ಸುಂಟಿಕೊಪ್ಪ, ಸೆ. ೧೩: ಅಂಗಡಿಯ ಮುಂದೆ ಮಾರಾಟಕ್ಕೆಂದು ಇಟ್ಟಿದ್ದ ಮಿಕ್ಸಿಯನ್ನು ಕಳ್ಳತನ ಮಾಡಿರುವ ಘಟನೆ ಸುಂಟಿಕೊಪ್ಪದ ಅಂಗಡಿ ಯೊಂದರಲ್ಲಿ ನಡೆದಿದೆ. ಗ್ರಾಹಕರನ್ನು ಸೆಳೆಯಲೆಂದು ಮಾಲೀಕರು ಮಿಕ್ಸಿ ಯೊಂದನ್ನು ಅಂಗಡಿಯ ಮುಂದೆ ಇಟ್ಟಿದ್ದರು. ಎಂದಿನAತೆ ಮಿಕ್ಸಿಯನ್ನು ಅಲ್ಲೆ ಇರಿಸಿ ಅಂಗಡಿ ಮುಚ್ಚಿ ಹೋಗಿದ್ದರು. ಬಳಿಕ ಬಂದು ನೋಡುವಾಗ ಮಿಕ್ಸಿ ಕಳ್ಳತನವಾಗಿದೆ.
ತಾ. ೯ ರಂದು ಇಲ್ಲಿನ ಟಾಪ್‌ಫಾರ್ಮ್ ಅಂಗಡಿಯಲ್ಲಿ ಕಳ್ಳತನ ಘಟನೆ ನಡೆದಿದ್ದು, ಯಾರಿಗೂ ತಿಳಿಯದಂತೆ ನಾಜೂಕಾಗಿ ಕಳವು ಮಾಡಿ ಮಡಿಕೇರಿಯಿಂದ ಕುಶಾಲನಗರದತ್ತ ತೆರಳುತ್ತಿದ್ದ ಬಸ್ಸಿನಲ್ಲಿ ಆರೋಪಿ ಪರಾರಿಯಾಗಿದ್ದಾನೆ. ಇದು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ.