ಮಡಿಕೇರಿ, ಸೆ. ೧೩: ಕೊಡಗು ಜಿಲ್ಲೆಯ ರೈತರು ಹಾಗೂ ಸಂಘಟನೆಗಳಿAದ ಜಿಲ್ಲೆಯ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ಮೂಲ ರಸಗೊಬ್ಬರವನ್ನು ರೈತರು ಖರೀದಿಸುವ ಸಂದರ್ಭದಲ್ಲಿ ಮೂಲ ರಸಗೊಬ್ಬರದೊಡನೆ ರೈತರಿಂದ ಬೇಡಿಕೆ ಇಲ್ಲದಿದ್ದರೂ ತಮ್ಮ ಸಂಸ್ಥೆಯ ಪಾಲಿಹ್ಯಾಲ್ಯೇಟನ್ನು ಕಡ್ಡಾಯವಾಗಿ ಜೋಡಿಸಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ.
ಇನ್ನು ಮುಂದೆ ಕೊಡಗು ಜಿಲ್ಲೆಯ ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಮಾರಾಟಗಾರರ ಮೂಲಕ ರೈತರಿಗೆ ರಸಗೊಬ್ಬರವನ್ನು ವಿತರಿಸುವಾಗ ತಮ್ಮ ಸಂಸ್ಥೆಯ ಇತರೆ ರಸಗೊಬ್ಬರ ಲಘು ಪೋಷಕಾಂಶಗಳನ್ನು ಜೋಡಣೆ ಮಾಡಿ ಖರೀದಿಸಲು ಒತ್ತಾಯ ಮಾಡುವುದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನಾ ಎಂ. ಷೇಕ್ ಎಚ್ಚರಿಸಿದ್ದಾರೆ.
ಆದೇಶ ಮೀರಿ ರೈತರಿಗೆ ಯಾವುದಾದರೂ ಷರತ್ತುಗಳನ್ನು ವಿಧಿಸಿರುವ ಬಗ್ಗೆ ದೂರುಗಳು ಕಂಡು ಬಂದಲ್ಲಿ ತಮ್ಮ ಹಾಗೂ ತಮ್ಮ ಸಂಸ್ಥೆಯ ಮೇಲೆ ಅಗತ್ಯ ವಸ್ತುಗಳ ಕಾಯ್ದೆ ೧೯೫೫ ಮತ್ತು ರಸಗೊಬ್ಬರ ನಿಯಂತ್ರಣ ಆದೇಶ ೧೯೮೫ ರಡಿ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಷೇಕ್ ಎಚ್ಚರಿಸಿದ್ದಾರೆ.