ವೀರಾಜಪೇಟೆ, ಸೆ.೧೨: ಕರಡ ಗ್ರಾಮದ ಇತಿಹಾಸ ಪ್ರಸಿದ್ಧ ಮಲೆತಿರಿಕೆ ಬೆಟ್ಟದಲ್ಲಿ ಗಂಟೆಗಳ ಕಳವು ಪ್ರಕರಣ ಮಾಸುವ ಮುನ್ನವೇ ಗ್ರಾಮಾಂತರ ಪ್ರದೇಶಗಳ ದೇವಾಲಯಗಳಲ್ಲಿ ಅಳವಡಿಸಲಾಗಿದ್ದ ಗಂಟೆಗಳು ಕಳವಾಗಿರುವ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ಪ್ರಮುಖ

(ಮೊದಲ ಪುಟದಿಂದ) ದೇವಾಲಯ ಶ್ರೀ ಮಹಾದೇವ ದೇವಸ್ಥಾನದಲ್ಲಿ ತಡ ರಾತ್ರಿ ಗಂಟೆಗಳು ಕಳವಾಗಿದೆ. ಕೆದಮುಳ್ಳೂರು ಗ್ರಾಮದ ಶ್ರೀ ಮಹಾದೇಶ್ವರ ದೇವಾಲಯಕ್ಕೆ ಹರಕೆ ರೂಪದಲ್ಲಿ ನೀಡಲಾಗಿದ್ದ ಸುಮಾರು ೧೫ ಗಂಟೆಗಳನ್ನು ಕಳ್ಳರು ಕಳ್ಳತನ ಮಾಡಿ ಹೊರ ನಡೆದಿದ್ದಾರೆ. ಇಂದು ಬೆಳಿಗ್ಗೆ ಎಂದಿನAತೆ ದೇವಾಲಯದ ಅರ್ಚಕ ರಾಧಾಕೃಷ್ಣ ಭಟ್ ಅವರು ಪೂಜೆ ಸಲ್ಲಿಸಲು ಆಗಮಿಸಿದ ವೇಳೆ ದೇವಾಲಯ ಪ್ರಾಂಗಣದಲ್ಲಿ ಅಳವಡಿಸಲಾಗಿದ್ದ ಗಂಟೆಗಳು ಮಾಯವಾಗಿದ್ದವು. ಅರ್ಚಕರು ತಕ್ಷಣವೇ ಆಡಳಿತ ಮಂಡಳಿಯ ಅಧ್ಯಕ್ಷರಿಗೆ ದೂರವಾಣಿ ಕರೆಯ ಮೂಲಕ ಮಾಹಿತಿ ತಿಳಿಸಿದ್ದಾರೆ. ದೇಗುಲದಲ್ಲಿ ಒಟ್ಟು ೧೫ ಗಂಟೆಗಳು ಕಳವಾಗಿದ್ದು ಸುಮಾರು ೧೦-೧೫ ಸಾವಿರ ರೂ. ಬೆಲೆಬಾಳುತ್ತದೆ ಎಂದು ಅಂದಾಜಿಸಲಾಗಿದೆ. ಅಧ್ಯಕ್ಷ ಮಾಳೇಟೀರ ಸನ್ನಿ ಕಾವೇರಪ್ಪ ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಕ್ಕೆ ಸಂಬAಧಿಸಿದAತೆ ವಿಧಿ ವಿಜ್ಞಾನ ವಿಭಾಗ ಮೈಸೂರು ವಲಯದ ಅಧಿಕಾರಿಗಳು ಮತ್ತು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

*ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟೋಳಿ ಗ್ರಾಮದ ಶ್ರೀ ಧಾರಾಮಹೇಶ್ವರ ದೇವಾಲಯದ ಹೊರಭಾಗದಲ್ಲಿ ಭಕ್ತರು ಹರಕೆಯ ರೂಪದಲ್ಲಿ ನೀಡಿದ್ದ ಸುಮಾರು ೮ ಗಂಟೆಗಳನ್ನು ಕಳ್ಳತನ ಮಾಡಿರುವುದಾಗಿ ದೇಗುಲದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಚಂಗಚAಡ ರತ್ನ ಅಯ್ಯಣ್ಣ ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.