*ಗೋಣಿಕೊಪ್ಪ, ಸೆ. ೧೧: ತಿತಿಮತಿ ಶ್ರೀ ರಾಮ ಮಂದಿರ ಮತ್ತು ತಾಲೂಕು ಬಿಜೆಪಿ ಎಸ್.ಸಿ ಮೋರ್ಚಾದ ವತಿಯಿಂದ ಗೌರಿ ಗಣೇಶ ಉತ್ಸವ ಹಾಗೂ ಸ್ವಾತಂತ್ರ÷್ಯ ಭಾರತ ಅಮೃತ ಮಹೋತ್ಸವದ ಅಂಗವಾಗಿ ತಿತಿಮತಿ ವ್ಯಾಪ್ತಿಯ ಮಾಜಿ ಸೈನಿಕರುಗಳನ್ನು ಸನ್ಮಾನಿಸಲಾಯಿತು.
ತಿತಿಮತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಾರ್ವಜನಿಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ಹಗ್ಗಜಗ್ಗಾಟ, ವಾಲಿಬಾಲ್, ಓಟದ ಸ್ಪರ್ಧೆಗಳ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ೧೨ಕ್ಕೂ ಹೆಚ್ಚು ಮಾಜಿ ಸೈನಿಕರನ್ನು ಗೌರವಿಸಲಾಯಿತು.
ಕ್ರೀಡಾಕೂಟದ ವಿಜೇತರಿಗೆ ಮುಖ್ಯ ಅತಿಥಿ ರಾಷ್ಟಿçÃಯ ಸ್ವಯಂ ಸೇವಾ ಸಂಘದ ಜಿಲ್ಲಾ ಸಂಘ ಚಾಲಕ ಚಕ್ಕೇರ ಮನು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪುö್ಪಡೀರ ರಾಮಕೃಷ್ಣ, ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಚೆಪುö್ಪಡೀರ ಕಾರ್ಯಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವಿಜುಸುಬ್ರಮಣಿ, ಉದ್ಯಮಿ ವಿಜೇಶ್, ಗ್ರಾಮ ಪಂಚಾಯಿತಿ ಸದಸ್ಯ ಎನ್.ಎನ್. ಅನೂಪ್ಕುಮಾರ್, ಎಸ್.ಸಿ ಮೋರ್ಚಾ ಅಧ್ಯಕ್ಷ ಶಶಿ, ಕಾರ್ಯದರ್ಶಿಗಳಾದ ಹೆಚ್.ಆರ್. ಜ್ಯೋತಿ, ಸುಶೀಲಾ, ಹಿರಿಯರಾದ ಎಂ.ಎನ್. ಕೃಷ್ಣ, ಪಾಲೇಂಗಡ ಮನು ನಂಜಪ್ಪ ಬಹುಮಾನ ವಿತರಿಸಿದರು. ಉತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.