ಸುಂಟಿಕೊಪ್ಪ, ಸೆ. ೧೧: ಇಲ್ಲಿಗೆ ಸಮೀಪದ ಕೊಡಗರ ಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಚೌಡಿ ಕಾಡು ತೋಟದಲ್ಲಿ ಕಾಡಾನೆಗಳ ದಾಳಿಯಿಂದ ಅಪಾರ ಬೆಳೆ ನಷ್ಟವಾಗಿದೆ.

ಹರೀಶ್ ಪೈ ಅವರಿಗೆ ಸೇರಿದ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಬಾಳೆ, ಅಡಿಕೆ, ಕಾಳುಮೆಣಸು ಗಿಡಗಳನ್ನು ಧ್ವಂಸಗೊಳಿಸಿದ್ದು ನಂತರ ಲೈನ್ ಮನೆಯ ಜಗುಲಿಯನ್ನು ಕೋರೆಯಿಂದ ತಿವಿದು ಹಾನಿಪಡಿಸಿದೆ. ಈ ಭಾಗದಲ್ಲಿ ನಿರಂತರವಾಗಿ ಸುತ್ತಮುತ್ತಲಿನ ತೋಟಗಳಲ್ಲಿ ಹಗಲು ವೇಳೆಯಲ್ಲಿಯೇ ಆನೆಗಳು ಕಂಡುಬರುತ್ತಿದ್ದು, ಈ ಭಾಗಗಳಲ್ಲಿ ಸಾರ್ವಜನಿಕರು ಮನೆಯಿಂದ ಹೊರ ಬರುವುದಕ್ಕೂ ಭಯ ಪಡುವಂತಾಗಿ ಜೀವ ಭಯದಿಂದ ಜೀವನ ಮಾಡುವಂತಾಗಿದೆ. ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಆನೆಗಳನ್ನು ಅರಣ್ಯಗಳಿಗೆ ಓಡಿಸುವಂತೆ ತೋಟದ ಮಾಲೀಕರು ಸಾರ್ವಜನಿಕರು ಒತ್ತಾಯಿಸಿದ್ದಾರೆ.