ಸಿದ್ದಾಪುರ, ಸೆ. ೧೨: ವ್ಯಕ್ತಿಯೊಬ್ಬರ ಮೇಲೆ ಕರಡಿ ಧಾಳಿ ನಡೆಸಿ ಗಂಭೀರ ಗಾಯಗೊಳಿಸಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ಮಾಲ್ದಾರೆ ಗ್ರಾಮದ ಗಡಿ ಭಾಗದಲ್ಲಿ ಸಂಭವಿಸಿದೆ.
ಮಾಲ್ದಾರೆ ಸಮೀಪದ ಕೊಡಗಿನ ಗಡಿಭಾಗದ ಲಿಂಗಾಪುರದ ನಿವಾಸಿಯಾಗಿರುವ ರಾಮಚಂದ್ರ ಎಂಬಾತನ ಮೇಲೆ ಸೋಮವಾರದಂದು ಮನೆಯ ಬಳಿ ಕರಡಿಯೊಂದು ಧಾಳಿ ನಡೆಸಿದೆ. ಪರಿಣಾಮ ರಾಮಚಂದ್ರನ ತಲೆ, ಮುಖ ಹಾಗೂ ಕೈ, ಕಾಲುಗಳಿಗೆ ಗಂಭೀರವಾದ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.