ಮಡಿಕೇರಿ, ಸೆ. ೧೨: ಮರಂದೋಡ ಗ್ರಾಮದ ಚೋಯಮಾಡಂಡ ಪಾರ್ಶ ಪೂಣಚ್ಚ ಅವರ ಗದ್ದೆಯಲ್ಲಿ ೪ ಆನೆಗಳ ಹಿಂಡು ಭತ್ತದ ನಾಟಿಯನ್ನು ಮೆಟ್ಟಿ ತಿಂದು ಹಾಕಿದೆ. ಇದರಿಂದ ಮಾಲೀಕರಿಗೆ ನಷ್ಟ ಸಂಭವಿಸಿದೆ.
ಪಂಚಾಯಿತಿ ಸದಸ್ಯ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಭೇಟಿ ನೀಡಿ, ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಈ ಆನೆಗಳ ಉಪಟಳದಿಂದಾಗಿ ಗ್ರಾಮಸ್ಥರು ತೋಟ ಮತ್ತು ಗದ್ದೆಯನ್ನು ನಾಟಿ ಮಾಡದೆ ಹಾಗೇ ಬಿಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.