ಮಡಿಕೇರಿ, ಸೆ. ೧೨: ಸಂಘದ ಸದಸ್ಯರೆಲ್ಲರು ನಿರಂತರವಾಗಿ ಸಂಘದಲ್ಲಿ ವ್ಯವಹರಿಸಿದಾಗ ಮಾತ್ರ ಸಹಕಾರ ಸಂಘ ಲಾಭಗಳಿಸುವ ಮೂಲಕ ಅಭಿವೃದ್ಧಿಯಾಗಲು ಸಾಧ್ಯವೆಂದು ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕೊಡಗು ಸೌಹಾರ್ದ ಕ್ರೆಡಿಟ್ ಕೋ- ಆಪರೇಟಿವ್ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಹೇಳಿದರು.

೨೦೦೫ರಲ್ಲಿ ಪ್ರಾರಂಭವಾದ ಈ ಸಹಕಾರ ಸಂಘ ೨೦೮೨ ಸದಸ್ಯರೊಳ ಗೊಂಡು ರೂ. ೨೩,೨೫,೬೯೭.೦೦ ಲಾಭಗಳಿಸಿದ್ದು ಶೇ. ೧೦ ಡಿವಿಡೆಂಡ್ ನೀಡುತಿದ್ದು ಮುಂದಿನ ದಿನಗಳಲ್ಲಿ ಸಂಘ ಇನ್ನಷ್ಟು ಲಾಭಗಳಿಸಿದರೆ ಹೆಚ್ಚಿನ ಡಿವಿಂಡೆAಡ್ ನೀಡಲಿದೆ ಎಂದರು.

ಮೃತಪಟ್ಟ ಸದಸ್ಯರಿಗೆ ಸಂತಾಪ, ಕಳೆದ ಮಹಾಸಭೆಯ ನಡಾವಳಿಕೆಯ ಅಂಗೀಕಾರ, ಆಡಳಿತ ಮಂಡಳಿಯ ವರದಿ, ಲೆಕ್ಕಪರಿಶೋಧನಾ ವರದಿ ಅಂಗೀಕಾರ, ಮುಂಗಡ ಪತ್ರಕ್ಕಿಂತ ಹೆಚ್ಚಿಗೆ ಖರ್ಚಾದುದಕ್ಕೆ ಅಂಗೀಕಾರ, ಅಂದಾಜು ಮುಂಗಡ ಪತ್ರ ಮಂಜೂ ರಾತಿ, ನಿವ್ವಳ ಲಾಭದ ವಿಲೇವಾರಿ, ಬೈಲಾ ತಿದ್ದುಪಡಿಯ ಬಗ್ಗೆ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಕರ್ನಾಟಕ ರಾಜ್ಯ ಸೌಹಾರ್ದ ಸಂಘಗಳ ಮೇಲ್ವಿಚಾರಣಾ ಅಧಿಕಾರಿ ಮಾತನಾಡಿ ಸಹಕಾರ ಸಂಘಗಳು ಉತ್ತಮ ರೀತಿಯಿಂದ ಕಾರ್ಯನಿರ್ವ ಹಿಸುವುದರ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿದೆ. ಕೊಡವ ಸಮಾಜಗಳೆಲ್ಲವು ಸಹಕಾರ ಸಂಘವನ್ನು ಪ್ರಾರಂಭಿಸು ವಂತಾಗಬೇಕೆAದರು.

ಸದಸ್ಯರಾದ ಬೊಟ್ಟೋಳಂಡ ಕಾಶಿ ಅಚ್ಚಯ್ಯ ಪ್ರಾರ್ಥಿಸಿ, ಉಪಾಧ್ಯಕ್ಷೆ ಅಂಜಪರವAಡ ಉಷಾ ಉತ್ತಯ್ಯ ವಂದಿಸಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಳ್ಳೇಂಗಡ ನೀಮಾ ನಿರೂಪಿಸಿದರು.

ಸನ್ಮಾನ: ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಪುತ್ತರಿರ ಕರುಣ್ ಕಾಳಯ್ಯ, ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಪಟ್ಟಮಾಡ ಜಯಂತಿ, ಹತ್ತನೆ ತರಗತಿಯಲ್ಲಿ ಅತ್ಯುನ್ನತ ಅಂಕಪಡೆದ ಕೇಕಡ ಸೋನಿಕಾ, ಪಿಯುಸಿಯಲ್ಲಿ ಮೂವೆರ ಲೇಖನಾ ಮುತ್ತಕ್ಕಳಿಗೆ ಸಂಘದ ವತಿಯಿಂದ ಗೌರವಿಸಲಾಯಿತು.

ವೇದಿಕೆಯಲ್ಲಿ ನಿರ್ದೇಶಕರು ಗಳಾದ ಚೋವಂಡ ಡಿ. ಕಾಳಪ್ಪ, ಮಣವಟ್ಟಿರ ಬಿ.ಮಾಚಯ್ಯ, ನಾಟೋಳಂಡ ಡಿ. ಚರ್ಮಣ, ಕೊಂಗAಡ ಎ. ತಿಮ್ಮಯ್ಯ, ಪಟ್ಟಡ ಎ. ಕರುಂಬಯ್ಯ, ಕುಡುಮಂಡ ಬಿ. ಉತ್ತಪ್ಪ, ನಂದೇಟಿರ ಪಿ. ರಾಜ ಮಾದಪ್ಪ, ಕೇಕಡ ಯಂ. ಸುಗುಣ, ಶಾಂತೆಯAಡ ಟಿ. ದೇವರಾಜ್, ಚೊಟ್ಟೇಯಾಂಡಮಾಡ ಬೇಬಿ ಪೂವಯ್ಯ ಸಿಬ್ಬಂದಿಗಳಾದ ಚೋವಂಡ ಪಿ. ಗೌತಮ್ ಮೇದಪ್ಪ, ತಾತಿರ ಅಯ್ಯಪ್ಪ ಹಾಜರಿದ್ದರು.