ ಮಾಹಿತಿಯಂತೆ ಒಂದು ಕೊಕ್ಕೆತಾತಿ, ೧೦ ಬಳೆಗಳು, ಒಂದು ನೆಕ್ಲೇಸ್, ಒಂದು ಪೆಂಡೆAಟ್, ಮೂರು ವಾಲೆ, ಎರಡು ಚಿನ್ನದ ನಾಣ್ಯ ಸೇರಿ ಭಾರಿ ಬೆಲೆ ಬಾಳುವ ಒಟ್ಟು ೧೦೭ ಗ್ರಾಂ ಚಿನ್ನಾಭರಣಗಳು ಕಳುವಾಗಿವೆ ಎಂದು ತಿಳಿದುಬಂದಿದೆ. ಇನ್ನೂ ಚಿನ್ನಾಭರಣ ಕದ್ದು ಕೈಚಳಕ ತೋರಿರುವ ಖದೀಮರು ಅಸಲಿ ಚಿನ್ನ ಕದ್ದ ಸ್ಥಳದಲ್ಲಿ ಬಳೆಗಳು ಸೇರಿ ಇನ್ನಿತರ ನಕಲಿ ಆಭರಣ ಇಟ್ಟಿದ್ದಾರೆ ಎಂಬುದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ. ಪ್ರಕರಣ ಸಂಬAಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.