*ಗೋಣಿಕೊಪ್ಪ, ಸೆ. ೧೨: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಮೈದಾನದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಿತಿಮತಿ ಸರಕಾರಿ ಪ್ರೌಢಶಾಲೆಯ ಬಾಲಕಿಯರು ಖೋ ಖೋ ಕ್ರೀಡೆಯಲ್ಲಿ ಹಾತೂರು ಶಾಲೆಯ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಬಾಲಕಿಯರ ೨೦೦ ಮೀ. ಓಟದ ಸ್ಪರ್ಧೆಯಲ್ಲಿ ಲಕ್ಷಿ÷್ಮ ಪ್ರಥಮ ಸ್ಥಾನ, ೪೦೦ಮೀ ಓಟದಲ್ಲಿ ಜ್ಯೋತಿ ಪ್ರಥಮ, ಲಾಂಗ್ ಜಂಪ್‌ನಲ್ಲಿ ಲಕ್ಷಿ÷್ಮ ಪ್ರಥಮ, ೮೦೦ ಮೀ ಓಟ ಜ್ಯೋತಿ ಪ್ರಥಮ, ಟ್ರಿಪಲ್ ಜಂಪ್ ಸೌಮ್ಯ ಪ್ರಥಮ, ಜಾವಲಿನ್ ಎಸೆತ ಪಲ್ಲವಿ ದ್ವಿತೀಯ, ಲಾಂಗ್ ಜಂಪ್ ಅಂಕಿತ ದ್ವಿತೀಯ, ಶಾಟ್ ಪುಟ್ ಚೈತನ್ಯ ತೃತೀಯ, ೮೦೦ ಮೀ ಓಟ ನೇತ್ರ ತೃತೀಯ, ೫ ಕಿ.ಮೀ ನಡಿಗೆಯಲ್ಲಿ ಪ್ರಜ್ವಲ್ ಪ್ರಥಮ, ಬಾಲಕರ ಡಿಸ್ಕಸ್ ಎಸೆತ ಸುರೇಶ ಪ್ರಥಮ, ಬಾಲಕರ ಲಾಂಗ್ ಜಂಪ್ ಸುರೇಶ ಪ್ರಥಮ, ಜಾವಲಿನ್ ಎಸೆತ ಸಿದ್ದು ದ್ವಿತೀಯ, ೫ ಕಿ.ಮೀ. ಓಟ ಸುಬ್ರಮಣಿ ತೃತೀಯ, ಲಾಂಗ್ ಜಂಪ್ ಮೋಕ್ಷಿತ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ಮಾಹಿತಿ ನೀಡಿದ್ದಾರೆ.