ವೀರಾಜಪೇಟೆ, ಸೆ. ೧೩: ವೀರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಮಾಜದ ವತಿಯಿಂದ ಶ್ರೀ ನಾರಾಯಣ ಗುರು ಜಯಂತಿಯನ್ನು ಅಂಬಟ್ಟಿ ಬಿಲ್ಲವ ಸಮಾಜದಲ್ಲಿ ಆಚರಿಸಲಾಯಿತು. ಸಮಾಜ ಬಾಂಧವರು ಶ್ರೀ ನಾರಾಯಣ ಗುರುಗಳ ಪುತ್ತಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಈ ಸಂದರ್ಭ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್.ಎಸ್. ಎಲ್.ಸಿ.ಯಲ್ಲಿ ಆಶ್ಲೇಶ್ ಬಿ.ಜಿ., ಹರ್ಷಿತಾ ಬಿ.ಜಿ., ಬಿ.ಎಸ್. ಭುಮಿಕಾ, ಅಭಿಜ್ಞಾ ಪಿ.ಎಸ್., ಬಿ.ಕೆ. ಕೌಶಿಕ್, ನಿಶ್ಚಲ್ ಬಿ.ಡಿ., ವರ್ಷ ಬಿ.ಪಿ., ಚೈತನ್ಯ ಬಿ.ಪಿ., ಜೀವಿತ್ ಅಂಚನ್, ರಚನಾ ಬಿ.ವಿ., ನಿಖಿತಾ ಸುವರ್ಣ, ಪ್ರೇಕ್ಷಿತ್ ಬಿ.ಎಸ್.. ಪಿ.ಯು.ಸಿ.ಯಲ್ಲಿ ಬಿ.ಜೆ. ಲಾಸ್ಯ, ಪ್ರಪುಲ್ ಬಿ.ಆರ್., ಜಯಶ್ರೀ ಬಿ.ಪಿ ಇವರುಗಳನ್ನು ಸನ್ಮಾನಿಸ ಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಬಿ.ಎಂ. ಗಣೇಶ್, ಗೌರವ ಅಧ್ಯಕ್ಷ ಬಿ.ಆರ್. ರಾಜ, ಉಪಾಧ್ಯಕ್ಷ ಪುರುಷೋತಮ್, ಖಜಾಂಚಿ ಬಿ.ಎಂ. ಸತೀಶ್, ಕಾರ್ಯದರ್ಶಿ ಜನಾರ್ಧನ್, ಉಪಕಾರ್ಯದರ್ಶಿ ಲಕ್ಷö್ಮಣ್, ಉದ್ಯಮಿಗಳಾದ ಬಿ.ಆರ್. ಬೋಜಪ್ಪ, ಬಿ.ಎಸ್ ನಾರಾಯಣ್, ಬಿ.ಆರ್. ಲಿಂಗಪ್ಪ ಮತ್ತಿತರರು ಹಾಜರಿದ್ದರು.