ಮಡಿಕೇರಿ, ಸೆ. ೧೩: ಇತ್ತೀಚೆಗೆ ಕೊಡಗು ಜಿಲ್ಲೆಗೆ ರಾಜ್ಯ ವಿಪಕ್ಷನಾಯಕ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಭೇಟಿ ನೀಡಿದ ಸಂದರ್ಭ ನಡೆದ ಮೊಟ್ಟೆ ಎಸೆತ ಪ್ರಕರಣ ಇಂದು ರಾಜ್ಯವಿಧಾನ ಸಭೆಯೊಳಗೂ ಪ್ರತಿಧ್ವನಿಸಿತು. ಅಧಿವೇಶನ ಸಂದರ್ಭ ಈ ವಿಷಯದ ಕುರಿತಾಗಿ ಸಿದ್ದು ಸೇರಿದಂತೆ ಕೊಡಗಿನ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರುಗಳ ನಡುವೆ ತೀವ್ರ ವಾಕ್ಸಮರವೂ ನಡೆದ ಪ್ರಸಂಗ ನಡೆಯಿತು.

ಕೇಳಿಬಂದ ಮಾತಿನ ಚಕಮಕಿ...

ನಾನು ಮಡಿಕೇರಿಗೆ ಡಿಸಿ ಕಚೇರಿ ಗೋಡೆ ಕುಸಿತ ನೋಡಲು ಹೋದಾಗ ನನಗೆ ಕಪ್ಪು ಬಾವುಟ ತೋರಿಸಿದರು, ಮೊಟ್ಟೆ ಎಸೆದರು ಎಂದು ಸಿದ್ದರಾಮಯ್ಯ ಹೇಳಿದರು... ಈ ವೇಳೆ ಅದೇನೋ ಬೇರೆ ಕಾರಣ ಅಂತಾ ನಾನು ಪತ್ರಿಕೆಯಲ್ಲಿ ಓದಿದೆ ಎಂದ ಸ್ಪೀಕರ್... ಕೊಡಗಿನವರು ಏನು ಹೇಳ್ತಾರೆ ಇದರ ಬಗ್ಗೆ ಎಂದು ಕೊಡಗಿನ ಶಾಸಕರನ್ನು ಕೇಳಿದರು.

ಈ ವೇಳೆ ಉತ್ತರ ನೀಡಲು ಮುಂದಾದ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ... ನಿಮ್ಮ ಮೇಲೆ ಕೊಡಗಿನಲ್ಲಿ ಸಿಟ್ಟು ಇತ್ತು, ಸಾವರ್ಕರ್ ಬಗ್ಗೆ ಮಾತಾಡಿದ್ರಿ ನೀವು ಎಂದು ಪ್ರತಿಕ್ರಿಯಿಸಿದರು...

ಈ ವೇಳೆ ಸಿದ್ದರಾಮಯ್ಯ ಅಪ್ಪಚ್ಚು ರಂಜನ್ ಹೊಡೆಸಿದ್ದು... ಇದಕ್ಕೆ ಹೆದರುವ ಮಗ ಅಲ್ಲ ನಾನು... ರಾಜ್ಯದಲ್ಲಿ ಬೇಕಾದಷ್ಟು ಈ ತರಹ ಮಾಡಿಸಲು ಬರುತ್ತದೆ ನನಗೆ, ಆದರೆ ಹಾಗೆ ಮಾಡಲ್ಲ. ನೀವು ಮೊಟ್ಟೆ ಎಸೆದರೆ ನಮಗೆ ಕಲ್ಲು ಎಸೆಯಲು ಬರುತ್ತದೆ.

ನಾವು ಮೊದಲು ಈ ಕೆಲಸ ಮಾಡಿಯೇ ಬಂದಿರೋದು... ಇದಕ್ಕೆಲ್ಲಾ ನಾನು ಹೆದರೋದಿಲ್ಲ. ಮೊಟ್ಟೆ ಎಸೆದ್ರೆ ನೀವೇನು ವೀರರಾ ಶೂರರಾ? ಇದಕ್ಕೆಲ್ಲಾ ಹೆದರುವ ಮಕ್ಕಳಲ್ಲ ನಾವು, ಅದೇ ಮೊಟ್ಟೆ ಎಸೆಯುವ ಕೆಲಸ ಇಡಿ ರಾಜ್ಯಾದ್ಯಂತ ಮಾಡಿಸಬಲ್ಲೆ. ಆದ್ರೆ ಅಂತಹ ಕೆಲಸ ಮಾಡಲ್ಲ ಎಂದು ಸಿದ್ದು ಗುಡುಗಿದರು... ನಿಮ್ಮ ಪಾರ್ಟಿಯವರೇ ಮೊಟ್ಟೆ ಒಡೆದಿದ್ದು ಎಂದು ರಂಜನ್ ಹೇಳಿದರು.

ಕೊಡಗಿಗೆ ಟಿಪ್ಪು ಜಯಂತಿ ಮಾಡಿ ಅವಮಾನ ಮಾಡಿದವರು ನೀವು ಎಂದು ಬೋಪಯ್ಯ, ಅಪ್ಪಚ್ಚು ರಂಜನ್ ಕೂಡ ಖಾರವಾಗಿಯೇ ಪ್ರತಿಕ್ರಿಯಿಸಿದರು. ಕೊಡಗಿನ ಜನ ಒಳ್ಳೆಯವರು ನಿಮ್ಮಿಂದಾಗಿ ಕೊಡಗು ಇಂದು ಹಾಳಾಗ್ತಾ ಇದೆ. ಗೂಟ ಹೊಡೆದುಕೊಂಡು ನೀವೇ ಇರುತ್ತೀರಾ ಎಂದು ಬೋಪಯ್ಯ, ರಂಜನ್‌ಗೆ ಸಿದ್ದರಾಮಯ್ಯ ಪ್ರಶ್ನಿಸಿದರು.

ಎರಡು ಮೊಟ್ಟೆ ಕಾರಿನ ಮೇಲೆ ಬಿತ್ತು, ಹಿಂದಿನಿAದ ಕಲ್ಲು ಹೊಡೆದರು... ಪೊಲೀಸರು ನಿಷ್ಕಿçÃಯರಾಗಿ ನಿಂತಿದ್ದರು. ಕೊಡಗಿನವರು ಮಾಡಿಲ್ಲ, ನೀವೇ ಮಾಡಿಸಿದ್ದು ಎಂದು ಶಾಸಕರಾದ ಬೋಪಯ್ಯ

(ಮೊದಲ ಪುಟದಿಂದ) ಮತ್ತು ಅಪ್ಪಚ್ಚು ಮೇಲೆ ಸಿದ್ದರಾಮಯ್ಯ ಆರೋಪಿಸಿದರು. ಇದಕ್ಕೆ ನಾವೂ ಕೊಡಗಿನವರೇ ಎಂದು ಬೋಪಯ್ಯ ಹೇಳಿದಾಗ ಯಾಕೆ ಅಪ್ಪಚ್ಚು ಬಿಡಿಸಿಕೊಂಡು ಬರಲು ಸ್ಟೇಷನ್‌ಗೆ ಹೋಗಿದ್ರು ಎಂದು ಸಿದ್ದರಾಮಯ್ಯ ಕೇಳಿದರು. ಕಪ್ಪ್ಪು ಬಾವುಟ ಹಿಡಿದವರನ್ನು ಬಿಡಿಸಲು ಹೋಗಿದ್ದೆ ಎಂದು ಅಪ್ಪಚ್ಚು ರಂಜನ್ ನುಡಿದರು.

ಅಂದೊಮ್ಮೆ ಜನಾರ್ದನ ರೆಡ್ಡಿ ಮತ್ತು ಬ್ರದರ್ಸ್ ರ‍್ರೀ ಬಳ್ಳಾರಿಗೆ ಅಂತಾ ಹೇಳಿದ್ದರು. ಅದೇ ರೀತಿ ಬೋಪಯ್ಯ ಬನ್ನಿ ಕೊಡಗಿಗೆ ಎಂದಿದ್ದಾರೆ... ನೀವು ಸೆಕ್ಷನ್೧೪೪ ಹಾಕದೇ ಇರಬೇಕಾಗಿತ್ತು ಎಂಬದಾಗಿ ಸಿದ್ದರಾಮಯ್ಯ ಹೇಳಿದಾಗ... ನಿಮ್ಮ ವಕ್ತಾರರು ಸವಾಲು ಹಾಕಿದ್ದಕ್ಕೆ ಬನ್ನಿ, ನಮ್ಮ ಮನೆ ನಾಯಿ ಸ್ವಾಗತ ಮಾಡುತ್ತದೆ ಎಂದು ಹೇಳಿದ್ದೆ ಎಂದು ಬೋಪಯ್ಯ ಉತ್ತರಿಸಿದರು.

ನಾಳೆಯೇ ಕೊಡಗಿಗೆ ಬರ್ತಿನಿ, ನಿಮ್ಮ ಮನೆಗೇ ಬರ್ತೀನಿ ಎಂದು ಸಿದ್ದರಾಮಯ್ಯ ಹೇಳಿದಾಗ ನಮ್ಮ ಮನೆಗೆ ಬನ್ನಿ ಎಂದು ನಗುತ್ತಾ ಬೋಪಯ್ಯ ಕರೆದ ಪ್ರಸಂಗ ಇಂದಿನ ಈ ಚರ್ಚೆಯಲ್ಲಿ ವಿಶೇಷವಾಗಿ ಗಮನ ಸೆಳೆಯಿತು.

ಸಿದ್ದರಾಮಯ್ಯರಿಗೆ ಪೊಲೀಸ್ ರಕ್ಷಣೆ ಕೊಟ್ಟಿಲ್ಲ ಅನ್ನೋದು ಸುಳ್ಳು. ಪೊಲೀಸರು ನಿಷ್ಕಿçÃಯರಾಗಿರಲಿಲ್ಲ. ಬೆಂಗಾವಲಾಗಿದ್ದರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆಯಿತ್ತರು.