ವೀರಾಜಪೇಟೆ, ಸೆ. ೧೨: ವೀರಾಜಪೇಟೆ ಗಾಂಧಿನಗರ ಗಣಪತಿ ಸೇವಾ ಸಮಿತಿಯಿಂದ ಗಣೇಶ ಉತ್ಸವದ ಸಂದರ್ಭದಲ್ಲಿ ಇಬ್ಬರು ನಿವೃತ್ತ ಯೋಧರನ್ನು ಗುರುತಿಸಿ ಸನ್ಮಾನಿಸಲಾಯಿತು. ದೇಶ ಸೇವೆ ಸಲ್ಲಿಸಿ ನಿವೃತ್ತ ಜೀವನ ನಡೆಸುತ್ತಿರುವ ಮುಂಡಿಯೊಳAಡ ಬೋಪಯ್ಯ, ಕಾಳೆಂಗಡ ಮುದ್ದಪ್ಪ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನಿಸಿ ಮಾತನಾಡಿದ ವಕೀಲ ಡಿ.ಸಿ. ಧ್ರುವ ಭಾರತ ದೇಶದಲ್ಲಿ ಗಣಪತಿ ಉತ್ಸವ ಎರಡು ಶತಮಾನಗಳ ಹಿಂದೆ ಆರಂಭವಾಗಿದೆ. ಭಾರತೀಯರನ್ನು ಒಗ್ಗೂಡಿಸುವ ಉದ್ದೇಶದಿಂದ ಸಾರ್ವಜನಿಕ ಗಣೇಶ ಉತ್ಸವವನ್ನು ಪ್ರಾರಂಭ ಮಾಡಲಾಗಿದೆ. ಆದರೆ ಸಣ್ಣಪುಟ್ಟ ವೈಷಮ್ಯಗಳಿಂದ ಸಂಘಟನೆಗಳ ನಡುವೆ ಬಿರುಕು ಬರಬಾರದು ಎಂದರು.
ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷÀ ರಾಜೇಶ್ ಪದ್ಮನಾಭ ಮಾತನಾಡು ತ್ತಾ, ಯೋಧರನ್ನು ಸನ್ಮಾನಿಸಿದ ಗಣಪತಿ ಸೇವಾ ಸಮಿತಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಸುಶ್ಮಿತಾ ಮಹೇಶ್, ಕಾಶಿ ಕುಶಾಲಪ್ಪ, ಮಂಡೇಟಿರ ಅನಿಲ್ ಅಯ್ಯಪ್ಪ, ಉತ್ಸವ ಸಮಿತಿಯ ಮಂಜುನಾಥ್ ಪಿ.ಎ, ರಂಜನ್ ನಾಯ್ಡು ಉಪಸ್ಥಿತರಿದ್ದರು.