ಗೋಣಿಕೊಪ್ಪ, ಸೆ. ೧೨: ರಸಗೊಬ್ಬರದ ಜೊತೆಯಲ್ಲಿ ಲಘು ಪೋಷಕಾಂಶ ಮಾರಾಟಕ್ಕೆ ಒತ್ತಡ ಹೇರುತ್ತಿರುವ ಜಾಲದ ಹಿಂದೆ ಜಿಲ್ಲೆಯ ಕೃಷಿ ಅಧಿಕಾರಿಗಳ ಕೈವಾಡವಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಜಿಲ್ಲೆಯ ಸಹಕಾರಿ ಸಂಘಗಳ ಸಹಕಾರದಲ್ಲಿ ಕಚೇರಿ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ.

ಸಾಗಾಟ ದರ ಹೆಚ್ಚಾಗುತ್ತದೆ ಎಂದು ರಸಗೊಬ್ಬರದ ಜತೆಯಲ್ಲಿ ಲಘು ಪೋಷಕಾಂಶವನ್ನು ರಸಗೊಬ್ಬರ ಉತ್ಪಾದನಾ ಕಂಪೆನಿಗಳು ಒತ್ತಾಯವಾಗಿ ವಿತರಿಸುತ್ತಿವೆ. ಯಾವ ಸಹಕಾರಿ ಸಂಘಗಳು ಲಘು ಪೋಷಕಾಂಶಕ್ಕೆ ಬೇಡಿಕೆ ಇಟ್ಟಿಲ್ಲ. ಪಡೆದುಕೊಳ್ಳದಿದ್ದಲ್ಲಿ ಸಹಕಾರ ಸಂಘಗಳ ಪರವಾನಗಿ ರದ್ದು ಪಡಿಸುವುದಾಗಿ ಕೃಷಿ ಅಧಿಕಾರಿಗಳು ಬೆದರಿಕೆ ಹಾಕುತ್ತಿರುವುದು ಸರಿಯಾದ ಕ್ರಮವಲ್ಲ. ರಸಗೊಬ್ಬರ ಕಂಪೆನಿಗಳಿಗೆ ಲಘು ಪೋಷಕಾಂಶ ವಿತರಣೆ ಮಾಡದಂತೆ ನಿಯಂತ್ರಣ ಮಾಡಲಿ. ಸ್ಪಂದಿಸದಿದ್ದಲ್ಲಿ ಕೃಷಿ ಇಲಾಖೆ ಪೋಷಕಾಂಶಕ್ಕೆ ಬೇಡಿಕೆ ಇಟ್ಟಿಲ್ಲ. ಪಡೆದುಕೊಳ್ಳದಿದ್ದಲ್ಲಿ ಸಹಕಾರ ಸಂಘಗಳ ಪರವಾನಗಿ ರದ್ದು ಪಡಿಸುವುದಾಗಿ ಕೃಷಿ ಅಧಿಕಾರಿಗಳು ಬೆದರಿಕೆ ಹಾಕುತ್ತಿರುವುದು ಸರಿಯಾದ ಕ್ರಮವಲ್ಲ. ರಸಗೊಬ್ಬರ ಕಂಪೆನಿಗಳಿಗೆ ಲಘು ಪೋಷಕಾಂಶ ವಿತರಣೆ ಮಾಡದಂತೆ ನಿಯಂತ್ರಣ ಮಾಡಲಿ. ಸ್ಪಂದಿಸದಿದ್ದಲ್ಲಿ ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಇಲಾಖೆ ೩೭ ವರ್ಷದ ಹಿಂದಿನ (೧೯೮೫ನೇ ಇಸವಿಯ) ಆದೇಶವನ್ನು ಇಟ್ಟುಕೊಂಡು ಸಹಕಾರಿ ಸಂಘಗಳ ಮೇಲೆ ಒತ್ತಡ ಹೇರುತ್ತಿದೆ. ಎಲ್ಲ ಕಂಪೆನಿಗಳು ಮುಂಗಡ ಹಣ ಪಡೆದು ಗೊಬ್ಬರ ವಿತರಣೆ ಮಾಡುತ್ತಿವೆ. ನಮ್ಮ ಬೇಡಿಕೆಗೆ ಅನುಗುಣವಾಗಿ ವಿತರಣೆ ಮಾಡದೆ, ಲಘುಪೋಷಕಾಂಶವನ್ನು ವಿತರಣೆ ಮಾಡುತ್ತಿವೆ. ಇದರಿಂದ ಸಂಘಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ದಂತಾಗಿದೆ. ಮೈಸೂರು, ಹಾಸನ, ಮಂಗಳೂರು ಭಾಗದಿಂದ ವಿತರಣೆ ಯಾಗುತ್ತಿರುವ

(ಮೊದಲ ಪುಟದಿಂದ) ರಸಗೊಬ್ಬರ ಸಾಗಿಸಲು ಲಾರಿಗಳು ಹಿಂದೇಟು ಹಾಕುತ್ತಿವೆ ಎಂಬ ನೆಪವೊಡ್ಡಿ ಹೆಚ್ಚುವರಿ ಬಾಡಿಗೆ ಕೂಡ ಪಡೆಯುತ್ತಿವೆ. ಸಹಕಾರಿ ಸಂಘಕ್ಕೆ ಲಾಭದ ಪ್ರಮಾಣ ಕೂಡ ತೀರಾ ಕಡಿಮೆಯಾಗಿದೆ. ಇದನ್ನು ಕೃಷಿ ಇಲಾಖೆ ನಿಯಂತ್ರಿಸಬೇಕಿದೆ.

ಈ ಬಗ್ಗೆ ಉಸ್ತುವಾರಿ ಸಚಿವ, ಸಹಕಾರಿ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಮನವೊಲಿಸಿ ಲಘು ಪೋಷಕಾಂಶ ನೀಡಲು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನಾ ಶೇಕ್ ತಿಳಿಸಿದ್ದರು. ಇದೀಗ ಇದೇ ಇಲಾಖೆಯಿಂದ ಸಹಕಾರ ಸಂಘಗಳ ಪರವಾನಗಿ ರದ್ದು ಪಡಿಸುವ ಎಚ್ಚರಿಕೆ ನೀಡಿರುವುದನ್ನು ತಿರಸ್ಕರಿಸುತ್ತೇವೆ. ಬೆದರಿಸುತ್ತಿರುವ ಕೃಷಿ ಇಲಾಖೆ ಹಾಗೂ ಗೊಬ್ಬರ ಕಂಪೆನಿಗಳ ನಡುವಿನ ಒಪ್ಪಂದವಿದ್ದು, ಪರಿಹಾರಕ್ಕೆ ಜಿಲ್ಲಾಧಿಕಾರಿ ನೇತೃತ್ವದ ಸಭೆಗೆ ಸಹಕಾರ ಸಂಘಗಳ ಅಧ್ಯಕ್ಷರನ್ನು ಸೇರಿಸಿ ಸಭೆ ಕರೆಯಲಿದೆ. ರೈತರಿಗೆ ಅನವಶ್ಯಕ ನಷ್ಟ ಮಾಡಲು ಸಹಕಾರ ಸಂಘದ ಚಿಂತನೆಯಲ್ಲಿಲ್ಲ. ಎಲ್ಲರೂ ಕೂಡ ರೈತ ವೃತ್ತಿಯ ಮೂಲ ಹೊಂದಿದ್ದೇವೆ. ಪರಿಹಾರ ಕ್ರಮಕ್ಕೆ ಮುಂದಾಗದಿದ್ದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಮಾರ್ಕೆಟಿಂಗ್ ಫೆಡರೇಷನ್ ನಿರ್ದೇಶಕ ಕೊಕ್ಕಂಡ ಕುಶ, ಗೋಣಿಕೊಪ್ಪ ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಮತ್ತು ಪರಿವರ್ತನಾ ಸಂಘದ ಅಧ್ಯಕ್ಷ ಕುಪ್ಪಂಡ ಚಿಟ್ಟಿಯಪ್ಪ, ನಿರ್ದೇಶಕರಾದ ಕಬ್ಬಚ್ಚೀರ ಸುಬ್ರಮಣಿ, ವೇದಪಂಡ ಕಿರಣ್, ಎನ್. ಎಂ. ಪ್ರಥ್ವ್ವಿರಾಜ್, ಎಚ್. ಮಣಿಕಂಠ, ಚೆಪ್ಪುಡೀರ ಮುದ್ದಪ್ಪ ಇದ್ದರು.