ಕುಶಾಲನಗರ, ಸೆ. ೧೩: ಪ್ರತಿಯೊಬ್ಬರೂ ಪ್ರಕೃತಿಯನ್ನು ಆರಾಧಿಸುವ ಮೂಲಕ ಉಳಿಸಿ ಬೆಳಸುವಂತಾಗಬೇಕು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಕರೆÀ ನೀಡಿದರು.

ಕುಶಾಲನಗರದಲ್ಲಿ ಕಾವೇರಿ ಮಹಾ ಆರತಿ ಬಳಗ ಆಶ್ರಯದಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯ ಆಡಳಿತ ಮಂಡಳಿ ಸಹಯೋಗದೊಂದಿಗೆ ನಡೆದ ೧೩೫ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ತಲಕಾವೇರಿಯಲ್ಲಿ ಹುಟ್ಟಿ ಸಮುದ್ರ ಸಂಗಮ ತನಕ ಕೋಟ್ಯಂತರ ಜನ ಜಾನುವಾರುಗಳ ಜೀವ ನದಿಯಾಗಿರುವ ಕಾವೇರಿ ಕಲುಷಿತವಾಗದಂತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕು. ಸರಕಾರದ ಮೂಲಕ ಕಾವೇರಿ ಸಂರಕ್ಷಣೆಗೆ ಅಗತ್ಯ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪುಗೊಳ್ಳಬೇಕಾಗಿದೆ ಎಂದರು. ಕೇಂದ್ರ ಸರ್ಕಾರ ನಮಾಮಿ ಗಂಗೆ ಯೋಜನೆ ರೂಪಿಸಿದ ಮಾದರಿಯಲ್ಲಿ ನಮಾಮಿ ಕಾವೇರಿ ಯೋಜನೆ ಅಗತ್ಯವಾಗಿದೆ ಎಂದರು.

ಕುಶಾಲನಗರ ಆರ್ಯವೈಶ್ಯ ಮಂಡಳಿ ಅಧ್ಯಕ್ಷರು ಹಾಗೂ ಕನ್ನಿಕಾ ಪರಮೇಶ್ವರಿ ದೇವಾಲಯ ಸಮಿತಿಯ ಅಧ್ಯಕ್ಷ ಬಿ.ಎಲ್. ಉದಯಕುಮಾರ್ ಮಾತನಾಡಿ, ಸ್ವಚ್ಛ ಕಾವೇರಿ ಅಭಿಯಾನಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಹಸ್ತಾಂತರಿಸುವ ಹೊಣೆ ನಮ್ಮದಾಗಬೇಕಾಗಿದೆ ಎಂದರು.

ಅರ್ಚಕ ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ಕುಂಕುಮಾರ್ಚನೆ ಅಷ್ಟೋತ್ತರ ನಡೆದು ನಂತರ ಸಾಮೂಹಿಕವಾಗಿ ಮಹಾ ಆರತಿ ಬೆಳಗಲಾಯಿತು. ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷಿö್ಮ ಶ್ರೀನಿವಾಸ್ ನೇತೃತ್ವದಲ್ಲಿ ಸದಸ್ಯರು ಭಜನೆ, ಕೀರ್ತನೆಗಳನ್ನು ಹಾಡಿದರು.

ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಸಂಚಾಲಕ ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಮುಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಒದಗಿಸಿದರು.

ಈ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಜಿ. ಮನು, ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷರುಗಳಾದ ವಿ.ಎನ್. ವಸಂತ್‌ಕುಮಾರ್, ರಾಮದಾಸ್, ವಿಜಯೇಂದ್ರ, ಬಿಜೆಪಿ ನಗರ ಅಧ್ಯಕ್ಷರಾದ ಉಮಾ ಶಂಕರ್, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಮತಾ, ಆರ್ಯವೈಶ್ಯ ಮಂಡಳಿಯ ಪ್ರಮುಖರಾದ ಬಿ.ಎಲ್. ಅಶೋಕ್‌ಕುಮಾರ್, ಎಸ್.ಎನ್. ನಾಗೇಂದ್ರ, ಎ.ಎಸ್. ಸುರೇಶ್ ಬಾಬು, ಆರತಿ ಬಳಗದ ಸದಸ್ಯರಾದ ಡಿ.ಆರ್. ಸೋಮಶೇಖರ್, ಮಂಡುವAಡ ಜೋಯಪ್ಪ, ಪದ್ಮ ಪುರುಷೋತ್ತಮ್, ಮಂಜುನಾಥ್ ಹಾಗೂ ದೇವಾಲಯ ಸಮಿತಿ ಸದಸ್ಯರು ಮತ್ತಿತರರು ಇದ್ದರು.