ಕೂಡಿಗೆ, ಸೆ. ೧೩ : ಕೂಡಿಗೆ ಗಾ.ಪಂ. ಹುದುಗೂರು, ಮದಲಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದಲೂ ಸತತವಾಗಿ ಕಾಡಾನೆಗಳ ಹಿಂಡು ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಆಗಮಿಸಿ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಭತ್ತದ ಗದ್ದೆಗಳನ್ನು ತುಳಿದು ತಿಂದು ಬಾರಿ ನಷ್ಟ ಪಡಿಸಿವೆ.

ಸಾರ್ವಜನಿಕರ ಮತ್ತು ಆ ಭಾಗದ ರೈತರ ದೂರಿನ ಮೇರೆಗೆ ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿ ಚೇತನ್ ಮತ್ತು ತಂಡದ ವರು ಎರಡು ಗ್ರಾಮಗಳ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮಸ್ಥರಿಂದ ರಸ್ತೆ ತಡೆಗೆ ಸಿದ್ಧತೆ

ಕಳೆದ ಒಂದು ವಾರದಿಂದ ಸತತ ವಾಗಿ ಹುದುಗೂರು ಮದಲಾಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ನಡೆಯುತ್ತಿದರೂ ಸಹ ಅರಣ್ಯ ಪ್ರದೇಶದ ಕಡೆಗೆ ಓಡಿಸುವ ಕೆಲಸವನ್ನು ಅರಣ್ಯ ಇಲಾಖೆಯ ಅಧಿಕಾರಿ ವರ್ಗದವರು ಮಾಡದ ಕಾರಣ ಹುದುಗೂರು, ಮದಲಾಪುರ ವ್ಯಾಪ್ತಿಯ ರೈತ ಒಕ್ಕೂಟ ಮತ್ತು ರೈತ ಸಂಘದ ಮೂಲಕ ಹುದುಗೂರು ಮದಲಾಪುರ ಸೋಮವಾರಪೇಟೆ ರಸ್ತೆ ತಡೆಮಾಡು ವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.