ಮಡಿಕೇರಿ, ಸೆ. ೧೨: ಮಡಿಕೇರಿ ಮುಖ್ಯರಸ್ತೆಯಲ್ಲಿರುವ ಈಸ್ಟ್ ಎಂಡ್ ಪೆಟ್ರೋಲ್ ಬಂಕ್‌ನಿAದ ಶಾಲಾ ಬಾಲಕÀನೊಬ್ಬ ಒಂದು ಲಕ್ಷ ನಗದು ಕಳವು ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ತಾ. ೯ ರಂದು ಬೆಳಿಗ್ಗೆ ೭ ರಿಂದ ಮಧ್ಯಾಹ್ನ ೨ರ ವರೆಗೆ ಪೆಟ್ರೋಲ್ ಬಂಕ್ ವಹಿವಾಟಿನಲ್ಲಿ ಸಂಗ್ರಹವಾದ ಹಣವನ್ನು ವ್ಯವಸ್ಥಾಪಕ ಬಿ.ಕೆ. ತಮ್ಮಯ್ಯ ಬ್ಯಾಂಕ್‌ಗೆ ಜಮಾಯಿಸಲು ಕಚೇರಿಗೆ ನೀಡಿದ್ದರು. ನಂತರ ಸಂಗ್ರಹವಾದ ಹಣವನ್ನು ಸಂಜೆ ೫.೩೫ರ ವೇಳೆಗೆ ಪಕ್ಕದ ಡ್ರಾಯರ್‌ನಲ್ಲಿ ಇಟ್ಟು ತಮ್ಮಯ್ಯ
ಕಾಫಿ ಕುಡಿಯಲು ಹೊಟೇಲಿಗೆ ತೆರಳಿದ್ದರು. ಸಂಜೆ ೬ ಗಂಟೆಗೆ ಹಿಂದಿರುಗಿ ಹಣ ಇಟ್ಟ ಡ್ರಾಯರ್ ಪರಿಶೀಲಿಸಿದಾಗ ರೂ. ೩೦ಸಾವಿರ ನಗದು ಕಾಣೆಯಾಗಿದ್ದು, ಕೆಳಗಿನ ಡ್ರಾಯರ್‌ನಲ್ಲಿ ಹಲವು ಬಿಲ್ಲುಗಳ ಜೊತೆಗೆ ಜೋಡಿಸಿಟ್ಟಿದ್ದ ರೂ. ೭೦ ಸಾವಿರ ನಗದು ಕೂಡ ಕಾಣೆ ಯಾಗಿತ್ತು. ವ್ಯವಸ್ಥಾಪಕರು ಬಂಕ್‌ನ ಸಿಬ್ಬಂದಿಗಳನ್ನು ವಿಚಾರಿಸಿದರೂ ಯಾವುದೇ ಪ್ರಯೋಜನ
ವಾಗಲಿಲ್ಲ.
(ಮೊದಲ ಪುಟದಿಂದ) ಬಂಕ್‌ನಲ್ಲಿರುವ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ಸಂಜೆ ೫.೩೦ ರಿಂದ ೬ ಗಂಟೆಯ ಕಚೇರಿಯಲ್ಲಿ ಯಾರೂ ಇಲ್ಲದ ಸಮಯದ ನಡುವೆ ಕಚೇರಿಯ ಒಳನುಗ್ಗಿದ ಬಾಲಕನೊಬ್ಬ ವ್ಯವಸ್ಥಾಪಕರ ಕುರ್ಚಿಯಲ್ಲಿ ಕುಳಿತು ಡ್ರಾಯರ್ ತೆಗೆದು ಅದರಲ್ಲಿದ್ದ ನಗದನ್ನು ಚಾಣಾಕ್ಷತನದಿಂದ ಜೇಬಿಗೆ ಇಳಿಸಿ ಯಾರಿಗೂ ಸಂಶಯ ಬಾರದಂತೆ ಹೊರ ನಡೆಯುತ್ತಿರುವುದು ಕಂಡುಬAದಿದೆ. ವ್ಯವಸ್ಥಾಪಕ ತಮ್ಮಯ್ಯ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಸಿಸಿ ಕ್ಯಾಮರಾವನ್ನು (ಮೊದಲ ಪುಟದಿಂದ) ಬಂಕ್‌ನಲ್ಲಿರುವ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ಸಂಜೆ ೫.೩೦ ರಿಂದ ೬ ಗಂಟೆಯ ಕಚೇರಿಯಲ್ಲಿ ಯಾರೂ ಇಲ್ಲದ ಸಮಯದ ನಡುವೆ ಕಚೇರಿಯ ಒಳನುಗ್ಗಿದ ಬಾಲಕನೊಬ್ಬ ವ್ಯವಸ್ಥಾಪಕರ ಕುರ್ಚಿಯಲ್ಲಿ ಕುಳಿತು ಡ್ರಾಯರ್ ತೆಗೆದು ಅದರಲ್ಲಿದ್ದ ನಗದನ್ನು ಚಾಣಾಕ್ಷತನದಿಂದ ಜೇಬಿಗೆ ಇಳಿಸಿ ಯಾರಿಗೂ ಸಂಶಯ ಬಾರದಂತೆ ಹೊರ ನಡೆಯುತ್ತಿರುವುದು ಕಂಡುಬAದಿದೆ. ವ್ಯವಸ್ಥಾಪಕ ತಮ್ಮಯ್ಯ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಸಿಸಿ ಕ್ಯಾಮರಾವನ್ನು