ಸುಂಟಿಕೊಪ್ಪ, ಸೆ. ೧೨: ಹರದೂರು ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಕನಾಟಕ ಪಂಚಾಯತ್ ರಾಜ್ ಆಯೋಗವು ಅನುಷ್ಠಾನ ಪಾಲುದಾರರಾದ ಆಧ್ಯಯನ್ ಕ್ವಾಲಿಟಿ ಎಜುಕೇಷನ್ ಪೌಂಡೇಷನ್ ಸಹಯೋಗದೊಂದಿಗೆ ‘ಗಟ್ಟಿಯಾಗಿ ಓದು’ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿದರು.

ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಒಗ್ಗೂಡಿ ಹರದೂರು ಗ್ರಂಥಾಲಯದಲ್ಲಿ ಕನಾಟಕ ಪಂಚಾಯತ್ ರಾಜ್ ಆಯೋಗವು ಅನುಷ್ಠಾನ ಪಾಲುದಾರರಾದ ಆಧ್ಯಯನ್ ಕ್ವಾಲಿಟಿ ಎಜುಕೇಷನ್ ಪೌಂಡೇಷನ್ ಸಹಯೋಗದೊಂದಿಗೆ ‘ಗಟ್ಟಿಯಾಗಿ ಓದು’ ಕಾರ್ಯಕ್ರಮವನ್ನು ಉದ್ಘಾಟಿಸಿ ಗ್ರಂಥಾಲಯಗಳಿಗೆ ಜನತೆಯು ಆಗಮಿಸಿ ಓದುವ ಹವ್ಯಾಸ ಬೆಳಸಿಕೊಳ್ಳಬೇಕೊಳ್ಳುವುದ್ದರಿಂದ ವೈಯಕ್ತಿಕ ಜ್ಞಾನವು ವೃದ್ಧಿಗೊಳ್ಳುತ್ತದೆ. ಸಾರ್ವಜನಿಕರು ನಿತ್ಯವು ಜಂಜಾಟದಲ್ಲಿದ್ದು ತಮ್ಮ ಅಲ್ಪಸಮಯವನ್ನು ಗ್ರಂಥಾಲಯಗಳಲ್ಲಿ ಓದಿಗಾಗಿ ಕಳೆಯುವುದು ಸೂಕ್ತ ಎಂದು ಅತಿಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ಪಂಚಾಯಿತಿ ಸದಸ್ಯರು, ಪಂಚಾಯಿತಿ ಸಿಬ್ಬಂದಿಗಳು, ಗ್ರಂಥಾಲಯ ಮೇಲ್ವಿಚಾರಕರು, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇದ್ದರು.